ಕಾವ್ಯಯಾನ

ಅನುವಾದಿತ ಟಂಕಾಗಳು

ಮೂಲ ಕರ್ತೃ – ಸಂಪತ್ ಕುಮಾರ್

ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು

ನೀನಿತ್ತ ಜನ್ಮ
ಬೇಡೆ ನಾ ಮರುಜನ್ಮ!
ಭವಸಾಗರ
ದಾಟಿಸು, ನೆನೆವೆನಾ
ಕೊನೆ ಜೀವ ಕ್ಷಣಕು.

Life bestowed by you
Don’t need next life
Rescue from worldly pursuits
Always remember
Till my last breath

ಬರುವೆನಿಲ್ಲಿ
ನೋವ ಮರೆಯೆ, ಭೇದ
ಇಲ್ಲ ನಿನ್ನಲಿ.
ಮಧು ಉಣಿಸಿ, ಮನ
ತಣಿಸೈ “ಮಧುಶಾಲಾ”

Come here
To forget the sorrow
Where no discrimination prevails
Feed the drinks;
Soothe the mind, oh drunk yard

ಬೀಸಲೇಬೇಕು
ಬಿರುಗಾಳಿ ಬಾಳಲಿ,
ಅನುಭವಕೆ
ಕೈ ಯಾರು ಚಲ್ಲುವರು?
ಹಿಡಿಯುವವರಾರು?
Storm is inevitable
In the life
For the experience
Who stretch their arms ?
Who embrace to hold ?

ಬದುಕೆನ್ನುವ
ನಾಟಕದಿ, ಮೇಲುಗೈ
ನಾಟಕಗಾರ,
ಸುಖಕಿಂತ ನೋವಿನ
ನಟನೆ ಬಲು ಭಾರ !

In the play called life
Writer’s upperhand obvious
Staging sorrow
Always outweighs
Playing pleasure

******************************

Leave a Reply

Back To Top