ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಾಯ್ಕುಗಳು

ಭಾರತಿ ರವೀಂದ್ರ

Sunset sky in the evening with light and dark clouds.  stock images

1) ಲಾಸ್ಯ

ಬುವಿ ಮೊಗದಿ
ಚಿಗುರೊಡೆದ ಲಾಸ್ಯ
ಮೇಘ ಮಿಂಚಲು.

2) ಸಾಕ್ಷಿ

ಕಣ್ಣಂಚು ಹನಿ :
ಬಿಕ್ಕಲು, ಬಿಟ್ಟು ಹೋದ
ನೆನಪು ಸಾಕ್ಷಿ.

3) ಸತ್ಯ

ಕತ್ತಲು ಭ್ರಮೆ
ಸುಳ್ಳಿನ ಕನ್ನಡಿಗೆ
ಬೆಳಕು ಸತ್ಯ.

4) ಮಲ್ಲಿಗೆ

ಮಾತು ಮಲ್ಲಿಗೆ
ಸುಗಂಧದ ಸೊಗಸು
ನುಡಿ ಸಂಗೀತ

5) ಸೋನೆ

ನೆನಪು ಸೋನೆ:
ಕಣ್ಣು ಹಸಿ ಯಾಗಿಸಿ
ಹೃದಯ ಒದ್ದೆ.

*************************

About The Author

Leave a Reply

You cannot copy content of this page

Scroll to Top