ಗಜಲ್
ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ ಕಣ್ಣ ಹನಿ ಜಾರುವ ಮುನ್ನ ಬೊಗಸೆಯೊಡ್ಡುವ ಭರವಸೆಯನ್ನು ಇತ್ತವನುನೀನಲ್ಲವೇ ಮುಚ್ಚಿಟ್ಟ ನೂರಾರು ಕನಸುಗಳಿಗೆಚಂದದ ಮರು ಜೀವವನ್ನುಇತ್ತವನುನೀನಲ್ಲವೇ – ಸಾಮಾನ್ಯಳಾದ ನನ್ನಲ್ಲಿ ಅಸಾಮಾನ್ಯಳೆಂಬ ಆತ್ಮ ವಿಶ್ವಾಸವನ್ನುತುಂಬಿದವನೇ ನೀನು ನಿನಗಾಗಿ ಏನಾದರೂ ಮಾಡಬಲ್ಲೆ ಎಂಬ ಭರವಸೆಯನ್ನು ಇತ್ತವನುನೀನಲ್ಲವೇ – ಸಾವಿರ ಹಸಿದ ಕಣ್ಣುಗಳ ನಡುವೆಯೂ ಪ್ರೇಮದ ಬೆಳಕು ಹೊತ್ತ ಕಣ್ಣಿನವನು ನೀನು ಎದೆಯ ಕತ್ತಲ ನೋವುಗಳನೆಲ್ಲಮರೆಸಿ ನಗುವಿನ ಮಿಂಚನ್ನುಇತ್ತವನುನೀನಲ್ಲವೇ – ಬರಿದೆಬಯಲಮರೀಚಿಕೆಯಂತಿದ್ದಭವಿತವ್ಯದಬದುಕಿನಲಿಹೊಂಗನಸತುಂಬಿದೆ ನೀನು ಸುಡುವ ಬೆಂಗಾಡಾಗಿದ್ದಮರುಭೂಮಿಯಲಿತಣ್ಣನೆಯನೆಳಲನ್ನುಇತ್ತವನುನೀನಲ್ಲವೇ – ನನ್ನೆದೆಯಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಕಾಮನಬಿಲ್ಲನುಮೂಡಿಸಿದವನು ನೀನು […]
ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ […]
ವಾರದ ಕವಿತೆ ನಿರಂತರ ನೋವು ರಾಜೇಶ್ವರಿ ಭೋಗಯ್ಯ ಎದೆಯ ಒಳಗೊಂದು ಚುಚ್ಚುವ ನೋವಿದ್ದರೆಮೈಮೇಲೊಂದು ಗಾಯ ಮಾಡಿಕೊ ನಂತರ ಒಳಗಿನ ನೋವು ಹೆಚ್ಚೋಹೊರಗಿನ ನೋವು ಹೆಚ್ಚೋ ಎಂದು ತಾಳೆ ಹಾಕಿಕೋ ಎದೆಯ ನೋವೇ ಹಿಂಡುವಂತಾದ್ದುಮೈಯ್ಯ ನೋವೇ ಚುಚ್ಚುವಂತಾದ್ದು ಮನವರಿಕೆ ಮಾಡಿಕೋ ಎರಡರ ಜೊತೆ ಸೆಣಸಿ ಸೆಣಸಿ ಮೈಯ ಗಾಯ ಮಾಯಿತುಎದೆಯ ನೋವು ಮತ್ತೆ ಇಣುಕಿತುಚರ್ಮದ ಮೇಲಿನದು ಒಣಗಿದರೂ ವಿಕಾರವಾಯಿತುಯಾರಿಗೂ ಕಾಣದ ನೋವು ಒಳಗಿದ್ದದ್ದೇ ಸಹ್ಯವಾಯಿತು ಗೆಳತಿ ಹೇಳಿದಳು..ಮೂಗು ಚುಚ್ಚಿಸು…ಕಷ್ಟಕ್ಕೂ ,ಸುಖಕ್ಕೂ ,ಎದೆಗೂ ಹತ್ತಿರಒಂದಕ್ಕೊಂದು ಅನುಬಂಧ ಅದೂ ಆಯಿತು…ಹಾಗೇ ಮಾಯಿತುಉಳಿಯುವುದಿಲ್ಲ […]
ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು […]
ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು. ಕಾಲೇಜ್ […]
ಗಜಲ್
ಗಜಲ್ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ […]
ಬಾಲಂಗೋಚಿ
ಪುಸ್ತಕ ಸಂಗಾತಿ ಬಾಲಂಗೋಚಿ ಮಕ್ಕಳ ಕವನ ಸಂಕಲನ ‘ಬಾಲಂಗೋಚಿ’ ಮಕ್ಕಳ ಕವನ ಸಂಕಲನ.ಪ್ರಕಟಣೆ: 2019ಪುಟಗಳು: 96ಬೆಲೆ: 90ರೂ.ಪ್ರಕಾಶಕರು: ಗೋಮಿನಿ ಪ್ರಕಾಶನಶಾಂತಿ ನಗರ, ತುಮಕೂರು-2 ದೂರವಾಣಿ: 9986692342 ಮಕ್ಕಳ ಮನವನ್ನು ಅರಳಿಸುವ ಪದ್ಯಗಳು ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ ಸಲ್ಲಬೇಕು ಮನುಜ ಕುಲಕೆ ಅದರ ಸೇವೆಯಂತೆಯೇ ಬಾಲ್ಯದ ನೆನಪುಗಳೇ ಎಲ್ಲರಿಗೂ ಒಂದು ರೀತಿಯ ಪ್ರೀತಿ ಹಾಗೂ ಚೈತನ್ಯ ಬಾಲ್ಯ ನೆನಪಾಗುತ್ತಲೇ ನಮ್ಮ ಬದುಕಿನ ಬಹುದೂರದ ಪಯಣವೆಲ್ಲ ಮರೆತಂತಾಗಿ ನಾವೂ ಒಂದು ರೀತಿಯ ಬಾಲ್ಯದ ಖುಷಿಯಲ್ಲಿ ತೇಲತೊಡಗುತ್ತೇವೆ. […]
ಯುವ ಗಜಲ್ ಕವಿ ರೇಖಾ ಭಟ್ ಹೆಸರು: ರೇಖಾ ಭಟ್ ಹೊನ್ನಗದ್ದೆಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿಊರು: ಬಾಳೆಗದ್ದೆ. ಶಿರಸಿ ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕುಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ […]
ಕನಸಿನ ಕೊನೆ
ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ […]
ಮುಗಿಲ ಮಲ್ಲಿಗೆ
ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು […]