ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್…

ಒಂದು–

ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು.

ಎರಡು–

ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು.

ಮೂರು–

ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು ವರ್ಷಪೂರ್ತಿ ತುಂಬಿ ತುಳುಕುತಿತ್ತು. ನದಿಗೆ ಅಡ್ಡಲಾಗಿ ನೀರನ್ನು ಶೇಖರಿಸಲು ಅಲ್ಲೊಂದು ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಕೈಗೊಂಡರು.ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿದರು. ಈಗ ಅಲ್ಲಿ ನೀರಿನ ಸಂಗ್ರಹಣೆಯಿಲ್ಲದೆ ನದಿ ಬರಿದಾಗಿದೆ..

ನಾಲ್ಕು–

ಜನ ಅವನನ್ನು ಹಿಯಾಳಿಸುತಿದ್ದರು. ನೀರೂಪದ್ರವಿ ಎಂದು ಟೀಕಿಸುತಿದ್ದರು. ಸತ್ತರೆ ವಾಸಿ ಎನ್ನುತಿದ್ದರು. ಆದರೆ ಆ ವ್ಯಕ್ತಿ ಸಾಯುವಾಗ ಕಣ್ಣು,ಕಿಡ್ನಿಗಳನ್ನು ದಾನ ಮಾಡಿ ಪ್ರಾಣ ಬಿಟ್ಟ

ಐದು–

ಅವರಿಬ್ಬರು ಶಿಕ್ಷಣದಲ್ಲಿ ಮ್ಯಾನೆಜ್ಮೆಂಟ್ ಪದವಿ ಪಡೆದಿದ್ದರು. ಹಾಗಾಗಿ ಅವರು ಸಂಸಾರದಲ್ಲಿ ಹೊಂದಿಕೊಳ್ಳುತ್ತಾರೆಂದು ಮದುವೆ ಮಾಡಲಾಗಿತ್ತು.ಆದರೆ ದಾಂಪಥ್ಯಜೀವನ ನಿರ್ವಹಣೆಯಲ್ಲಿ ಅವರು ಸೋತು ವಿಚ್ಛೇದನ ಪಡೆದು ದೂರವಾದರು.

3 thoughts on “ನ್ಯಾನೊ ಕಥೆಗಳು

  1. ಪ್ರತಿಯೊಂದು ಸಾಲುಗಳು ಸತ್ಯ ಸು೦ದರ.. ..
    ಅರ್ಥಗರ್ಭಿತ.. .

Leave a Reply

Back To Top