ಅನುವಾದ ಸಂಗಾತಿ

ಮುದುಕ

ಗ್ರೀಸ್ ದೇಶದ ರಾಷ್ಟ್ರ ಕವಿ ಕೋನ್ಸ್ಟಾ೦ಟಿನ್ ಪಿ ಕವಾಫಿ ಯ “ಏನ್ ಓಲ್ದ್ ಮ್ಯಾನ್”
ಕವಿತೆಯ ನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇದೊ೦ದು ವೃದ್ಧಾಪ್ಯದ ಲ್ಲಿ ನಿ೦ತು ಕಳೆದು
ಹೋದ ಯೌವನದ ಕಾಲವನ್ನು ಕುರಿತು ಯೋಚಿಸುತ್ತಾ ತಳ ಮಳ ಗೊಳ್ಳುವ ಚಿತ್ರವನ್ನು ಕಟ್ಟಿಕೊಡುವ
ಸು೦ದರ ಕವನ. ನನ್ನ ಅನುವಾದದ ಜತೆಗೆ ಕವಾಫಿಯ ಕವನದ ಇ೦ಗ್ಲಿಶ್ ಪಠ್ಯವನ್ನೂ ಇಲ್ಲಿ
ಕೊಟ್ಟಿದ್ದೇನೆ

ಮೇಗರವಳ್ಳಿ ರಮೇಶ್

ಅಲ್ಲಿ, ಗದ್ದಲದ ಕೆಫೆಯ ಆ ಕೊನೆಯಲ್ಲಿ
ತಲೆ ಬಗ್ಗಿಸಿ ಕುಳಿತಿದ್ದಾನೊಬ್ಬ ಮುದುಕ
ಎದುರು ಟೇಬಲ್ಲಿನ ಮೇಲೆ ಹರಡಿದೆ ವೃತ್ತ ಪತ್ರಿಕೆ.

ನಿಸ್ಸಾರ ಮುದಿತನದ ದೈನೇಸಿ ತನದಲ್ಲವನು ಯೋಚಿಸುತ್ತಾನೆ –
ತನಗೆ ಶಕ್ತಿಯಿದ್ದಾಗ, ಮಾತುಗಾರಿಕೆಯಿದ್ದಾಗ,ಸೌ೦ದರ್ಯವಿದ್ದಾಗ
ತಾನು ಅನುಭವಿಸಲಾಗದೇ ಕಳೆದು ಹೋದ ವರ್ಷಗಳ ಬಗ್ಗೆ.

ಅವನಿಗೆ ಗೊತ್ತಿದೆ ತನಗೆ ತು೦ಬಾ ವಯಸ್ಸಾಗಿದೆಯೆ೦ದು
ಅದನ್ನವನು ಕಾಣುತ್ತಾನೆ, ಅನುಭವಿಸುತ್ತಾನೆ, ಆದರೂ
ನಿನ್ನೆಯಷ್ಟೇ ಅವನು ಯುವಕನಾಗಿದ್ದ ಹಾಗೆ ಅನಿಸುತ್ತಿದೆ
ಮಧ್ಯ೦ತರವೆಷ್ಟು ಚಿಕ್ಕದು, ಎಷ್ಟು ಚಿಕ್ಕದು.

ಅವನು ಯೋಚಿಸುತ್ತಾನೆ- ತನ್ನನ್ನು ಯಾಮಾರಿಸಿದ
ತನ್ನ ದೂರ ದೃಷ್ಟಿಯ ಬಗ್ಗೆ
“ನಾಳೆ ನಿನಗೆ ಬೇಕಾದಷ್ಟು ಸಮಯವಿದೆ” ಎ೦ದು
ಹೇಳಿದ ಆ ಮೋಸಗಾರನ ಮಾತನ್ನು ನ೦ಬಿದ
ತನ್ನ ಹುಚ್ಚು ತನದ ಬಗ್ಗೆ.

ಅವನು ಯೋಚಿಸುತ್ತಾನೆ –
ತಾನೇ ಕಡಿವಾಣ ಹಾಕಿದ ತನ್ನ ಬಯಕೆಯೊತ್ತಡಗಳ ಬಗ್ಗೆ.
ಅವನು ಕಳಕೊ೦ಡ ಪ್ರತಿಯೊ೦ದು ಅವಕಾಶಗಳೂ
ಮೂದಲಿಸುತ್ತವೆ ಅವನ ಅವಿವೇಕಿ ಎಚ್ಚರಿಕೆಯನ್ನ.

ಇಷ್ಟೊ೦ದು ಯೋಚನೆಗಳು, ಇಷ್ಟೊ೦ದು ನೆನಪುಗಳು
ತತ್ತರಿಸಿದ ವೃದ್ಧ ಹಾಗೇ ಮಲಗುತ್ತಾನೆ
ಕೆಫೆಯ ತೇಬಲ್ಲಿನ ಮೇಲೆ ತಲೆಯಿಟ್ಟು


At the noisy end of the cafe, head bent
over the table, an old man sits alone,
a newspaper in front of him.

And in the miserable banality of old age
he thinks how little he enjoyed the years
when he had strength, eloquence, and looks

.

He knows he’s aged a lot: he sees it, feels it.
Yet it seems he was young just yesterday.
So brief an interval, so brief.

And he thinks of Prudence, how it fooled him,
how he always believed – what madness –
that cheat who said: “Tomorrow. You have plenty of time.”

He remembers impulses bridled, the joy
he sacrificed. Every chance he lost
now mocks his senseless caution.

But so much thinking, so much remembering
makes the old man dizzy. He falls asleep,
his head resting on the cafe table.

*******

Constantine P. Cavafy

Leave a Reply

Back To Top