ಮನದ ಮಲ್ಲಿಗೆ
ಮಲ್ಲಿಗೆ ಮಾಲೆಯ ಸ್ಥಾನ
ನನಗೆ ಯಾವಾಗ ಹೇಳು
ಕಾದು ಕಾದು ನನಗೆ ಸಾಕಾಗಿದೆ
ಗಜಲ್
ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು
ಸಾವಿನೊಂದಿಗೇ ಬದುಕುವ ಅನಿವಾರ್ಯತೆ ಈ ಬದುಕಿನದು. ಏನೇ ಇದ್ದರೂ ಏನೇ ಗೆದ್ದರೂ ಕೊನೆಗೊಮ್ಮೆ ಎಲ್ಲ ತೊರೆದು ಹಿಡಿ ಬೂದಿಯಾಗುವುದು ಅಥವಾ ಮಣ್ಣಲ್ಲಿ ಸೇರುವುದು ಕಾಲಚಕ್ರದ ನಿಯಮ.
ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ […]
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—28 ಆತ್ಮಾನುಸಂಧಾನ ಬಹುಮುಖೀ ವ್ಯಕ್ತಿತ್ವದ ರಾಕಜ್ಜ ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ. ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ […]
ನಾಟಕ ನೋಡಿದ ಅದೆಷ್ಟು ಸಿರಿವಂತ ಹೃದಯದವರು ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರೊಂದಿಗೆ ನನ್ನನ್ನು ಹೋಲಿಸಿ ಶಹಭಾಷ್ ಎಂದಾಗ ಕಲಾವಿದೆಯಾಗಿ ತೊರೆ ತೆರೆದು ಅರಳುವಿಕೆಗೆ ಸಮರ್ಪಣೆ ಮಾಡಿದ್ದು ಸಾರ್ಥಕ ಅನ್ನಿಸಿದೆ
ಜುಲ್ ಕಾಫಿಯಾ ಗಜಲ್.
ಕಣ್ಣ ಕುಳಿಯೊಳಗೆ ಕನ್ನಡಿಯಂತೆ ಕಾಯ್ದುಕೊಂಡಿರುವೆ.
ದೃಷ್ಟಿ ಹಾಯದಷ್ಟು ನಿನ್ನ ಬಿಂಬವೆ ಕಾಣುತಲಿದ್ದೆ ನೀನೇಕೆ ಮೂಡಲಿಲ್ಲ
ಗಜಲ್
ಹೆಗಲ ಮೇಲೆ ತಲೆಯಿಟ್ಟು ಅತ್ತಾದರೂ ಒಮ್ಮೆ ಎಲ್ಲ ಹೇಳಿ ಹಗುರಾಗಬಾರದೇನೆ ಸಖಿ
ಕಣ್ಣೀರುಣ್ಣುತ್ತಾ ನಗುವ ನಾಟಕದಿ ಕಾಲದೂಡಿ ನೊಂದುಕೊಂಡು ನೀ ಬಳಲಬೇಡ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ತಟ್ಟಿದ ತಾಳ
ಕಥೆ ತಟ್ಟಿದ ತಾಳ ಎಂ. ಆರ್. ಅನಸೂಯ ಮಂಜು, ಟೀ ಮಾಡ್ತೀಯಾ” ಎಂದು ಸುರೇಶ್ ಕೂಗಿ ಹೇಳಿದಾಗ ಅಡುಗೆಮನೆಯಲ್ಲಿ ಮಗುವಿಗೆ ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ ಉತ್ತರ ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ ಎಂದು ಮನದಲ್ಲಿಯೆ ಗೊಣಗಿದಳು. ಟೀ ಕೊಡಲು ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು ಪ್ರತಿ ನಮಸ್ಕರಿಸಿದಳು. ಆ ಅತಿಥಿ ಸುಮಾರು ಇಪ್ಪತ್ತೈದು ವರ್ಷದ ಯುವಕ. ಒಳಬಂದವಳು ಮಗುವಿಗೆ ಹಾಲು ಕುಡಿಸಿ ಮಲಗಿಸುತ್ತಿರುವಾಗ ಸುರೇಶ ಅ ಯುವಕನಿಗೆ ಹೇಳುತ್ತಿದ್ದ […]