ನೀ ಬರುವೆಯ ಒಮ್ಮೆ
ಉಷಾ ಸಿ ಎನ್
ಬದುಕ ಜಂಜಾಟದಲ್ಲೀಗ,
ಅಲೆಗಳ ಸಂಭ್ರಮದ
ವಿಹಂಗಮ ನೋಟದಿ
ಕಷ್ಟಸುಖಗಳ ಮೆಲುಕುಹಾಕುತ್ತಾ
ಒಬ್ಬಂಟಿಗಳಾಗಿ ಬಿಟ್ಟಿದ್ದೇನೆ..!!
ನಿನ್ನ ನೆನಪುಗಳ ಬದಿಗೊತ್ತಿ
ಮರೆಮಾಚಿ ಕೈ ಚೆಲ್ಲಿದ್ದೇನೆ.
ಹೊಸ ಬದುಕ ಹೊಸೆಯಲು
ತುರಾತುರಿ ತಯಾರಿ ನಡೆಸಿದ್ದೇನೆ.
ನೆನಪುಗಳಿಗೆ ಮುಕ್ತಿ ಸಿಕ್ಕಿತೆಂಬ,
ಕ್ಷಣಿಕ ಸಂತಸ ಕೂಡ ಮೊಳಕೆಯೊಡಿಯುತ್ತಿಲ್ಲ..!!
ಅದೆಲ್ಲೊ ಮೂಲೆಯಲ್ಲಿ ಅವಿತು ಕುಳಿತ
ನೆನಪುಗಳು ಬರಸೆಳೆದು ಬರುತ್ತಿವೆ ನನ್ನತ್ತಲೇ!!
ನನ್ನಂತರಾಳದ ಭದ್ರತೆಯ ಸರದಾರ,
ಭರವಸೆಯ ಹರಿಕಾರ
ವಿರಹದ ಕಾದಾಟಕೆ
ಪೂರ್ಣವಿರಾಮವಿಟ್ಟು!!
ಬಂದು ಬಿಡು ಒಮ್ಮೆ
ಬದುಕು ಮುಗಿಯುವ ಮುನ್ನ…!!
*********
Wow super madam