ಕಥಾಗುಚ್ಛ

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ […]

ಪುಸ್ತಕ ಬಿಡುಗಡೆಯ ಸಂಭ್ರಮ

ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ

ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು […]

ಕಾವ್ಯಯಾನ

ಬಿದಲೋಟಿ ರಂಗನಾಥ್ ಮೌನದ ಗೆರೆಯ ನಡುವೆ.. ಒಡಲುರಿಯ ಕನಸೊಂದು ಚುಕ್ಕಿಗಳತ್ತ ಮುಖ ಮಾಡಿ ಭಾವದಗೂಡಿನಲಿ ಅರಳಿ ಮುತ್ತಾಗಿ ಸಮುದ್ರದ ಮೇಲೆ ಬರೆದ ಕವನದ ಕರುಳ ತಂತಿಯಲಿ ಸುತ್ತಿಕೊಂಡ ಸಂಬಂಧ ಕಿತ್ತಾಡಿ ತಿನ್ನಲಿಲ್ಲ ಒಟ್ಟಾಗಿ ಬೆಳೆಯಲಿಲ್ಲ ಅತ್ತು ಕರೆದು ಕಣ್ಣೀರ ಕಡೆಯಲಿಲ್ಲ ಅದೆಂಥದ್ದೋ ಭಾವದ ಸೆಳೆತ ಹತ್ತಿರ ನಿಂತೆ ಹಾಡುತ್ತಿದೆ ಕಣ್ಣ ಕನ್ನಡಿಯ ಬಿಂಬದಲಿ ಕಟ್ಟಿದ ಕನಸುಗಳ ಕಂತೆ ಬಿಚ್ಚಿ ನೋಡುವ ಬಯಲ ಕುದುರೆ ಈ ಜಗದ ಮಿಣುಕು ಬೆಳಕು ಎಲ್ಲೋ ನಿಂತು ನೋಡಿ ಬೆಸೆದ ಅನುಬಂಧ ಮೀಟುತ್ತಿದೆ […]

ಮಹಿಳೆ

ನಾನು ಹೆಣ್ಣೆಂಬ ಹೆಮ್ಮೆ ನನಗಿದೆ! ಐಶ್ವರ್ಯ .ಎಲ್ ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ‌ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ. ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, […]

ಮಕ್ಕಳ ಸಾಹಿತ್ಯ

ಆಯ್ಕೆ ಅವ್ಯಕ್ತ ನನ್ನಹೆಚ್ಚಿನ ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು) ಆಯ್ಕೆ ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ”, “ಇನ್ಯಾವತ್ತೂ ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ “ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ ! ನಾನುಸ್ವರ […]

ಕಾಡುವ ಹಾಡು!

ಒಲವೇ ಜೀವನ ಸಾಕ್ಷಾತ್ಕಾರ ಸುಜಾತ ರವೀಶ್ ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ ಚಿತ್ರ ಸಾಕ್ಷಾತ್ಕಾರ (೧೯೭೧) ಅಭಿನಯ ರಾಜಕುಮಾರ್ ಜಮುನಾ ಪೃಥ್ವಿರಾಜ್ ಕಪೂರ್ ಸಾಹಿತ್ಯ ಕೆ ಪ್ರಭಾಕರ ಶಾಸ್ತ್ರಿ ಸಂಗೀತ ಎಂ ರಂಗರಾವ್ . ಚಿತ್ರದ ನಾಯಕ ನಾಯಕಿ ಇನ್ನೇನು ಮದುವೆಯಾಗಲಿರುವವರು. ಅವರ ಮನದ ತುಂಬಾ ಪ್ರೀತಿಯ ಕನಸು ತುಂಬಿರುತ್ತದೆ. ಕಂಡದ್ದೆಲ್ಲ ಪ್ರೇಮದ ಪ್ರತಿರೂಪ ಆಗಿರುತ್ತದೆ .ಅಂತಹ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಕನ್ನಡದ ಚಿತ್ರ ರಸಿಕರ ಮನಸೂರೆಗೊಂಡಿದ್ದು ಆಶ್ಚರ್ಯವಲ್ಲ. ಪ್ರೇಮಿಗಳ ಪಾಲಿನ ಅಮರ […]

ಕಾವ್ಯಯಾನ

ಬದುಕೆಂಬ ವಂಚಕ! ಸೌಜನ್ಯ ದತ್ತರಾಜ ಪರಿಚಿತರಾಗುತ್ತಾ ಆಗುತ್ತಾ ಪರಕೀಯತೆಯ ಭಾವವೇ ಹೆಚ್ಚಾಗಿ ಆಗೀಗ ಪೆಚ್ಚಾಗಿ ಕಾಡುತಿದೆ ಹತ್ತಿರವಾದಷ್ಟೂ ಒಬ್ಬರನೊಬ್ಬರು ದೂರುತ್ತಲೇ ದೂರವಾಗುತ್ತಿರುವ ವಿಪರ್ಯಾಸ ವಿಚಲಿತರನ್ನಾಗಿಸುತಿದೆ ಏಕೆ…. ಏನಾಯ್ತು……ಹೇಗಾಯ್ತು ಪ್ರಶ್ನಿಸಿಕೊಳ್ಳಲೇ ಭಯವಾಗುತ್ತಿದೆ ಅನುಮಾನದ ಹೆಡೆಯೊಂದು ಸದ್ದಿಲ್ಲದೆ ಆಗಾಗ ತಲೆಯೆತ್ತುತಿದೆ ಆಡಬಾರದ ಹೇಳಬಾರದ ಮಾತುಗಳನೆಲ್ಲಾ ಆಡುವ ಬಾಯಿ ಇತ್ತೀಚೆಗೆ ಇಬ್ಬದಿಯಲೂ ಬಿಗಿಯುವ ಇಕ್ಕಳದಂತಾಗಿದೆ ಇರಿಯುತ್ತಲಿದೆ ಮನದಲೊಂದು ಮುಗಿಯದ ಭಾವ ಹೊಂದಾಣಿಕೆ ಆಗದ ಸ್ವಭಾವ ಒಗ್ಗಿಕೊಳ್ಳಲಾರದೆ ಒದ್ದಾಡುತಿರುವ ಜೀವ ಪ್ರೀತಿ ಸ್ನೇಹಗಳ ಹೆಸರಲ್ಲಿ ಪ್ರತಿದಿನವೂ ನಡೆಯುತಿವೆ ಹೊಸ ಹೊಸ ನಾಟಕ ಗೆಲ್ಲುವುದು […]

ಕಾವ್ಯಯಾನ

ನಮ್ಮಳಗೊಬ್ಬ ಸಂತೆಬೆನ್ನೂರು ಫೈಜ್ನಟ್ರಾಜ್ ಮನಸಲ್ಲಿ ಕೋಟಿ ಕೋಟಿ ಯುದ್ಧ  ಸಾಮಗ್ರಿಗಳನ್ನು ಹೊತ್ತು ಕಡಲ ದಡದಿ ನೆಮ್ಮದಿ ಹುಡುಕ್ತಿದ್ದ! * ಎದುರಿಗೇ ಎಲ್ಲಾ ಐತೆ ಏನೋ ಮಿಸ್ಸಾಗಿದೆ ಅಂತ ಎದ್ದು ನಡೆದ ಇದ್ದುದನ್ನ ಬಿಟ್ಟು! * ಕಣ್ಣೆದುರು ಇದ್ರೆ ಕಣ್ ಕೆಂಪು..ಉರಿ ಉರಿ ಮರೆಯಾದ್ರೆ ಕಳ್ಕಂಡೋರ ತರ ಅಂಡ್ ಸುಟ್ ಬೆಕ್ಕು! * ಹಾಡ್ತಾನೆ,ಕುಣಿತಾನೆ,ನಗ್ತಾನೆ,ಅಳ್ತನೆ ಎಲ್ಲಾ ಸರಿ ಮತ್ ಎದುರಿರೋ ಬಳಿ ಏನೈತ್ರಿ ಈ ಬಾಳ್ನಾಗೆ….ರಾಗ * ನಾಯಿ ಬಾಲ ನೇರ ಮಾಡಬಹುದಂತೆ ಹೆಂಗೋ ನಮ್ಮೊಳಗಿದ್ದಾನಲ್ಲಾ ಅವನ್ನ ಊಹ್ಞುಂ….ಗುಂಡ್ಕಲ್ಲದು!!

ಶಾನಿಯ ಡೆಸ್ಕಿನಿಂದ…….

ನನ್ನ ಬಾಲ್ಯದ ದೀಪಾವಳಿ ಚಂದ್ರಾವತಿ ಬಡ್ಡಡ್ಕ ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.) ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ […]

Back To Top