ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ […]

ಹೊಸದಾಗುವುದಾದರೆ…!

ಕವಿತೆ ಹೊಸದಾಗುವುದಾದರೆ…! ಅನಿತಾ ಪಿ. ಪೂಜಾರಿ ತಾಕೊಡೆ ಎರಡು ಸಾವಿರದ ಇಪ್ಪತ್ತೊಂದರ ಪುಟಗಳಲಿಏನಾದರೂ ಹೊಸದಾಗುವುದಾದರೆಆ ಹೊಸತಿನೊಳು ಬದಲಾಗುವುದಾದರೆ…! ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದುಕ್ರೌರ್ಯವಳಿದು ಮಾನವೀಯತೆ ಮೊಳೆಯಲಿನಾನೆಂಬ ಅಹಂ ಮರೆತು ನಾವು ನಮ್ಮವರೆಂದುಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ ಕಾರಣಗಳು ಸಂಬಂಧಗಳ ದೂರೀಕರಿಸದೆ ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು ಅಂತರ ನಿರಂತರವಾಗದಿರಲಿಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವುಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ ಈ ವರ್ಷದಲಿ ಹೊಸತು ಹೀಗೂ ಒಂದಿರಲಿವೈರಾಣುವಿನಲ್ಲಿ ವಿನಾಶದ […]

ಡಿಯರ್-ಟೈಗರ್!

ಕಥೆ ಡಿಯರ್-ಟೈಗರ್! ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೆಣ್ಣು ಅಂದರೆ ಪ್ರಬಲವಾದ ಶಿಸ್ತು ಮತ್ತು ಕಬಂಧ ಬಾಹುಬಲದ  ಚೌಕಟ್ಟಿನಲ್ಲಿ ಬೆಳೆಯಬೇಕು; ಅಷ್ಟೇ ಕಟ್ಟುನಿಟ್ಟಿನ ಬೇಲಿಯೊಳಗೆ ಬದುಕಬೇಕು ಎಂಬ ಬಂಧಿಯಲ್ಲ. ಅವಳಿಗೂ ಸರ್ವಸ್ವತಂತ್ರದ ಬದುಕು ಇಷ್ಟ. ಖಂಡಿತ! ಇದು ಬಹುಶಃ ಎಲ್ಲರ  ಪಾಲಿನ ಸತ್ಯ.  ಆದರೆ, ಅನೇಕರಿಗೆ ಅಂಥ ಜೀವನ ಇರಲಿ, ಆ ರೀತಿಯ ಮುಕ್ತ ಯೋಚನೆ ಕೂಡ ಅಸಾಧ್ಯ, ಅನ್ನಿಸುವಷ್ಟು ‘ಸರಳುಗಳ ಹಿಂದಿನ ಬಾಳು!’. ವಾಸ್ತವವಾಗಿ, ಅವರಿಗೆ ಆ ಸರಳುಗಳನ್ನು ಎಣಿಸುವ ಧೈರ್ಯ ಸಹ ಇರಲಾರದು… ಕಲ್ಯಾಣಿ […]

ಅಂಕಣ ಬರಹ ರಂಗ ರಂಗೋಲಿ-06 ಅಜ್ಜಿಯ ಗೂಡಲಿ ಹಾರಲು ಕಲಿತ ಗುಬ್ಬಿ ಮರಿ ಆ ಹಳೇ ಮನೆಯಲ್ಲಿ ತೆಂಗಿನ ಹಸಿ ಮಡಲಿನಿಂದ ಒಂದೊಂದು ಒಲಿಯನ್ನು ತನ್ನ ಚಿಕ್ಕಕತ್ತಿಯಿಂದ ಸರ್ರೆಂದು ಎಳೆದು ನನ್ನ ಆಟಕ್ಕೆ ಹಾವು ,ಬುಟ್ಟಿ, ವಾಚ್,ಕಾಲ್ಗೆಜ್ಜೆ, ಕನ್ನಡಕ ಎಷ್ಟು ಪರಿಕರಗಳು ತಯಾರಾಗುತ್ತಿದ್ದವು. ಮಿದುಳಲ್ಲಿ ಚಿತ್ರವಾದ ಕಲ್ಪನೆಗಳೆಲ್ಲಾ, ಅದ್ಭುತ ಆಟಿಗೆಯಾಗಿ, ಕಲಾಪರಿಕರಗಳಾಗಿ ತಯಾರಾಗುವ ಕಲೆಯ ಕುಲುಮೆಯೇ ಅವರಾಗಿದ್ದರು. ಕಾಡಿಗೆ ಹೋಗಿ ಅದೆಂತದೋ ಕಡ್ಡಿಯಂತಹ ಬಳ್ಳಿ ಎಳಕೊಂಡು ಬರುತ್ತಿದ್ದಳು. ಅದರ ಸಿಪ್ಪೆ ತೆಗೆದು ಹೂ ಬುಟ್ಟಿ,ಅನ್ನ ಬಸಿಯುವ ತಟ್ಟೆ, […]

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ ಅನಿತಾ ಪಿ. ಪೂಜಾರಿ ತಾಕೊಡೆ ಹಾಗೆಯೇ ಕಳೆದು ಹೋಗಿಲ್ಲ…!ಇದ್ದಲ್ಲಿ ಇರುವ ಹಾಗೆಯೇಇರುವಷ್ಟಕ್ಕೆ ಹೊಂದಿಸಿಕೊಳ್ಳುವ ನೆಲೆಯಲಿಚಿತ್ರ ವಿಚಿತ್ರದೊಳ ಸತ್ಯವನು ಅರುಹಿಜೀವ ಜೀವನದ ಒಳಮರ್ಮವನುಕಲಿಸಿಯೇ ತೀರಿತಲ್ಲಾ ಎರಡಿಪ್ಪತ್ತರ ಈ ವರುಷ ‘ಒಂದು ವರ್ಷದ ಲೆಕ್ಕಬಿಟ್ಟೇ ಬಿಡಬೇಕು’ ಎಂದವರೆಲ್ಲ ಕೇಳಿ…!ಹಾಗೆಯೇ ಕಳೆದು ಹೋಗಿಲ್ಲ ಈ ವರ್ಷಜಗದಗಲ ಗಣ್ಯ ನಗಣ್ಯಗಳ ಚಿತ್ರಪಟಗಳನುತಿರುಗಾ ಮುರುಗಾ ಮಾಡಿಹಿತ ಅಹಿತಗಳ ನಡುವೆ ತೂಗಿಸಿಮುಖ್ಯ ಅಧ್ಯಾಯವನೇ ತೆರೆದಿರಿಸಿತ್ತಲ್ಲಾ…! ಕಾಸು ಮೋಜಿನ ಪರಾಕಾಷ್ಠೆಯಲಿಕಳೆದು ಹೋದವರನೂಅಡ್ದ ದಾರಿಯನಪ್ಪಿಕೊಂಡು ಬೀದಿ ಬೀದಿ ಸುತ್ತುವವರನೂಅತಂತ್ರದ ಸುಳಿಯಲಿಟ್ಟು ಉಪ್ಪು ಖಾರ […]

ಗಜಲ್

ಗಜಲ್ ಅಶೋಕ ಬಾಬು ಟೇಕಲ್. ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲುದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ […]

2020 ರ ಜೀವನ ಕಥನ

ಲೇಖನ 2020 ರ ಜೀವನ ಕಥನ ಸರಿತಾ ಮಧು ಕ್ರಿಕೆಟ್ ಆಟದಲ್ಲಿ 20- 20 ಆರಂಭವಾದಾಗ ಆಟದ ಗತಿಯೇ ಬದಲಾಗಿ  ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ನಮಗೂ ಹಾಗೆಯೇ ಸಿಹಿ ಕಹಿ ಗಳೆರಡೂ ಬೆರೆತು ಬಂದಿದೆ ಎನ್ನುವಷ್ಟರಲ್ಲಿ 2020 ಅನಿರೀಕ್ಷಿತ ತಿರುವು ನೀಡಿತ್ತಲ್ಲದೇ, ಬಹುದೊಡ್ಡ ಸವಾಲು ಹಾಕಿದ್ದು ಸುಳ್ಳಲ್ಲ. ಆರಂಭಿಕ ದಿನಗಳಲ್ಲಿ ಕೊರೊನಾ ಅಟ್ಟಹಾಸ ಬಹುತೇಕ ಜನರ ಪಾಲಿಗೆ ಕರಾಳವಾಗಿತ್ತು. ಅಕ್ಷರಶಃ ಜೀವನ ಸಂಕಷ್ಟಗಳನ್ನು ಇಂಚುಇಂಚಾಗಿ ಎದುರಿಸಬೇಕಾಯಿತು. ಪರದೇಶದ ಅಗೋಚರ ವೈರಾಣುವಿಗೆ ಇಡೀ ದೇಶದ ಆರ್ಥಿಕತೆ ತೊಡರುಗಾಲು ಹಾಕಿದ್ದು ನಮ್ಮ […]

ಪಯಣ

ಕವಿತೆ ಪಯಣ ಅಕ್ಷತಾ‌ ಜಗದೀಶ ಕಾನನದ ಒಡಲಾಳದಲ್ಲಿ ಹುಟ್ಟಿಕಲ್ಲು ಮಣ್ಣುಗಳ ದಾಟಿಕೆಂಪಾಗಿ ತಂಪಾಗಿ…ಕೊನೆಗೆ ಎಲ್ಲರೂ ಬಯಸುವಜಲವಾಗಿ ಹರಿದು..ಸಾಗುವ ದಾರಿಯುದ್ದಕ್ಕೂಹೊಲ ಗದ್ದೆಗಳಿಗೆ ನೀರುಣಿಸಿಮನುಕುಲದ ಮನತಣಿಸಿಜಲಧಾರೆಯಾಗಿ ಧುಮುಕಿ..ಅಂಧಕಾರಕ್ಕೆ ಬೆಳಕಾಗಿಜೀವರಾಶಿಗೆ ಉಸಿರಾಗಿಭೂಮಿ ತಾಯಿಯ ಹಸಿರುಡುಗೆಯಾಗಿಹರಿವ ಓ ನದಿಯೇ…ಏನೆಂದು ಹೆಸರಿಸಲಿ ನಾ ನಿನಗೆಗಂಗೆ, ತುಂಗಾ,ಕಾವೇರಿ, ಶರಾವತಿಸ್ವಾರ್ಥವಿಲ್ಲದ ಓ ಜಲರಾಶಿಕೂಡುವಿರಿ ಆಳವಾದ ಸಾಗರಕೆಅಗಾಧ ಜಲರಾಶಿಯ ಮಿಲನಕೆ..ನಿಸ್ವಾರ್ಥದೊಂದಿಗೆ ಓ ತೊರೆಯೆನಿನ್ನ ಜನನ..ಸಾರ್ಥಕತೆಯೊಂದಿಗೆ ಸಾಗಿತುನದಿಯಾಗಿ ನಿನ್ನ ಪಯಣ…

ಜೋಡಿ ಹೃದಯಗಳು

ಕವಿತೆ ಜೋಡಿ ಹೃದಯಗಳು ತೇಜಾವತಿ ಹೆಚ್. ಡಿ. ಆದಿಯಿಂದ ಅಂತ್ಯದವರೆಗೂಎಂದೆಂದಿಗೂ ಸಂಧಿಸದಸಮನಾನಂತರ ರೇಖೆಗಳು ಅವು ಪರಸ್ಪರ ಜೋಡಿಜೀವಗಳಂತೆಜೀವಿಸುವವು ಅನಂತದವರೆಗೆ ಒಂದನ್ನಗಲಿ ಮತ್ತೊಂದುಅರೆಘಳಿಗೆಯೂ ಬಿಟ್ಟಿರದ ಬಂಧ ಹೆಗಲಿಗೆ ಹೆಗಲು ಕೊಟ್ಟು ಬದುಕ ರಥ ಎಳೆಯುವ ಜೋಡೆತ್ತುಗಳು ಅವು ಸಮಭಾರ ಹೊತ್ತು ಸಹಜೀವನ ನಡೆಸುವಸರಳ ರೇಖೆಗಳು ಸಾಗುವ ಪಥದಲ್ಲಿ ನೂರು ಅಪಘಾತ ಸಂಭವಿಸಿದರೂನಂಬಿಕೆಯ ಹೊರೆತುಮತ್ಯಾವ ಬೇಡಿಕೆಗಳನ್ನೂನಿರೀಕ್ಷಿಸದ ನಿಸ್ವಾರ್ಥ ಜೀವಗಳು ಬೇಕಂತಲೇ ತೂರಿಬರುವ ನೆರೆಗಳೆದುರುಕೇವಲ ಆತ್ಮಶಕ್ತಿಯಿಂದಲೇ ಎದುರು ಈಜುವ ನಕ್ಷತ್ರಮೀನುಗಳು ಗಟಾರದೊಳಗಿನ ರಾಡಿಯೆಲ್ಲಾ ಮೇಲೇರಿಶನಿ ಬೇತಾಳನಂತೆ ಹೆಗಲಿಗೇರಿದರುಮೈಡೊದವಿ ಚಿಮ್ಮವ ಸಿಹಿಬುಗ್ಗೆಗಳು..ಉಸಿರುಗಟ್ಟುವ ಕೊನೆಯ […]

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ ಚಂದಕಚರ್ಲ ರಮೇಶ ಬಾಬು ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು. ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. […]

Back To Top