ಯುವ ಗಜಲ್‌ ಕವಿ

ರೇಖಾ ಭಟ್

ಹೆಸರು: ರೇಖಾ ಭಟ್ ಹೊನ್ನಗದ್ದೆ
ಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನ
ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿ
ಊರು: ಬಾಳೆಗದ್ದೆ‌. ಶಿರಸಿ

Fractal, Art, Artwork, Digital Art

ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲ
ಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ

ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕು
ಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ

ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇ
ಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ

ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ ಇಲ್ಲಿ ನೆಲೆ ನಿಲ್ಲಬಹುದು
ಕುತೂಹಲದ ಇಣುಕುನೋಟ ಎಂದೂ ಜೊತೆ ಬರುವುದಿಲ್ಲ

ಕತ್ತಲೆಯ ಒಪ್ಪದವಗೆ ಬೆಳಕಿನ ‘ರೇಖೆ ‘ಯದು ದಕ್ಕಿತೇನು
ಕೊರಗುಗಳ ನುಂಗದೇ ಇಲ್ಲಿ ಕನಸುಗಳು ಅರಳುವುದಿಲ್ಲ

*********************************

2 thoughts on “

  1. ಸತ್ಯ ಗೆಳತಿ ಕೊರಗುಗಳ ನುಂಗದೆ ಕವಿತೆ ಅಥವಾ ಕನಸುಗಳು ಅರಳುವುದಿಲ್ಲ…ಗಜಲ್ ಚೆನ್ನಾಗಿದೆ

Leave a Reply

Back To Top