ಜುಲ್ ಕಾಫಿಯಾ ಗಜಲ್.
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ನೀ ಬರುವೆ ಎಂದು ಸರಿ ರಾತ್ರಿಯಲ್ಲಿ ಎದ್ದು ಕುಳಿತಿದ್ದೆ ನೀನೇಕೆ ಬರಲಿಲ್ಲ.
ಹರವಿದ ಚುಕ್ಕಿಗಳ ಒಟ್ಟು ಗೂಡಿಸಿ ದಾರಿಗೆ ಬೆಳಕ ಹರಡಿದ್ದೆ ಮತ್ತೇಕೆ ಬರಲಿಲ್ಲ.
ಉದಯಿಸುವ ಸೂರ್ಯ ನಿನ್ನ ಕರೆ ತರುವೆನೆಂದು ಮಾತು ಕೊಟ್ಟಿದ್ದ ಸಖಿ.
ಹೃದಯ ರಥದ ಆಸನವು ನಿನಗಾಗಿ ಕಾಲಿ ಬಿಟ್ಟಿದ್ದೆ ನೀನೇಕೆ ಹತ್ತಲಿಲ್ಲ.
ತಬ್ಬಿಬ್ಬಾದ ಬದುಕಿನಲ್ಲಿ ತಬ್ಬಲಿಯಾಗಿ ರಸ್ತೆ ಪಕ್ಕದಲ್ಲಿ ನಿಂತೆಹನು.
ಬರ ಹೋಗುವ ಗಾಡಿಗಳನ್ನೆಲ್ಲ ಮುತ್ತಿಡುತಿದ್ದೆ ನೀನೇಕೆ ಕಾಣಲಿಲ್ಲ.
ಕಣ್ಣ ಕುಳಿಯೊಳಗೆ ಕನ್ನಡಿಯಂತೆ ಕಾಯ್ದುಕೊಂಡಿರುವೆ.
ದೃಷ್ಟಿ ಹಾಯದಷ್ಟು ನಿನ್ನ ಬಿಂಬವೆ ಕಾಣುತಲಿದ್ದೆ ನೀನೇಕೆ ಮೂಡಲಿಲ್ಲ.
ನೆನಪಿನ ಕುದುರೆಯನೇರಿ ಸಾಗುತಿದೆ ಯಮಹನ ಬದುಕು.
ಕುರಪುಟದಲಿ ನಿನ್ನ ಹೃದಯದ ಸಪ್ಪಳ ಕೇಳುತಲಿದ್ದೆ ನೀನೇಕೆ ಸುಳಿಯಲಿಲ್ಲ
****************
ಬಹುತ ಖೂಬ್ ಸರ್