ಕವಿತೆ
ಪಯಣ
ಅಕ್ಷತಾ ಜಗದೀಶ
ಕಾನನದ ಒಡಲಾಳದಲ್ಲಿ ಹುಟ್ಟಿ
ಕಲ್ಲು ಮಣ್ಣುಗಳ ದಾಟಿ
ಕೆಂಪಾಗಿ ತಂಪಾಗಿ…
ಕೊನೆಗೆ ಎಲ್ಲರೂ ಬಯಸುವ
ಜಲವಾಗಿ ಹರಿದು..
ಸಾಗುವ ದಾರಿಯುದ್ದಕ್ಕೂ
ಹೊಲ ಗದ್ದೆಗಳಿಗೆ ನೀರುಣಿಸಿ
ಮನುಕುಲದ ಮನತಣಿಸಿ
ಜಲಧಾರೆಯಾಗಿ ಧುಮುಕಿ..
ಅಂಧಕಾರಕ್ಕೆ ಬೆಳಕಾಗಿ
ಜೀವರಾಶಿಗೆ ಉಸಿರಾಗಿ
ಭೂಮಿ ತಾಯಿಯ ಹಸಿರುಡುಗೆಯಾಗಿ
ಹರಿವ ಓ ನದಿಯೇ…
ಏನೆಂದು ಹೆಸರಿಸಲಿ ನಾ ನಿನಗೆ
ಗಂಗೆ, ತುಂಗಾ,ಕಾವೇರಿ, ಶರಾವತಿ
ಸ್ವಾರ್ಥವಿಲ್ಲದ ಓ ಜಲರಾಶಿ
ಕೂಡುವಿರಿ ಆಳವಾದ ಸಾಗರಕೆ
ಅಗಾಧ ಜಲರಾಶಿಯ ಮಿಲನಕೆ..
ನಿಸ್ವಾರ್ಥದೊಂದಿಗೆ ಓ ತೊರೆಯೆ
ನಿನ್ನ ಜನನ..
ಸಾರ್ಥಕತೆಯೊಂದಿಗೆ ಸಾಗಿತು
ನದಿಯಾಗಿ ನಿನ್ನ ಪಯಣ…