ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

ಲಂಕೇಶ್ ವಿಶೇಷ

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿದೆ. ಕವಿಯಾಗಿ, ಕಥೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ನಾಟಕಕಾರನಾಗಿ, ನಟನಾಗಿ, ಚಲನಚಿತ್ರ ನಿರ್ದೇಶಕನಾಗಿ, ವಾರಪತ್ರಿಕೆ ಲಂಕೇಶ್ ಸಂಪಾದಕನಾಗಿ, ಕೃಷಿಕನಾಗಿಯೂ ಪ್ರಸಿದ್ಧನಾಗಿ ಹೆಸರು ಮಾಡಿದವರು ಪಿ.ಲಂಕೇಶ್ ಅವರು. ಹೀಗೆಯೇ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು   ಪಿ.ಲಂಕೇಶ್.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8 ರಂದು ಜನಿಸಿದವರು. ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ಮೀಡಿಯಟ್‌ಗಳನ್ನು ಶಿವಮೊಗ್ಗದಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜ್‌ನಲ್ಲಿ ಬಿ. ಎ. (ಆನರ್ಸ್), ಮೈಸೂರಿನಲ್ಲಿ ಎಂ.ಎ. (ಇಂಗ್ಲಿಷ್) ಅಧ್ಯಯನ ನಡೆಸಿ ಅವರು ಶಿವಮೊಗ್ಗದಲ್ಲಿ ಅಧ್ಯಾಪಕ ವೃತ್ತಿ ಆರಂಭ (1959) ಮಾಡಿದವರು.

Book talk 06-ಅಕ್ಷರ ಹೊಸ ಕಾವ್ಯ-ಪಿ. ಲಂಕೇಶ್-P Lankesh-Akshara Hosa  Kavya-Kalamadhyam | KS Parameshwar - YouTube

ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಎರಡು ದಶಕಗಳ ಕಾಲ ಅಧ್ಯಾಪಕರಾಗಿದ್ದ ಪಿ.ಲಂಕೇಶ್ ರು ಸ್ವಯಂ ನಿವೃತ್ತಿ ಪಡೆದು ನಂತರ ಪತ್ರಿಕೋದ್ಯಮ ಪ್ರವೇಶಿಸಿದವರು. ‘ಲಂಕೇಶ್ ಪತ್ರಿಕೆ’ಯು ಪಿ.ಲಂಕೇಶ್ ಅವರ ಹರಿತ ಬರಹಗಳ ಮೂಲಕ ಕನ್ನಡ ಜಾಣ-ಜಾಣೆಯರಿಗೆಲ್ಲ ಪರಿಚಿತರಾದವರು.

ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದ ಲಂಕೇಶ್ ಅವರಿಗೆ ಸಮಾಜವಾದದತ್ತ ವಿಶೇಷ ಆಸಕ್ತಿ ಇತ್ತು. ಲೋಹಿಯಾರ ಸಮಾಜವಾದ ಪ್ರಭಾವಿತರಾಗಿದ್ದ ಪಿ.ಲಂಕೇಶ್ ರು ರಾಜಕೀಯ ಪ್ರವೇಶಿಸುವ ಬಯಕೆಯಿಂದ ‘ಪ್ರಗತಿ ರಂಗ’ ಆರಂಭಿಸಿದ್ದವರು.

’ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’, ‘ಕಲ್ಲು ಕರಗುವ ಸಮಯ’, ’ಉಲ್ಲಂಘನೆ’, ’ಮಂಜು ಕವಿದ ಸಂಜೆ’ ಪಿ.ಲಂಕೇಶರ ಪ್ರಕಟಿತ ಕಥಾ ಸಂಕಲನಗಳು.

ಬಿರುಕು | Biruku by P. Lankesh

‘ವಾಮನ’ ಪಿ.ಲಂಕೇಶ್ ರ ಮೊದಲ ಕಥೆ. ವಾಮನದಿಂದಲೇ ವಿಮರ್ಶಕರ ಗಮನ ಸೆಳೆದರು ಪಿ.ಲಂಕೇಶ್. ಅವರ ಮತ್ತೊಂದು ಮಹತ್ವದ ಕಥೆ ‘ರೊಟ್ಟಿ’. ಇದೂ ಕೂಡ ಎಲ್ಲ ಸಾಹಿತ್ಯಾಭಿಸಿಗಳ ಆಕರ್ಷಕವಾಗಿತು.

‘ಬಿಚ್ಚು’, ‘ತಲೆಮಾರು’, ಪಿ.ಲಂಕೇಶ್ ರ ಕವನ ಸಂಕಲನಗಳು, ಗದ್ಯದ ವಿಚಿತ್ರ ಸೊಗಸನ್ನು ಪದ್ಯಗಳಿಗೆ ತೊಡಿಸಿ ಕಾವ್ಯ ಬರೆದ ಪಿ.ಲಂಕೇಶ್‌ ರ ‘ಅವ್ವ-1’, ‘ಅವ್ವ-2’, ‘ದೇಶಭಕ್ತ ಸೂಳೆಮಗನ ಗದ್ಯಗೀತೆ’ ಅತ್ಯುತ್ತಮ ಕವನಗಳು. ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನ ‘ಅಕ್ಷರ ಹೊಸಕಾವ್ಯ’ವನ್ನು ಸಂಪಾದಿಸಿ ಪ್ರಕಟಿಸಿದ್ದವರು. ಫ್ರೆಂಚ್ ಕವಿ ಬೋದಿಲೇರನ್ ಕವಿತೆ ‘ಪಾಪದ ಹೂಗಳು’ ಲಂಕೇಶ್ ಅನುವಾದಿಸಿರುವ ಮಹತ್ವದ ಸಂಕಲನವಾಗಿದೆ ನಮಗೆಲ್ಲಾ.

‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ ಲಂಕೇಶರ ಪ್ರಥಮ ನಾಟಕವಾಗಿದೆ. ‘ಏಳು ನಾಟಕ’, ‘ಸಂಕ್ರಾಂತಿ’, ‘ಗುಣಮುಖ’ ಪಿ.ಲಂಕೇಶ್ ರ ನಾಟಕ ಕೃತಿಗಳು. ‘ಈಡಿಪಸ್ ಮತ್ತು ಅಂತಿಗೊನೆ’ ಸಫೋಕ್ಷಿಸ್ ಮಹಾಕವಿಯ ಗ್ರೀಕ್ ನಾಟಕದ ಕನ್ನಡ ಅನುವಾದ ಪಿ.ಲಂಕೇಶ್ ರ ಬಹು ಪ್ರಸಿದ್ಧಿ ಪಡೆದಿವು.

ಪಿ.ಲಂಕೇಶ್ ರು ರಂಗ ಪ್ರದರ್ಶನಕ್ಕಾಗಿ ‘ಪ್ರತಿಮಾ ನಾಟಕ ರಂಗ’ ಎಂಬ ನಾಟಕ ತಂಡ ಕಟ್ಟಿದ್ದವರು.

‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ’ಅಕ್ಕ’ ಪಿ.ಲಂಕೇಶ್ ರ ಕಾದಂಬರಿಗಳು. ‘ಪ್ರಸ್ತುತ (ವಿಮರ್ಶೆ) ಹಾಗೂ ‘ಕಂಡದ್ದು ಕಂಡಹಾಗೆ’ ಲೇಖನಗಳ ಸಂಗ್ರಹ ಓದುಗರಿಗೆ ಬಹು ಆಕರ್ಷಕವಾದ ಬರಹಗಳು.

‘ಲಂಕೇಶ್ ಪತ್ರಿಕೆಯ ಸಂಪಾದಕೀಯ ‘ಟೀಕೆ-ಟಿಪ್ಪಣಿ’ಯಂತೂ ಬಹು ನಮಗಂತೂ ಬಹು ಉತ್ತೇಜನಕಾರಿಯಾದ ಬರಹಗಳು. ಹೀಗೆಯೇ ಇಂತಹ ಮೂರು ಸಂಪುಟಗಳು ಪ್ರಕಟ ಮಾಡಿದರು ಪಿ.ಲಂಕೇಶ್. ‘ಮರೆಯುವ ಮುನ್ನ’ದ ಐದು ಸಂಪುಟ, ’ಬಿಟ್ಟು ಹೋದ ಪುಟಗಳು’ ಮೂರು ಸಂಪುಟ ಪ್ರಕಟವಾಗಿವೆ.

‘ಪತ್ರಿಕೆ ಪ್ರಕಾಶನದ ಮೂಲಕ ಕನ್ನಡದ ಮಹತ್ವದ ಕೃತಿಗಳನ್ನೂ ಪಿ.ಲಂಕೇಶ್ ಪ್ರಕಟಿಸಿದ್ದಾರೆ. ಅದಕ್ಕೂ ಮುನ್ನ ‘ತರುಣ ಲೇಖಕರ ಪ್ರಕಾಶನ’ದಲ್ಲಿ ಮಿತ್ರರ ಅನೇಕ ಕೃತಿಗಳನ್ನೂ ಪ್ರಕಟಿಸಿದ್ದವರು ಪಿ.ಲಂಕೇಶ್ ಅವರು.

ಇದಲ್ಲದೇ ಪಿ.ಲಂಕೇಶ್ ಅವರು ಚಲನಚಿತ್ರ ರಂಗದಲ್ಲೂ ಗಮನೀಯ ಸಾಧನೆ ಮಾಡಿದವರು. ‘ಸಂಸ್ಕಾರ’ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರ ವಹಿಸಿದ್ದ ಅವರು ‘ಪಲ್ಲವಿ’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ(1977) ಪಡೆದಿದ್ದವರು. ‘ಅನುರೂಪ’, ‘ಎಲ್ಲಿಂದಲೋ ಬಂದವರು’, ’ಖಂಡವಿದೆಕೊ ಮಾಂಸವಿದೆಕೊ’ ಅವರು ನಿರ್ದೇಶಿಸಿದ ಚಲನಚಿತ್ರಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿಯ ಪ್ರಶಸ್ತಿ ಗೌರವಗಳ ಜೊತೆಗೆ ‘ಕಲ್ಲು ಕರಗುವ ಸಮಯ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂದಿವೆಯಾದರೂ ಪಿ.ಲಂಕೇಶ್ ರ ಬರಹಕ್ಕೆ ಸಲ್ಲಬೇಕಾದ ಗೌರವ ಸಂದಿಲ್ಲ ಎಂಬುದೇ ಅವರ ಬರಹ ಅಭಿಮಾನಿಗಳ ಸೋಜಿಗದ ವಿಷಯ.

ಇಂತಹ ಪಿ.ಲಂಕೇಶ್ ಅವರು 2000ರ ಜನವರಿ 25 ರಂದು ಅಸುನೀಗಿದರು. ಈ ಪ್ರಸಂಗವೊಂದು ಬರಹಗಾರಿಕೆಯ ಓದುಗರಿಗೆ ತುಂಬಲಾರದ ನಷ್ಟವಾಯಿತು.

ಇಂತಿಷ್ಟು ಪಿ.ಲಂಕೇಶ್ ಕುರಿತ ಬರಹ ಮತ್ತು ಬದುಕು…

**********************************************

ಕೆ.ಶಿವು.ಲಕ್ಕಣ್ಣವರ

One thought on “ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

  1. ಪಿ ಲಂಕೇಶ್ ಅವರ ಬದುಕು ಮತ್ತು ಬರಹಗಳ ಸಂಕ್ಷಿಪ್ತ ನೋಟ ಚೆನ್ನಾಗಿದೆ ಸರ್.

Leave a Reply

Back To Top