ಬುದ್ಧ ಬುರಡಿ
ಎ.ಎಸ್. ಮಕಾನದಾರ
ನನ್ನ ಮೊಹಲ್ಲಾದ
ಮನೆ ಮನಗಳಲ್ಲೂ
ಬುದ್ಧ ಬೆಳಕಿನ ಬುರಡಿ ಅಂಗಾತ ಬಿದ್ದಿದೆ
ನನ್ನ ಮೊಹಲ್ಲಾದ
ಮನೆ ಮನಗಳಲ್ಲೂ
ಅಲ್ಲಾಹನಿಗೆ ಸ್ಮರಿಸಲೂ
ಉದ್ದಾಣಿನ ಬೆOಕಿ ನಂದಿದೆ
ನನ್ನ ಮೊಹಲ್ಲಾದ
ಮನೆ ಮನಗಳಲ್ಲೂ
ವಚನ ಸಾರಕೆ ಗೆದ್ದಿಲು ಹಿಡಿದಿದೆ
ನನ್ನ ಮೊಹಲ್ಲಾದ
ಮನೆ ಮನಗಳಲ್ಲಿ
ಬೇವರಘಾಟು ನಾಶವಾಗಿ
ಅತ್ತರಿನ ಘಮಲು ಸುತ್ತಲೂ ಹರಡಿದೆ
ನನ್ನ ಮೊಹಲ್ಲಾದಲ್ಲಿ
ತುoಬಿರುವ ನೆತ್ತರಗೇರಿ
ಹೂಳೆತ್ತಲು ಪಂಚವಾರ್ಷಿಕ ಯೋಜನೆ ರೂಪುಗೊOಡಿದೆ
*********
ಚಂದಿದೆ ಕವಿತೆ.
ಸೂಪರ್ ಸರ್
Nice sir.. Buddham Sharanam Gachami , Dhammam Sharanam Gachami , Sangamm Sharanam Gachami