ನೋಟ

ನೋಟ

ನೋಟ ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ […]

ಅವಳು

ಎಂ.ಆರ್.ಅನಸೂಯಾ ಅವಳ ಬಗ್ಗೆ ಬರೆಯುತ್ತಾರೆ
ಶೀತಲ ಕ್ರೌರ್ಯದ ಪ್ರತಿಕೃತಿಯಾದವನತ್ತ
ತಾಳಿದಳು ತಣ್ಣಗಿನ ನಿರ್ಲಕ್ಷ್ಯ

ನಾನು ಓದಿದ ಪುಸ್ತಕ

“ಐ ಕಾಂಟ್ ಬ್ರೀದ್” ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ

ಸೇಹ ಗಜಲ್

ವ್ಯಾಪಾರವು ಬೇಕು ಕೊಡು-ಕೊಳ್ಳುವಿಕೆಯ ಬದುಕಿಗೆ
ವ್ಯವಹಾರದಿ ತಕ್ಕಡಿ ಹಿಡಿದು ಸೆಳೆಯುವುದು ಪ್ರೀತಿಯೆ…

ಅಕ್ಕ, ಲಲ್ಲಾ, ರಾಬಿಯಾ..!

ಲೇಖನ ಅಕ್ಕ, ಲಲ್ಲಾ, ರಾಬಿಯಾ..! ಕೆ.ಶಿವು.ಲಕ್ಕಣ್ಣವರ ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೇ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ.     ಏಕೋ ಏನೋ ದಿನದ ಯಾವುದೇ ಕುಷಿಯ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ..! # ಅಕ್ಕಮಹಾದೇವಿ …………………… ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಲಭ್ರಮೆ ಜಾತಿಭ್ರಮೆ, ನಾಮ […]

ಅಂಕಣ

ತೊಡೆ ತಟ್ಟಿ ಎದೆಯುಬ್ಬಿ
ನುಗ್ಗಿದಾಗ ಹಿಡಿದೆಳೆದರು
ಹಾರಿ ಬಿದ್ದ ಮಧ್ಯದ ಗೆರೆ ಮುಟ್ಟಿ.. ಎರಡು ಎಡದರ್ಧದ
ಅಂಕಣದ ಆಟಕರು ಔಟ್..

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ—ಎರಡು ಟ್ರೀಣ್ … ಟ್ರೀಣ್.. ಅಬ್ಬಾ ಯಾರಿದು ಇಷ್ಟು ಹೊತ್ತಿಗೆ ಫೋನ್ ಮಾಡ್ತಿರೋದು ಎಂದು ಗಾಬರಿಯಲ್ಲಿ ಎದ್ದರೆ.. ಎಲ್ಲಿದ್ದೇನೆಂದು ತಿಳಿಯುವುದಕ್ಕೆ ಸ್ವಲ್ಪ ಹೊತ್ತು ಬೇಕಾಯ್ತು. ಎದ್ದು ಫೋನ್ ಕೈಗೆ ತಗೊಂಡೆ.. ಹಲೋ ಎನ್ನುವುದರೊಳಗೆ ಆ ಕಡೆಯಿಂದ ಮೇಡಮ್ ಇನ್ನು ಅರ್ಧ ಗಂಟೆಯೊಳಗೆ ರೆಡಿಯಾಗಿ ಲಾಂಜ್ ಗೆ ಬನ್ನಿ ಎನ್ನುವುದು ಕೇಳಿಸಿತು. ಹೂಂ ಎನ್ನುವುದರೊಳಗೆ ಫೋನ್ ಇಟ್ಟಾಯ್ತು. ಯಾವ ಮೇಡಮ್? ಯಾವ […]

ಗುರುತು

ಬೇಡ ಬೇರಾವ ಪುರಾವೆ ನನಗೆ ಹೆಣ್ಣೆಂಬುದಕ್ಕೆ
ಬೇಡ ನನಗೆ ನಿಮ್ಮ ಗುರುತಿನ ಚೀಟಿ
ಇರಲಿ ನಿಮ್ಮ ಬಳಿಯೇ…

ಹೊಸವರುಷದ ಸಂಜೆ

ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ […]

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. […]

Back To Top