ಕಾವ್ಯಯಾನ

ನಾನೀಗಲೂ ನಿನಗೆ ಆಭಾರಿ.

silhouette of man standing on seashore holding smoke can

ಶೀಲಾ ಭಂಡಾರ್ಕರ್

ಕನಸೊಂದನ್ನು ಕನಸಾಗಿಯೇ
ಉಳಿಸಿದಕ್ಕಾಗಿ,
ಮತ್ತೆ ಮತ್ತೆ ಅದೇ ಕನಸಿನ
ಗುಂಗಿನಲ್ಲಿ ಇರಿಸಿದಕ್ಕಾಗಿ,
ನಿನಗೆ ನಾ ಸದಾ ಆಭಾರಿ.

ಕನಸೊಂದಿತ್ತು ನನಗೆ
ಸಮುದ್ರ ಕಿನಾರೆಯಲ್ಲಿ,
ಮುಸ್ಸಂಜೆಯ ಹೊತ್ತಲ್ಲಿ,
ಸೂರ್ಯನೂ ನಾಚಿ ಕೆಂಪಾಗಿ
ನಮ್ಮನ್ನೋಡುತ್ತಾ
ಮುಳುಗುತ್ತಿರುವಾಗಲೇ
ಕೈಯೊಳಗೆ ಕೈ ಹಿಡಿದು
ನಮ್ಮೊಳಗೆ ನಾವು ಕಳೆದು
ಹೋಗುತ್ತಲೇ ಇರಬೇಕು
ದೂರ ಬಲು ದೂರ ನಡೆದು.

ಆ ದಿನವಿನ್ನೂ ಬರಲೇ ಇಲ್ಲ.
ಸೂರ್ಯನು ನಾಚಿ ನಮ್ಮನ್ನು
ನೋಡಲೇ ಇಲ್ಲ.
ನಮ್ಮೊಳಗೆ ನಾವು ಕಳೆದು
ಹೋಗಲೇ ಇಲ್ಲ.
ಕನಸೊಂದು ನನಸಾಗಲೇ ಇಲ್ಲ.
ನೀ ನನ್ನ ಜೀವನದಲ್ಲಿ
ಬರಲೇ ಇಲ್ಲ.

ನಾನೀಗಲೂ ನಿನಗೆ ಆಭಾರಿ.
ಕನಸೊಂದು ಕನಸಾಗಿಯೇ
ಉಳಿದುದಕ್ಕಾಗಿ.

********

One thought on “ಕಾವ್ಯಯಾನ

  1. ವಾವ್!! ಅದ್ಭುತ ಕಲ್ಪನೆ
    ಕಾವ್ಯ ಹೆಣಿಗೆಯೂ ಆಕರ್ಷಕ

Leave a Reply

Back To Top