ಗಜಲ್
ರತ್ನರಾಯ ಮಲ್ಲ


ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆ
ನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ
ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನು
ನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ
ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆ
ನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ
ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳು
ಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ
ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನು
ಮೆದುವಾದ ನಿನ್ನ ಮಡಿಲಲ್ಲಿ ಹಗಲು-ರಾತ್ರಿಗಳನ್ನು ಎಣಿಸುತ್ತಿರುವೆ
**********************************************