ಕವಿತೆ
ಮಂಜು
ನಳಿನ ಡಿ
ಕಾಡುಮಲ್ಲಿಕಾರ್ಜುನನ ಚರಣ ಸೇರಲು ಹಾಡುಹಗಲೇ ಹಂಬಲಿಸಿ,
ಬಿದ್ದ ವರುಣನ ತಿರಸ್ಕರಿಸಿ,ಮಾಟಗಾರ ಮಹಾಮಹಿಮ, ಓಜಸ್ವಿ ಓಡೋಡಿ ಹಿಡಿಯಲಾರೆ,
ತಪ್ಪಾದರೂ ತಿರುಗಿ ಬರಲಾರೆ,
ಕನವರಿಸಿ ಕಾಡಹಾದಿಯ ತಪ್ಪಿಸಿ,
ಊರಿಗೆ ದಾರಿ ಒಪ್ಪಿಸಿ,
ಗೂಬೆ ಕೂಗಿಗೆ ಕಾಗೆ ಓಡಿಸಿ,
ಮುಸ್ಸಂಜೆ ಕಳೆಯಲು, ಬೆಟ್ಟದ ಬಂಡೆಗೆ ಬೆನ್ನುಹಾಸಿ,
ಮರೆತು ಹೋದರೂ ಹುಡುಕಿ ತರುವ ಯಾಚಕ,
ಸುಭದ್ರ ಸನಿಹದ ಇಳಿಮುಖ ಪ್ರತಿಫಲನ,
ಪ್ರೇಮದ ವಕ್ರೀಭವನ,
ಘಟಿಸುವವರೆಗೂ,
ಮಂಜು ಅರಸಿ ಹಬ್ಬಿ ಕವಿಯುವವರೆಗೂ,
ತಬ್ಬಿಬ್ಬು ಮನಸು…
ಮಂಜು ನಗಲಿ,
ಮಳೆ ಬರಲಿ..
ನನ್ನಿರವು ನಿನ್ನಲ್ಲಿ ಸದಾ ಇರಲಿ..
***********************************