ಗಜಲ್

ಗಜಲ್

half filled wine glass beside half empty clear pint glass

ಅಶೋಕ ಬಾಬು ಟೇಕಲ್.

ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲು
ದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು

ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆ
ಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು

ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದ
ಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು

ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆ
ನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ ಮಧು ಬಟ್ಟಲು

ಜರಿವ ಜಗಕೂ ಅರಿವಿದೆ ಅಬಾಟೇ ನೊಂದ ಜೀವವೆಂದು
ಮೋಹದ ಮದರಂಗಿಯ ಶಪಿಸಿತು ಈ ಮಧು ಬಟ್ಟಲು

************************************

3 thoughts on “ಗಜಲ್

  1. ನೊಂದ ಜೀವದ ಪದ . ಇಷ್ಟವಾಯಿತು ಗಜಲ್

Leave a Reply

Back To Top