ಸೋಂಕು
ವೀಣಾ ರಮೇಶ್
ನಾ ನಡೆದ ಹೂಗಳ
ಹಾದಿಯಲಿ ಯಾಕೋ
ಚುಚ್ಚುತ್ತಿದೆ
ನೋವಿನ ಮುಳ್ಳುಗಳು
ನನಗೊಂದು ಶಂಕೆ
ಕಾಡಿದೆ
ಹಪಹಪಿಸುವ ಪ್ರೀತಿಗೆ
ನನ್ನದೇ ದೃಷ್ಟಿಯ ಸೋಂಕು
ತಗಲಿರಬಹುದು
ನನ್ನ ಭಾವನೆಗಳು ಸುರಿಸುವ ನಿಟ್ಟುಸಿರಿಗೆ
ನೆಮ್ಮದಿಯ
ಮುಖ ಗವಸು
ಬೇಕಿರಬಹುದು
ಹೃದಯಕ್ಕೂ ಮನಸಿನ
ಯೋಚನೆಗಳಿಗೂ
ಅಂತರ ಕಾಯುವುದು
ಬೇಕಿದೆ. ಈಗ
ಒಂದಷ್ಟು ದಿನಗಳು
ಮೌನದೊಳಗೆ ಕಾಮನೆಗಳ ಬಂಧಿಸಿ
ಎದೆಯ ಗೂಡೊಳಗೆ
ಕಾವಲಿರಿಸಿ
ಒಂದಷ್ಟು ಕಾಲ
ಮನಸ್ಸು ಕ್ವಾರಂಟೈನ್
ಆದರೆ ಸಾಕಿತ್ತು
ಆಗಲಾದ್ರೂ ಕಾಡುವ
ವೈರಸ್ಗಳು
ಕಡಿಮೆಯಾಗಿ
ಸೋಂಕು ಬಾರದೆ ಇರಬಹುದು
************
ಮನ ಮುಟ್ಟಿತು ಕವಿತೆ
ಧನ್ಯವಾದಗಳು ಮೇಡಂ