ಕಣ್ಣ ಕಸ

ಕಣ್ಣ ಕಸ

ಅನುವಾದಿತ ಕವಿತೆ ಕಣ್ಣ ಕಸ ಕನ್ನಡ ಮೂಲ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ಈ ಕಸ ಹೇಗೆಬಿತ್ತೋ ಗೊತ್ತಿಲ್ಲಕಣ್ಣಿಂದ ಇಳಿವಒಂದೊಂದೇ ಹನಿಗಾಗಿಕಾಯುತಿರುವೆಕರವಸ್ತ್ರದ ತುದಿಸೆರಗಿನ ಚುಂಗುಉಫ್..ಅಂತಊದಿದ ಮಗಳ ಉಸಿರುಯಾವುದಕ್ಕೂ ಸಿಗದೆಅವಿತು ಕಾಡಿಸುತಿದೆ ತುಂಬಿದ ಕಣ್ಣುಗಳಲ್ಲಿಜಗತ್ತನ್ನು ನೋಡುವುದೂಒಂದು ಅನುಭವ ತಾನೇಹೀಗಂದುಕೊಳ್ಳುತ್ತಲೇಕನ್ನಡಿಯ ಮುಂದೆ ಬಂದುಮನಸ ಓಲೈಸಲುಹೆಣಗುತಿರುವೆ ಈ ನಶ್ವರ ಬದುಕಲ್ಲಿಪ್ರತಿ ಘಳಿಗೆಯನಿರಿಯುತಿದೆಕಣ್ಣ ತುಂಬ ಬಾವುಕಣ್ಣೊಳಗೆ ಬಿದ್ದ ನೋವು I just don’t knowHow this speck of dustGot in to the eyeAnd haunting me hiding inside.And […]

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ ಸೂರ್ಯ ಸಿಟ್ಟಾದಭೂಮಿ ಬಳಲಿ ಬೆಂಡುಹಾಳಾದ ರೈತ ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ ****************************

ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ […]

ಅಂಕಣಬರಹ ಅದುಮಿಟ್ಟ ಮನದ ಮಾತುಗಳು ಕವಿತೆಗಳಾದಾಗ ಪುಸ್ತಕ- ಸಂತೆ ಸರಕುಕವಿ- ಬಿ ಎ ಮಮತಾ ಅರಸೀಕೆರೆಪ್ರಕಾಶನ- ನಾಕುತಂತಿ  ಬೆಲೆ- ೮೦/-           ಸಿದ್ಧ ಸೂತ್ರ ಬದಲಾಗಬೇಕುಅಜ್ಜಿ ಕಥೆಯಲ್ಲಿಅರಿವು ಜೊತೆಯಾಗಬೇಕುಹೊಸ ಕಥೆಗಳ ಬರೆಯಬೇಕುಅಕ್ಷರ ಲೋಕದಲಿಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ.  ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. […]

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

ಪ್ರಸ್ತುತ       ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧದ ಕುರಿತು ಮಹಾತ್ಮ ಗಾಂಧೀಜಿ ಡಾ.ಎಸ್.ಬಿ. ಬಸೆಟ್ಟಿ ಮಹಾತ್ಮ ಗಾಂಧೀಜಿಯವರು ಜನರು ಬಯಸುವ ಹಾನಿಕಾರಕ ಮತ್ತು ಅನಾವಶ್ಯಕ ಮಾದಕ ವಸ್ತುಗಳನ್ನು  ವಿರೋಧಿಸುತ್ತಿದ್ದರು. ಗಾಂಧೀಜಿಯವರು ತಂಬಾಕು ಮತ್ತು ಮಧ್ಯವನ್ನು ಜನರ ಆರೋಗ್ಯಕ್ಕೆ ಅತ್ಯಂತ ಹಾನಿ ಕಾರಕ ವಸ್ತುಗಳೆಂದು ಪರಿಗಣಿಸಿದ್ದರು ಜೊತೆಗೇ ಚಹಾ ಮತ್ತು ಕಾಫಿಯನ್ನು ಕೂಡಾ ಅನಾವಶ್ಯಕ ವಸ್ತುಗಳೆಂದು ಭಾವಿಸಿದ್ದರು. “ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ  ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” […]

ನೆನಪುಗಳು:

ಕವಿತೆ ನೆನಪುಗಳು: ಡಾ. ಅರಕಲಗೂಡು ನೀಲಕಂಠ ಮೂರ್ತಿ 1.ನೆನಪುಗಳೇ ಹಾಗೆ —ಒಮ್ಮೆ ಚುಚ್ಚುಸೂಜಿಗಳುಒಮ್ಮೆ ಚಕ್ಕಳಗುಳಿ ಬೆರಳುಗಳುಮತ್ತೊಮ್ಮೆ ಮುಗುಳುನಗೆಯ ಜೋಕುಗಳುಇನ್ನೊಮ್ಮೆ ಕಣ್ಣ ಬಸಿಯುವ ಹಳೆಯ ಹೊಗೆಯ ಅಲೆಗಳು…ಮತ್ತುಪಿಸುಮಾತಲಿ ಮುಲುಗುವಒಲವಿನ ಬಿಸಿ ಬಂಧುರ ಬಂಧನಗಳು…! 2.ನೆನಪುಗಳು —ಪ್ರಪ್ರಥಮ ಮಳೆಗೆ ವಟಗುಟ್ಟುವಕೊರಕಲ ಕಪ್ಪೆಗಳು;ಹರೆಯದ ಹುತ್ತದಲಿ ಭುಸುಗುಟ್ಟುಮತ್ತೆಲ್ಲೋ ಹರಿದು ಮರೆಯಾದಹಾವಿನ ಪೊರೆಗಳು…!ನೆನಪುಗಳು ಏಕಾಂತದಲಿ ಕಳಚುತ್ತವೆದಿರಿಸು ಒಂದೊಂದಾಗಿ,ಎಂದೋ ಹಂಬಲಿಸಿದ ಬಿಸಿಯಬೆಂಕಿಯಾಗಿ… 3.ನೆನಪುಗಳು —ಕಳೆದುಹೋದ ಕೋಲ್ಮಿಂಚಿನ ಹಸಿರ ಚಿಗುರುಈ ಋತು ಒಣಗಿ ಉದುರುವ ತರಗು…ಸಗಣಿ ಗೋಡೆಗೆಸೆವುದು ಬೆರಣಿಗಾಗಿ,ಆ ಬೆರಣಿಯುರಿದು ಬೆಂಕಿ…ಅಷ್ಟೆ! ಎಂಥ ಸುಕೃತವೋ ಏನೋ —ನೆನಪಿನ […]

ಚಪ್ಪರದ ಗಳಿಕೆ

ಅನುಭವ ಚಪ್ಪರದ ಗಳಿಕೆ ಶಾಂತಿವಾಸು ನಮ್ಮ ಮನೆಗೆ ಹೊದ್ದಿಸಿದ ಸಿಮೆಂಟ್ ಶೀಟ್ ಮೇಲೆ ಹತ್ತಿ ನಡೆಯಲಾರಂಭಿಸಿದರೆ ಸುಮಾರು ಇಪ್ಪತ್ತು ಮನೆಗಳನ್ನು ದಾಟಬಹುದಿತ್ತು.  ನಲವತ್ತು ವರ್ಷಗಳ ಮೊದಲು ನಮ್ಮ ರಸ್ತೆಯಲ್ಲಿ ಯಾವುದೇ ಮಹಡಿ ಮನೆ ಇರಲಿಲ್ಲ. ನೆರಳಿಗಾಗಿ ನಮ್ಮ ಮನೆಯ ಹೊಸ್ತಿಲಿನ ನಂತರ ಹತ್ತು ಅಡಿಗಳಷ್ಟು ಮುಂದಕ್ಕೆ, ಮೇಲೆ ಕವಲುಹೊಡೆದ ಉದ್ದದ ಊರುಗೋಲುಗಳನ್ನು ನಿಲ್ಲಿಸಿ ಮೇಲೆ ಚೌಕಟ್ಟು ಮಾಡಿ  ಇಪ್ಪತ್ತು ಅಡಿಗಳಷ್ಟು ಅಗಲಕ್ಕೆ ತೆಂಗಿನ ಗರಿಗಳನ್ನು ಹೊದಿಸಿದ್ದರು. ನಮ್ಮ ಮನೆ ಬಿಟ್ಟು ಎಡಗಡೆಗೆ ಬಾಡಿಗೆ ಮನೆಗಳು ಹಾಗೂ ಬಲಗಡೆಗೆ […]

ಗಝಲ್

ಗಝಲ್ ಶುಭಲಕ್ಷ್ಮಿ ಆರ್ ನಾಯಕ ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರುಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರುಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ […]

ಮಂಜು

ಕವಿತೆ ಮಂಜು ನಳಿನ ಡಿ ಕಾಡುಮಲ್ಲಿಕಾರ್ಜುನನ ಚರಣ ಸೇರಲು ಹಾಡುಹಗಲೇ ಹಂಬಲಿಸಿ,ಬಿದ್ದ ವರುಣನ ತಿರಸ್ಕರಿಸಿ,ಮಾಟಗಾರ ಮಹಾಮಹಿಮ, ಓಜಸ್ವಿ ಓಡೋಡಿ ಹಿಡಿಯಲಾರೆ,ತಪ್ಪಾದರೂ ತಿರುಗಿ ಬರಲಾರೆ,ಕನವರಿಸಿ ಕಾಡಹಾದಿಯ ತಪ್ಪಿಸಿ,ಊರಿಗೆ ದಾರಿ ಒಪ್ಪಿಸಿ,ಗೂಬೆ ಕೂಗಿಗೆ ಕಾಗೆ ಓಡಿಸಿ,ಮುಸ್ಸಂಜೆ ಕಳೆಯಲು, ಬೆಟ್ಟದ ಬಂಡೆಗೆ ಬೆನ್ನುಹಾಸಿ,ಮರೆತು ಹೋದರೂ ಹುಡುಕಿ ತರುವ ಯಾಚಕ,ಸುಭದ್ರ ಸನಿಹದ ಇಳಿಮುಖ ಪ್ರತಿಫಲನ,ಪ್ರೇಮದ ವಕ್ರೀಭವನ,ಘಟಿಸುವವರೆಗೂ,ಮಂಜು ಅರಸಿ ಹಬ್ಬಿ ಕವಿಯುವವರೆಗೂ,ತಬ್ಬಿಬ್ಬು ಮನಸು…ಮಂಜು ನಗಲಿ,ಮಳೆ ಬರಲಿ..ನನ್ನಿರವು ನಿನ್ನಲ್ಲಿ ಸದಾ ಇರಲಿ.. ***********************************

Back To Top