ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ

ಕವಾಟಗಳ ಮಧ್ಯೆ ಬೆಳಕಿಂಡಿ

ಸುತ್ತು ಗೋಡೆಗಳ ಕಟ್ಟಿ
ತೆರೆಯದ ಕವಾಟಗಳ ಮಧ್ಯೆ
ನಾನೆಂಬ ನಾನು

ಬೇಧವಳಿದು
ಒಂದಾಗಲಿ
ಜೀವ ಪರಮಾತ್ಮ
ಸಂತ ಶರಣರ ಅಹವಾಲು

ನೋವಿರದ ಹಸಿದ ಸ್ವಾರ್ಥ
ಬರಡಾದ ಎದೆಯ ಅಮೃತ
ಬರಿದೆ ಬಡಿಯುವ ಮಿಡಿತ

ಕಳೆದು ಹೋಗಿಹ ನಾವು
ಕದ ತಟ್ಟಿ ಕರೆಯೋಣ
ಇಂದಲ್ಲ ನಾಳೆ ತೆರೆದೀತು
ತಟ್ಟಿದ ಕೈಗಳ ತಬ್ಬೀತು
ಸಂತ ಶರಣರು ನಕ್ಕಾರು.

***************************

Leave a Reply

Back To Top