ಕಾವ್ಯಯಾನ

ಕಾವ್ಯಯಾನ

ನಾನೀಗಲೂ ನಿನಗೆ ಆಭಾರಿ. ಶೀಲಾ ಭಂಡಾರ್ಕರ್ ಕನಸೊಂದನ್ನು ಕನಸಾಗಿಯೇ ಉಳಿಸಿದಕ್ಕಾಗಿ, ಮತ್ತೆ ಮತ್ತೆ ಅದೇ ಕನಸಿನ ಗುಂಗಿನಲ್ಲಿ ಇರಿಸಿದಕ್ಕಾಗಿ, ನಿನಗೆ ನಾ ಸದಾ ಆಭಾರಿ. ಕನಸೊಂದಿತ್ತು ನನಗೆ ಸಮುದ್ರ ಕಿನಾರೆಯಲ್ಲಿ, ಮುಸ್ಸಂಜೆಯ ಹೊತ್ತಲ್ಲಿ, ಸೂರ್ಯನೂ ನಾಚಿ ಕೆಂಪಾಗಿ ನಮ್ಮನ್ನೋಡುತ್ತಾ ಮುಳುಗುತ್ತಿರುವಾಗಲೇ ಕೈಯೊಳಗೆ ಕೈ ಹಿಡಿದು ನಮ್ಮೊಳಗೆ ನಾವು ಕಳೆದು ಹೋಗುತ್ತಲೇ ಇರಬೇಕು ದೂರ ಬಲು ದೂರ ನಡೆದು. ಆ ದಿನವಿನ್ನೂ ಬರಲೇ ಇಲ್ಲ. ಸೂರ್ಯನು ನಾಚಿ ನಮ್ಮನ್ನು ನೋಡಲೇ ಇಲ್ಲ. ನಮ್ಮೊಳಗೆ ನಾವು ಕಳೆದು ಹೋಗಲೇ ಇಲ್ಲ. […]

ಕಾವ್ಯಯಾನ

ಕೀಲಿ ಕೈ ತರಲು ಧರಣೇಂದ್ರ ದಡ್ಡಿ ಯಾವ ದೇವರು ಕಣ್ಣು ತೆರೆಯಲೇ ಇಲ್ಲ ಯಾವ ದೇವರು ತಾನೇ ಕಣ್ಣು ತೆರೆದಾನು? ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ ಇಲ್ಲಿ ಮನಸ್ಸುಗಳೆಲ್ಲ ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ ಜೊತೆಗೆ ದೊಡ್ಡದೊಂದು ಬೀಗವು ಕೂಡ ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ ಇರಲಿ, ಆದರೂ ಒಂದು ಮಾತು ನೆನಪಿರಲಿ ದೇವರು […]

ಕಾವ್ಯಯಾನ

ಅನುವಾದಿತ ಟಂಕಾಗಳು ಮೂಲ ಕರ್ತೃ – ಸಂಪತ್ ಕುಮಾರ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ನೀನಿತ್ತ ಜನ್ಮ ಬೇಡೆ ನಾ ಮರುಜನ್ಮ! ಭವಸಾಗರ ದಾಟಿಸು, ನೆನೆವೆನಾ ಕೊನೆ ಜೀವ ಕ್ಷಣಕು. Life bestowed by you Don’t need next life Rescue from worldly pursuits Always remember Till my last breath ಬರುವೆನಿಲ್ಲಿ ನೋವ ಮರೆಯೆ, ಭೇದ ಇಲ್ಲ ನಿನ್ನಲಿ. ಮಧು ಉಣಿಸಿ, ಮನ ತಣಿಸೈ “ಮಧುಶಾಲಾ” Come here To forget […]

ಕಾವ್ಯಯಾನ

ನೀ ಬರುವೆಯ ಒಮ್ಮೆ ಉಷಾ ಸಿ ಎನ್ ಬದುಕ ಜಂಜಾಟದಲ್ಲೀಗ, ಅಲೆಗಳ ಸಂಭ್ರಮದ ವಿಹಂಗಮ ನೋಟದಿ ಕಷ್ಟಸುಖಗಳ ಮೆಲುಕುಹಾಕುತ್ತಾ ಒಬ್ಬಂಟಿಗಳಾಗಿ ಬಿಟ್ಟಿದ್ದೇನೆ..!! ನಿನ್ನ ನೆನಪುಗಳ ಬದಿಗೊತ್ತಿ ಮರೆಮಾಚಿ ಕೈ ಚೆಲ್ಲಿದ್ದೇನೆ. ಹೊಸ ಬದುಕ ಹೊಸೆಯಲು ತುರಾತುರಿ ತಯಾರಿ ನಡೆಸಿದ್ದೇನೆ. ನೆನಪುಗಳಿಗೆ ಮುಕ್ತಿ ಸಿಕ್ಕಿತೆಂಬ, ಕ್ಷಣಿಕ ಸಂತಸ ಕೂಡ ಮೊಳಕೆಯೊಡಿಯುತ್ತಿಲ್ಲ..!! ಅದೆಲ್ಲೊ ಮೂಲೆಯಲ್ಲಿ ಅವಿತು ಕುಳಿತ ನೆನಪುಗಳು ಬರಸೆಳೆದು ಬರುತ್ತಿವೆ ನನ್ನತ್ತಲೇ!! ನನ್ನಂತರಾಳದ ಭದ್ರತೆಯ ಸರದಾರ, ಭರವಸೆಯ ಹರಿಕಾರ ವಿರಹದ ಕಾದಾಟಕೆ ಪೂರ್ಣವಿರಾಮವಿಟ್ಟು!! ಬಂದು ಬಿಡು ಒಮ್ಮೆ ಬದುಕು […]

ಅನುವಾದ ಸಂಗಾತಿ

ಮುದುಕ ಗ್ರೀಸ್ ದೇಶದ ರಾಷ್ಟ್ರ ಕವಿ ಕೋನ್ಸ್ಟಾ೦ಟಿನ್ ಪಿ ಕವಾಫಿ ಯ “ಏನ್ ಓಲ್ದ್ ಮ್ಯಾನ್”ಕವಿತೆಯ ನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇದೊ೦ದು ವೃದ್ಧಾಪ್ಯದ ಲ್ಲಿ ನಿ೦ತು ಕಳೆದುಹೋದ ಯೌವನದ ಕಾಲವನ್ನು ಕುರಿತು ಯೋಚಿಸುತ್ತಾ ತಳ ಮಳ ಗೊಳ್ಳುವ ಚಿತ್ರವನ್ನು ಕಟ್ಟಿಕೊಡುವಸು೦ದರ ಕವನ. ನನ್ನ ಅನುವಾದದ ಜತೆಗೆ ಕವಾಫಿಯ ಕವನದ ಇ೦ಗ್ಲಿಶ್ ಪಠ್ಯವನ್ನೂ ಇಲ್ಲಿಕೊಟ್ಟಿದ್ದೇನೆ ಮೇಗರವಳ್ಳಿ ರಮೇಶ್ ಅಲ್ಲಿ, ಗದ್ದಲದ ಕೆಫೆಯ ಆ ಕೊನೆಯಲ್ಲಿತಲೆ ಬಗ್ಗಿಸಿ ಕುಳಿತಿದ್ದಾನೊಬ್ಬ ಮುದುಕಎದುರು ಟೇಬಲ್ಲಿನ ಮೇಲೆ ಹರಡಿದೆ ವೃತ್ತ ಪತ್ರಿಕೆ. ನಿಸ್ಸಾರ ಮುದಿತನದ […]

ಕಾವ್ಯಯಾನ

 ಎಲ್ಲಾ ಒಲವುಗಳು ಉಳಿಯುವುದಿಲ್ಲ  ವಸುಂಧರಾ ಕದಲೂರು ಪಡೆದುಕೊಳ್ಳಲಾಗದ ಒಲವು ನೋವಾಗಿ ಕಾಡುವಾಗ ಸಂತೈಸಿಕೋ ಮನವ.. ಏಕೆಂದರೆ, ಎಲ್ಲಾ ಒಲವುಗಳು ನಮ್ಮದಾಗಿ ಉಳಿಯುವುದಿಲ್ಲ. ಭೋರೆಂದು ಸುರಿದ ಮಳೆಯ ಹನಿ ಇಳೆಯ ಗರ್ಭಕ್ಕಿಳಿಯದೇ ಆವಿಯಾಗಿ ಬಿಡುವುದು ಕಡಲ ಅಲೆ ದಡಕ್ಕೆ ಅಪ್ಪಳಿಸಿದ ಚಿಪ್ಪೊಳಗೆಂದೂ ಮುತ್ತು ಕೂಡದು ಗಡಿಯಾರವೂ ಹಿಂದೆ ತಿರುಗಲಾರದ ಸಂಕಟಕ್ಕೆ ಆಗಾಗ್ಗೆ ನಿಸೂರ ನಿಟ್ಟುಸಿರಿಟ್ಟು ನಿಂತು ಬಿಡುವುದು ಚಿಗುರೊಡೆಯದ ಬೀಜಗಳ ಕತೆ ಗೊಬ್ಬರದ ಹಾಡಿನಲ್ಲಿ ಕೊನೆಯಾಗುವುದು ಒಲವು ಕನಸ ಕನವರಿಕೆಯಲ್ಲರಳಿ ಸುಗಂಧ ಸೂಸುವ ಮುನ್ನ ಭಗ್ನ ಸ್ವಪ್ನವಾಗಿಬಿಡುವುದು ಬರೆಯಲಾಗದ […]

ಲಾಕ್ ಡೌನ್ ದುರಿತಗಳು..

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು ನಂದಿನಿ ಹೆದ್ದುರ್ಗ ದಾಖಲಿಸಿದ್ದ ಲಾಕ್ ಡೌನ್ ದುರಿತಗಳು.. ಕಳೆದ ವಾರ ನನ್ನ ಮೊಬೈಲ್ಲು ಬೆಂಗಳೂರಿಗರು ಕಳಿಸುತ್ತಿದ್ದ ಹೂ ಉದುರಿದ ಖಾಲಿ ರಸ್ತೆಗಳಿಂದಲೇ ತುಂಬಿಹೋಯ್ತು. ಒಂದು ರಸ್ತೆ ಹಳದಿ,ಮತ್ತೊಂದು ನೀಲಿ,ಮಗದೊಂದು ಕಡುಗೆಂಪು…ಇನ್ನೊಂದು ತಿಳಿಗುಲಾಬಿ.. ಆಹಾ… ಊರಿಗೆ ಊರೇ ಯಾರದೋ ಸ್ವಾಗತಕ್ಕೆ  ಕಾದವರಂತೆ ತೋರಣ ಕಟ್ಟಿಕೊಂಡಿದೆ… ಯಾವ ರಸ್ತೆಯಲ್ಲಿ ಯಾರು ನಡೆದರೂ ಎಲ್ಲಿ ನಲುಗುತ್ತದೊ ಎಂಬಂಥ ಪಕಳೆಗಳ ಹಾಸು. ಬೆಂಗಳೂರು ಎನ್ನುವ ಹೆಸರು ಬದಲಿಸಿ ಹೂವೂರು ಎನುವಷ್ಟು  ಹೂಮರಗಳು.. ಯಾರೊ ಇನ್ನೊಂದು ಜೋಕು ಕಳಿಸಿದ್ರು…ಮಹಾನಗರದ […]

ಕಾವ್ಯಯಾನ

ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. […]

ಪ್ರಶಸ್ತಿ-ಪುರಸ್ಕಾರ

ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ . ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ […]

ಪ್ರಸ್ತುತ

ವಿಶ್ವಾಸದ್ರೋಹಿ ನೇಪಾಳ ಸಂಗಮೇಶ ಎನ್ ಜವಾದಿ ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ […]

Back To Top