ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ ಜ್ಯೋತಿ ನಾಯ್ಕ ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ. ಈ ಪರಿಸರ […]

ಗರಿ ಹುಟ್ಟುವ ಗಳಿಗೆ

ಗರಿ ಹುಟ್ಟುವ ಗಳಿಗೆ ಫಾಲ್ಗುಣ ಗೌಡ ಅಚವೆ ರಾತ್ರಿಯಿಡೀ ಹೊಯ್ದ ಮಳೆಗೆಹದಗೊಂಡ ಹರೆಯದ ಬೆದೆಗೆಮುದನೀಡಿದ ನರಳುವಿಕೆಯಲ್ಲಿಇನ್ನೂ ಎದ್ದಿಲ್ಲ ಇಳೆ ಬೇಸಿಗೆಗೆ ಧಿಕ್ಕಾರ ಕೂಗಿದಮರಜಿರಲೆಗಳ ಅನಿರ್ದಿಷ್ಟಾವಧಿಯನಿರಸನ ಅಂತ್ಯವಾಗಿದೆಹಣ್ಣಿನರಸ ನೀಡಲು ಮೋಡಗಳುಧರೆಗಿಳಿದಿವೆ. ಮತ್ತೆ ಮತ್ತೆ ಬೀಳುವ ಮಳೆಅವಳ ನೆನಪುಗಳ ಚಿಗುರಿಸಿಬದುಕುವ ಆಸೆ ಮೂಡಿಸಿದೆಹುಲ್ಲು ಕಡ್ಡಿಗೆ ಜೀವ ಬಂದಂತೆ! ಹೊಯ್ಯುವ ಜುಮುರು ಮಳೆಗೆಅದುರುವ ಮರದ ಎಲೆಗಳುಮೋಡಗಳಿಗೆ ಸಂತಸದ ಸಂದೇಶರವಾನಿಸಿವೆ. ಧರೆಗಿಳಿದ ಮಳೆಗೆ ಬೆರಗಾದ ಕಪ್ಪೆಗಳುಕೂಗಿ ಕೂಗಿ ಕೂಗಿಖುಷಿಗೊಂಡು ಬೆದೆಗೊಂಡಿವೆ. ಹೊಳೆ ಹಳ್ಳಗಳಲ್ಲಿಯ ಮರಿಗಪ್ಪೆಗಳುಬಾಲ ಕಳಚಿ ಮೂಡಿ ಬಂದರೆಕ್ಕೆಗಳ ಕಂಡುಛಂಗನೆ ಕುಣಿದು ಕುಪ್ಪಳಿಸಿವೆ. […]

ಸ್ವಾರ್ಥಿಯಾಗುತಿದ್ದೇನೆ.

ಸ್ವಾರ್ಥಿಯಾಗುತಿದ್ದೇನೆ. ಜ್ಯೋತಿ ಡಿ.ಬೊಮ್ಮಾ ಆಗ ಬದುಕುತಿದ್ದೆ ಜೀವದುಂಬಿ ,ನಟಿಸುತ್ತಿರಲಿಲ್ಲಈಗಲೂ ಬದುಕುತಿದ್ದೆನೆ , ನಟಿಸುತ್ತ ಆಗ ಮಾತಾಡುತಿದ್ದೆ ಮನಸ್ಸು ಬಿಚ್ಚಿನಿರ್ಗಳವಾಗಿಈಗಲೂ ಮಾತಾಡುತ್ತೆನೆ ಅಳೆದು ತೂಗಿಒಂದೊಂದೆ ಆಗ ಪ್ರೀತಿಸುತಿದ್ದೆ ಎಲ್ಲರನ್ನೂ ನಿಸ್ವಾರ್ಥದಿಂದಈಗಲೂ ಪ್ರೀತಿಸುತ್ತೆನೆ ಅಥವಾ ಪ್ರೀತಿಸುವಂತೆನಾಟಕವಾಡುತ್ತೆನೆ ಆಗ ಸ್ಪಂದಿಸುತಿದ್ದೆ ಥಟ್ಟನೆ ,ಯಾವಪ್ರತಿಫಲಾಪೇಕ್ಷೆ ಇಲ್ಲದೆ..ಈಗ ಅವರಿಂದಾಗುವ ಲಾಭ ನಷ್ಟ ಗಳುಅವಲಂಬಿಸಿರುತ್ತದೆ ನನ್ನ ಸಹಾಯಹಸ್ತ ಆಗ ನಗುತಿದ್ದೆ ನಿಷ್ಕಲ್ಮಷವಾಗಿ ಮನದುಂಬಿಈಗಲೂ ನಗುತ್ತೆನೆ ಹಿಂದೆಮುಂದೆ ಕೊಂಚ ತುಟಿಯರಳಿಸಿ ಆಗ ಹಾತೊರೆಯುತಿತ್ತು ಮನಸ್ಸುಎಲ್ಲರೊಳಗೊಂದಾಗಿ ಬೆರೆಯಲು ನಲಿಯಲುಈಗ ಹುದುಗುತ್ತೆನೆ ಒಂಟಿತನದ ಚಿಪ್ಪಿನಲ್ಲಿನನ್ನನ್ನು ನಾನು ನಿರ್ಬಂಧಿಸಿಕೊಂಡು ಈಗ ಅವರು […]

ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು ಮೂಲ ರಚನೆ – ವೈದೇಹಿ ಗಣೇಶ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ವೃತ್ತಿ -ಪ್ರವೃತ್ತಿಜೀವನದ ಬಂಡಿಗೆಚಕ್ರಗಳಂತೆವೃತ್ತಿಗೊ ನಿವೃತ್ತತೆಪ್ರವೃತ್ತಿ ಸಾರ್ಥಕತೆ Profession – dispositionTwo wheels of chariotCalled the lifeRetirement ceases oneAccomplishment graces the other. ಬೇವು ಬಾಗಿತುಸಂಪಿಗೆಯಾಸರೆಗೆ,ಪ್ರಕೃತಿ ಸಾರಿಹೇಳಿತು, ಒಲವಿಗೆಗುಣ ಗಣತಿ ಬೇಕೇ? Bitter neem lentRecourse to fragrant magnoliaThe nature proclaimsFor the endearmentNot to census the virtues ಕರ್ಮದ ಆಟಕಾಲ ಕಲಿಸೋ ಪಾಠಸುಕರ್ಮಗಳಅರಿತು ನಡೆದರೆಗೆದ್ದೆ ಜೀವನದಾಟ […]

ಬುದ್ಧ ಬುರಡಿ

ಬುದ್ಧ ಬುರಡಿ ಎ.ಎಸ್. ಮಕಾನದಾರ ನನ್ನ ಮೊಹಲ್ಲಾದಮನೆ ಮನಗಳಲ್ಲೂಬುದ್ಧ ಬೆಳಕಿನ ಬುರಡಿ ಅಂಗಾತ ಬಿದ್ದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂಅಲ್ಲಾಹನಿಗೆ ಸ್ಮರಿಸಲೂಉದ್ದಾಣಿನ ಬೆOಕಿ ನಂದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂವಚನ ಸಾರಕೆ ಗೆದ್ದಿಲು ಹಿಡಿದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲಿಬೇವರಘಾಟು ನಾಶವಾಗಿಅತ್ತರಿನ ಘಮಲು ಸುತ್ತಲೂ ಹರಡಿದೆ ನನ್ನ ಮೊಹಲ್ಲಾದಲ್ಲಿತುoಬಿರುವ ನೆತ್ತರಗೇರಿಹೂಳೆತ್ತಲು ಪಂಚವಾರ್ಷಿಕ ಯೋಜನೆ ರೂಪುಗೊOಡಿದೆ *********

ಒಲವಿನೋಲೆ

ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು […]

ಇಕೊ ಕ್ಲಬ್ ಗಳ ಅನುಷ್ಠಾನ

ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ […]

ಕಾವ್ಯಯಾನ

ಸೋಂಕು ವೀಣಾ ರಮೇಶ್ ನಾ ನಡೆದ ಹೂಗಳಹಾದಿಯಲಿ ಯಾಕೋಚುಚ್ಚುತ್ತಿದೆನೋವಿನ ಮುಳ್ಳುಗಳುನನಗೊಂದು ಶಂಕೆಕಾಡಿದೆ ಹಪಹಪಿಸುವ ಪ್ರೀತಿಗೆನನ್ನದೇ ದೃಷ್ಟಿಯ ಸೋಂಕುತಗಲಿರಬಹುದುನನ್ನ ಭಾವನೆಗಳು ಸುರಿಸುವ ನಿಟ್ಟುಸಿರಿಗೆನೆಮ್ಮದಿಯಮುಖ ಗವಸುಬೇಕಿರಬಹುದು ಹೃದಯಕ್ಕೂ ಮನಸಿನಯೋಚನೆಗಳಿಗೂಅಂತರ ಕಾಯುವುದುಬೇಕಿದೆ. ಈಗಒಂದಷ್ಟು ದಿನಗಳುಮೌನದೊಳಗೆ ಕಾಮನೆಗಳ ಬಂಧಿಸಿಎದೆಯ ಗೂಡೊಳಗೆಕಾವಲಿರಿಸಿ ಒಂದಷ್ಟು ಕಾಲಮನಸ್ಸು ಕ್ವಾರಂಟೈನ್ಆದರೆ ಸಾಕಿತ್ತುಆಗಲಾದ್ರೂ ಕಾಡುವವೈರಸ್ಗಳುಕಡಿಮೆಯಾಗಿಸೋಂಕು ಬಾರದೆ ಇರಬಹುದು ************

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! […]

ಘಾಚರ್ ಘೋಚರ್

ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. […]

Back To Top