ಗಜಲ್
ಸುಜಾತಾರವೀಶ


ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು
ಮರುಳ ಮನಸಿಗೆ ಛಲದ ಗೆಲುವ ಚರಿತೆಯ ಮೆರೆದೆಯಾ ನೀನು
ಸವಿಯ ನಿದಿರೆಗೆ ಮಂಪರಿನ ಜೊಂಪಲಿ ಮತ್ತನು ತುಂಬಿದವರು ಯಾರು
ಕವಿಯ ಕಲ್ಪನೆಯ ಕುಸುಮಮಾಲೆಯ ದಿಂಡನು ಹೆಣೆದೆಯಾ ನೀನು
ನೆನಪ ಬುತ್ತಿಯಲಿ ಬಯಸಿದ ಪ್ರೀತಿಯ ಸವಿಯ ತಿನಿಸುಗಳ ಔತಣ
ಒನಪು ವಯ್ಯಾರಕೆ ಮನದ ಬಾಗಿಲ ಕದವ ತೆರೆದೆಯಾ ನೀನು
ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು
ಸುಜಿಯ ಮನವೀಗ ಕಾಡುವ ಭಾವನೆಗಳ ರಂಗಶಾಲೆ ಆಗಿಹೋಗಿದೆ
ರಾಜಿಯ ಮಾತನಾಡಿ ಸುಡುವ ಮನಕೆ ತಂಪನು ಎರೆದೆಯಾ ನೀನು
***********
ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು
ಸುಜಾತ ರವೀಶ್
ಸುಂದರ ಪದಗಳ ಪ್ರೀತಿಯ ಕವನ


ಕವಯತ್ರಿ ಸುಜಾತ ತಮ್ಮ ಗಜಲ್ ಚನ್ನಾಗಿದೆ… ಆತ್ಮಪೂರ್ವಕ ಅಭಿನಂದನೆಗಳು ತಮಗೆ..!
ಸವಿಸ್ವಪ್ನಗಳ ಶುಭರಾತ್ರಿ…