ನೀಲ ಮೋಹ.

ನೀಲ ಮೋಹ.

ಕವಿತೆ ನೀಲ ಮೋಹ. ನಂದಿನಿ ವಿಶ್ವನಾಥ ಹೆದ್ದುರ್ಗ ಪ್ರೀತಿ ನೆರೆನುಗ್ಗಿದಾಗೆಲ್ಲಾನಾನವನ ನಿನ್ನ ಹೆಸರಲ್ಲೇಕರೆಯುವೆ,ಬಲ್ಲೆಯಾ?ನನ್ನ ಉತ್ಕಟತೆಗೆ ಒದಗುತ್ತಿ ನೀನುಆಗಾಗ ಚಲುವ.ನವುರಾಗಿ ನಿನ್ನ ಉಸುರುವಾಗೆಲ್ಲಾಅಂಗುಲಂಗುಲದಲ್ಲೂಸಂಗಕ್ಕೆ ಅರಳುವಬಂಗಾರದ ಹೂವು ನಾನು. ಆಗೆಲ್ಲಾ ಬೆಚ್ಚಿ ಬೀಳುತ್ತಾನೆಇವನು.ಮತ್ತ ಮತ್ಸರದಲಿ ಪ್ರೇಮದ ಹೊಸಸಂವತ್ಸರ ಶುರುವಾಗುತ್ತದೆಇಲ್ಲಿ.ಬಿಗಿ ಕಳೆದುಕೊಂಡಿದ್ದ ನನ್ನಹಳೆಯ ಒಲವಿಗೆಸಿಹಿಹಗೆಯಿಂದಲೆ ಸೊಗ ನೀಡುತಾನೆಮತ್ತೆ. ಅಡಿಗಡಿಗೆ ಬಣ್ಣ ಬದಲಿಸುವನಭದ ಮೋಹನನೇನೆಲ ಮುಗಿಲ ಹೊಲೆಯುವಚತುರ ಚಮ್ಮಾರನೇನೇವರಿಕೆಯೂ ಇರದೆ ನೆನಪಿಗೇನಲುಗುವಾಗೆಲ್ಲಾನೀನಾರೆಂದು ತಿಳಿವ ಕುತೂಹಲನನಗೆ. ಅವಳಾರೋ ನಿತ್ಯ ಕನ್ನೆಬಿಚ್ಚಿ ಬಿಸುಟ ಸೀರೆಯೆನಿಸುತ್ತಿನಕಾಶೆ ನಕ್ಷೆ ಹೆಸರು ವಿಳಾಸವಿರದಊರೆನಿಸುತ್ತಿ.ಆಕಾರವಿರದ ಮಳೆಯ ತತ್ತಿಗಳಹೊತ್ತು ನಡೆವ ಬಟಾಬಯಲೆನಿಸುತ್ತಿ.ನೆಲದ ನೀರೆಲ್ಲಾ […]

ಯಾರಿಗೂ ನಾವು ಕಾಯುವುದಿಲ್ಲ

ಕವಿತೆ ಯಾರಿಗೂ ನಾವು ಕಾಯುವುದಿಲ್ಲ ನೂತನ ದೊ ಶೆಟ್ಟಿ ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿಕಡುಕೆಂಪಾಗಿ ಜೀವ ತುಂಬಿಕೊಂಡಿತ್ತುಆ ಗುಲಾಬಿ ಹೂ ಎಳೆಯ ಹೊನ್ನ ಕಿರಣಗಳುಮಲಗಿದ್ದ ಇಬ್ಬನಿಗೊಂದುಹೂ ಮುತ್ತನಿಕ್ಕಿದಾಗನಾಚುತ್ತಲೇ ಸುಖಿಸಿತ್ತು. ಮುಳ್ಳುಗಳ ಸಂಗವೇಕೆಂದುದೂರ ನಿಂತಕರಗಳಿಗಾಗಿ ಕಾತರಿಸುತ್ತತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು ಏರಿದ ಬಿಸಿಲಲ್ಲಿ ಕಿರುಗಣ್ಣಾಗಿಈಗ ಬರಬಹುದೇ?ಕೇಳಿದ ಪ್ರಶ್ನೆಗೆಇಬ್ಬನಿಯ ನಿರುತ್ತರ ಹೊನ್ನ ಕಿರಣಗಳ ತೆಕ್ಕೆಯಲ್ಲಿಸೇರಿ ಹೋದ ಇಬ್ಬನಿಯ ಕಂಡುಗುಲಾಬಿಗೂ ತವಕಎಲ್ಲಿ ನನ್ನ ತಬ್ಬುವ ಕೈಗಳು ಬೆಳಕು ಕರಗಿದ ಸಂಜೆಯಲಿರಾತ್ರಿ ರಾಣಿಗಳು ನಕ್ಕು ಕೇಳಿದೆವುಏಕೆ ಕಾಯುವೆ? ಕಿರಣ, ಇಬ್ಬನಿ, ಸಂದೇಶಯಾರಿಗೂ ನಾವು ಕಾಯುವುದಿಲ್ಲಅರಳುತ್ತೇವೆ, […]

ಕೊಡವಿ ( ಕನ್ಯೆ )

ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ […]

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ […]

ಅಂಕಣ ಬರಹ ರಂಗ ರಂಗೋಲಿ-03 ಜಾತ್ರೆಯ ಲೋಕ ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು. ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.  ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ […]

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು […]

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಯಾರು ಬಂದರು

ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ‌ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************

ಅಭಿವ್ಯಕ್ತ

ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

ಲಂಕೇಶ್ ವಿಶೇಷ ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..! ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿದೆ. ಕವಿಯಾಗಿ, ಕಥೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ನಾಟಕಕಾರನಾಗಿ, ನಟನಾಗಿ, ಚಲನಚಿತ್ರ ನಿರ್ದೇಶಕನಾಗಿ, ವಾರಪತ್ರಿಕೆ ಲಂಕೇಶ್ ಸಂಪಾದಕನಾಗಿ, ಕೃಷಿಕನಾಗಿಯೂ ಪ್ರಸಿದ್ಧನಾಗಿ ಹೆಸರು ಮಾಡಿದವರು ಪಿ.ಲಂಕೇಶ್ ಅವರು. ಹೀಗೆಯೇ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು   ಪಿ.ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ […]

Back To Top