ಯುವ ಗಜಲ್ ಕವಿ ರೇಖಾ ಭಟ್ ಹೆಸರು: ರೇಖಾ ಭಟ್ ಹೊನ್ನಗದ್ದೆಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿಊರು: ಬಾಳೆಗದ್ದೆ. ಶಿರಸಿ ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕುಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ […]
ಕನಸಿನ ಕೊನೆ
ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ […]
ಮುಗಿಲ ಮಲ್ಲಿಗೆ
ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು […]
ಕಾಗೆ…
ಲೇಖನ ಕಾಗೆ… ಡಾ. ಅರಕಲಗೂಡು ನೀಲಕಂಠ ಮೂರ್ತಿ ನಾನೊಂದು ಕಾಗೆ, ನಿಜ. ಅಪ್ಪಟ ಕಪ್ಪು, ನಿಜ. ನನ್ನ ‘ಮಧುರ’ ಧ್ವನಿ ನಿಮಗೆ ಕರ್ಕಷ! ಬಹುಶಃ ಅದೂ ಕೂಡ ನಿಜ! (ನಿಮ್ಮದೇ ಕಣ್ಣು ಕಾಣುವ ಕೋನದಿಂದ ಮಾತ್ರ). ನಿಮ್ಮ ಹಾಗೆ ನಮ್ಮ ಪಕ್ಷಿ ಲೋಕದ ಲ್ಲಿ, ಕಪ್ಪು ಅಂದಾಕ್ಷಣ ಅಸಹ್ಯವಿಲ್ಲ. ನಿಮ್ಮಲ್ಲೋ ಎಂಥೆಂತಹ ಅಸಹ್ಯ ಭಾವನೆಗಳಿಲ್ಲ ಹೇಳಿ – ಒಬ್ಬನನ್ನೊಬ್ಬ ಕಂಡಾಗ ನಿಮ್ಮ ನಿಮ್ಮ ನಡುವೆ! ನಾವು ವೈವಿಧ್ಯಮಯ ಜಗತ್ತನ್ನು ನಮ್ಮ ಉಗಮದಿಂದಲೇ ಗೌರವದಿಂದ ಭಾವಿಸಿಕೊಂಡು ಬಂದವರು; ಇಂದಿಗೂ […]
ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ. ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ ಸುಯ್ಯುತ್ತಿದ್ದ ಮಳೆಯೊಂದಿಗೆ […]
ಹೃದಯ ಭಾಷೆ
ಅನುವಾದಿತ ಕಥೆ ಹೃದಯ ಭಾಷೆ ತೆಲುಗು ಮೂಲ: ಕಳ್ಳೆ ವೆಂಕಟೇಶ್ವರ ಶಾಸ್ತ್ರಿ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಬೆಳೆಗ್ಗೆ ಐದು ಗಂಟೆಗೆ ಆತ ತನ್ನ ಫ್ಲಾಟಿನಿಂದ ಹೊರಗಡೆ ಬಂದ. ಆತನ ಫ್ಲಾಟ್ ತುಂಬಾ ಚಿಕ್ಕದು. ಗ್ರೌಂಡ್ ಫ್ಲೋರ್ ನಲ್ಲಿತ್ತು. ಒಂದು ಹಾಲು, ಒಂದು ಮಲಗುವ ಕೋಣೆ, ಅಡುಗೆಮನೆ, ಬಾತ್ರೂಮ್ ಕಮ್ ಟಾಯ್ಲೆಟ್ ಇವು ಅದರ ಭಾಗಗಳು. ಬಾಗಿಲು ಮುಚ್ಚಿ, ಚಿಲಕವಿಟ್ಟು ಅದಕ್ಕೆ ಬೀಗ ಹಾಕಿದ. ಹೊರಗಡೆ ಇನ್ನೂ ಕತ್ತಲಿತ್ತು. ಬೆತ್ತದ ಆಸರೆಯಿಂದ ಸದ್ದಿಲ್ಲದೇ ಬೇಗಬೇಗ ನಡೆಯುತ್ತಿದ್ದ. ಆತನ […]
ಯುವ ಗಜಲ್ ಕವಿ ಶಿವಪ್ರಕಾಶ ರು ಕುಂಬಾರ ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು) ವಯಸ್ಸು: ೩೨ ಶಿಕ್ಷಣ: ಐಟಿಐ ,ಡಿಪ್ಲೋಮಾ ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ) ೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ) ೩) ನೇರಿಶಾ (ಗಜಲ್ ಸಂಕಲನ) ಸಂಗಾತಿಓದುಗರಿಗೆ ಇವರದೊಂದು ಗಜಲ್ ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್ಯಮ ಕಿಂಕರರ ನರ್ತನ ಎಲ್ಲೇ […]
ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ […]
ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ. ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್. ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು. ತನ್ನ […]
ವಾರದ ಕತೆ ಧ್ರುವ ತಾರೆ ವಿನುತಾ ಹಂಚಿನಮನಿ . ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ. ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು […]