ಕಾವ್ಯಯಾನ
ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, […]
ನಾನು ಓದಿದ ಪುಸ್ತಕ
ನಕ್ಷತ್ರ ಸೂಕ್ತ ಡಾಕ್ಟರ್ ಅನಸೂಯಾದೇವಿ ನಕ್ಷತ್ರ ಸೂಕ್ತ ಲೇಖಕಿ ಡಾಕ್ಟರ್ ಅನಸೂಯಾದೇವಿ ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯ ಮೊದಲ ಮುದ್ರಣ ೨೦೧೪ ಬೆಲೆ ರೂ.೧೫೦/ ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ […]
ಕಾವ್ಯಯಾನ
ಮುಗಿಯದ ಹಾಡು ಎನ್.ಶೈಲಜಾ ಹಾಸನ ಇಡುವ ಹೆಜ್ಜೆ ಜೊತೆ ಜೊತೆಹೆಜ್ಜೆ ಕೂಡಿದ ಪಲುಕುಪರಿ ಪರಿಯ ಕುಲುಕುನಾನೆಂತು ಬಣ್ಣಿಸಲಿನೀ ಒಲಿದೆ,ನನ್ನ ಒಲಿಸಿದೆಬೆಸೆದಿದೆ ಬಂಧನಮನವೀಗ ಹೂ ನಂದನ ಒಲವ ಬಂಧನದಿ ಸುಖವಿದೆಸಿರಿಯಿದೆ,ಮಧುವಿದೆ,ಸವಿಯಿದೆನಡೆದ ಹಾದಿಯಲ್ಲಿಬಣ್ಣಗಳ ಚೆಲುವಿದೆ ಮೌನದ ಹಾಡಲಿನೂರು ಕವಿತೆಕಣ್ಣ ಬೆಳಕಲಿ ಪ್ರೇಮದಣತೆನೋಟದಂಚಿನಲಿಕೋರೈಸುವ ಮಿಂಚುನೋಟದಾಳದಲಿ ನಲ್ಮೆಯ ಜಲಪಾತತುಂಟ ನಗೆಯಲಿಸಾವಿರ ಪುಳಕ ಕನಸುಗಳ ಸಾಕಾರಎದೆಯ ಗೂಡಲಿನಿನ್ನೊಲುಮೆಯಹುಚ್ಚು ನದಿಯಲಿಕೊಚ್ಚಿ ಹೋದವಳುತೇಲಿ ತೇಲಿ ತೇಲುತಲಿಇರುವ ಹುಚ್ಚು ಖೋಡಿಮನಸ್ಸು ನನ್ನದು ಮುಟ್ಟಲಾಗದು,ತಟ್ಟಲಾಗದುಮೆಟ್ಟಲಾಗದುಮುಪ್ಪಾನು ಮುಪ್ಪಿಗೆಒಲುಮೆಯ ಮನಸಿಗೆಗೆಲುವಿನ ಸೊಗಸು ದಾಂಪತ್ಯ ಗೀತೆಗೆಅನುರಾಗದ ಪಲ್ಲವಿಶೃಂಗಾರದ ಅನುಪಲ್ಲವಿಮುಗಿಯದ ಹಾಡು ಇದು *******
ನಾನು ಓದಿದ ಪುಸ್ತಕ
ನೂರ್ ಇನಾಯತ್ ಖಾನ್ ಚಂದ್ರಶೇಖರ್ ಮಂಡೆಕೋಲು ಮೂರು ದಿನಗಳ ಕಾಲ ನನ್ನನು ಈ ಕೊರೋನಾ ರಜೆ ‘ನೂರ್ ಇನಾಯತ್ ಖಾನ್’ ನಾಝಿ ಹೋರಾಟದ ಆರ್ದ್ರ ಕಾವ್ಯವನ್ನು ಓದಲು ಹಚ್ಚಿತು. ನನ್ನ ಓದಿನ ಮಿತಿಯಲ್ಲಿ ನಾನು ಗ್ರಹಿಸಿದ ಕಿರು ಬರಹವಿದು. ಧರ್ಮ ಹಾಗೂ ಜನಾಂಗ ಶ್ರೇಷ್ಠತೆಯ ಭ್ರಷ್ಠ ಸಿಂಡ್ರೋಮ್ ಇಂದು ನಿನ್ನೆಯದಲ್ಲ.ನಾಳೆ ಹೋಗುತ್ತದೆಂಬ ಖಾತ್ರಿಯೂ ಇಲ್ಲ;ಆ ಮಾತು ಬೇರೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಝಿಗಳ ನಡೆಸಿದ ಮಾರಣ ಹೋಮಕ್ಕೆ ಯಾವತ್ತೂ ಕ್ಷಮೆ ಇಲ್ಲ.ಅತ್ಯಾಚಾರಕ್ಕೊಳಪಡಿಸಿ ಸಜೀವ ದಹಿಸುವ ಅವರ ಕ್ರೌರ್ಯವೊಂದು […]
ನಾ ಮೆಚ್ಚಿದ ಪುಸ್ತಕ
ಯಾದ್ ವಶೇಮ್ ನೇಮಿಚಂದ್ರ ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ […]
ನಾನು ಓದಿದ ಕಾದಂಬರಿ
ಮಲೆಗಳಲ್ಲಿ ಮದುಮಗಳು ಕುವೆಂಪು ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ “ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು […]
ಕಾವ್ಯಯಾನ
ಕನಸಿನೂರಿನ ಅಪ್ಪ ಐಶ್ವರ್ಯ ಎಲ್.. ಬೆಳಕ ಹೊತ್ತು ಬಂದ ಸೂರ್ಯನೂ ಹೋಗುವ ಹೊತ್ತಾಯಿತು ಹೊರಗೆ ಹೋದ ಅಪ್ಪನು ಬಂದಾನೂ, ಕೈ ತುಂಬ ಬೊಂಬೆ ತಿಂಡಿಗಳ ತಂದಾನೂ ಅವರಿವರ ಮನೆಯ ಅಪ್ಪಂದಿರಂತೆಯೇ ನನ್ನಪ್ಪನೆಂದು ಕಣ್ಣಳತೆಗೆ ಎಟುಕುವವರೆಗೂ ಮನೆಯ ಮುಂದಿನ ಕಂಬವನೇರಿ ಕಾದು ಕುಳಿತೆ, ಬೆಳೆದು ಬುದ್ದಿಬರುವವರೆಗೆ…… ಏರಿದ ಕಂಬಕ್ಕಾದರೂ ಅರಿವಾಗಿರಬಹುದು ಅಪ್ಪನೆಂಬ ಕನಸು ಬೇರೂರಿದ್ದು ನನ್ನೊಳಗೆ, ಅರಿವಾಗಲೇ ಇಲ್ಲ ದೇವರಿಗೆ, ಅಪ್ಪನ ಕರೆದೊಯ್ದೆಬಿಟ್ಟಿದ್ದನು ನಂಗೆ ಬುದ್ದಿಬರುವುದರೊಳಗೆ………. ಜಡಕು ಕೂದಲಿಗೆ ಜುಟ್ಟುಕಟ್ಟಿ, ಕಪ್ಪು ಕಾಡಿಗೆಯಲಿ ಕಾಸಗಲದ ಬೊಟ್ಟಿಟ್ಟು ನನ್ನಿಷ್ಟದ ಫ್ರಾಕನ್ನೆ […]
ಕಾವ್ಯಯಾನ
ಜರೂರು ಬಂದೊದಗಿದೆ ಗೌರಿ.ಚಂದ್ರಕೇಸರಿ ದೇವ ಮಾನವರೆಲ್ಲ ಏನಾದರು? ತಪದಲ್ಲಿರುವರಾ ಇಲ್ಲಾ ಮೌನ ವ್ರತದಲ್ಲಿರುವರಾ? ಇಲ್ಲಾ ನಿದ್ರೆಯಲ್ಲಿ ಕಳೆದು ಹೋದರಾ? ಸೂರ್ಯ ಚಂದ್ರರುದಿಸುವುದು ತಮ್ಮಿಂದ ಎಂದವರು ಸ್ಪರ್ಷ ಮಾತ್ರದಿಂದಲೇ ಕಾಯಿಲೆಗಳ ಮಾಯ ಮಾಡುವೆ ಎಂದವರು ಅಂಗೈ ನೋಡಿ ತಾಳೆ ಹಾಕುವವರು ಪೂಜೆಗೈದು ಪಾಪವ ತೊಳೆಯುವವರು ಏನಾದರು? ಕೂಗು ಕೇಳುತ್ತಿಲ್ಲವೆ ಹಾಹಾಕಾರ ಕಾಣುತ್ತಿಲ್ಲವೆ? ಭೂ ಮಂಡಲವನ್ನೇ ಆವರಿಸಿದೆ ಅನಿಷ್ಠ ಎಲ್ಲೆಲ್ಲೂ ಹಿಡಿ ಅನ್ನಕ್ಕಾಗಿ ಚಾಚಿವೆ ಕೈಗಳು ಕುಣಿಕೆ ಹಿಡಿದು ಕಾದಿದೆ ಸಾವು ಬನ್ನಿ ನಿಮ್ಮ ಜರೂರು ಈಗ ಬಂದೊದಗಿದೆ ಹೊತ್ತಿರುವ […]
ನಾನು ಓದಿದ ಕಾದಂಬರಿ
ತುಂಗಭದ್ರ ಶ್ರೀಮತಿ ಎಂ.ಕೆ.ಇಂದಿರಾ ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ! ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ […]
ಭಯವೇ ಅಪಾಯಕಾರಿ
ಕೊರೋನಾ ಮತ್ತು ಭಯ ಗಣೇಶಭಟ್,ಶಿರಸಿ ಕೊರೊನಾಕ್ಕಿಂತ ಅದರ ಕುರಿತಾದ ಭಯವೇ ಅಪಾಯಕಾರಿ ಕೊರೊನಾ ವೈರಸ್ ಸೋಂಕಿನ ಅಪಾಯದಿಂದ ಪಾರಾಗುವ ಅತ್ಯುತ್ತಮ ವಿಧಾನವೆಂದರೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೋಂಕಿಗೆ ಬಹುಬೇಗ ಬಲಿಯಾಗುತ್ತಾರೆ. ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಒಂದಿಲ್ಲೊಂದು ವಿಧದ ಅನಾರೋಗ್ಯ ಇದ್ದುದು ಕಂಡು ಬಂದಿದೆ ಹಾಗೂ ಅವರಲ್ಲಿ ಹೆಚ್ಚಿನವರು ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾದವರು. ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಾಮ, ಕಾಲಕಾಲಕ್ಕೆ ನೀರು ಸೇವನೆ, ಒಳ್ಳೆಯ ನಿದ್ದೆ ಹಾಗೂ ಎಲ್ಲಕ್ಕಿಂತ […]