ತಟ್ಟಿದ ತಾಳ

ಕಥೆ

ತಟ್ಟಿದ ತಾಳ

ಎಂ. ಆರ್. ಅನಸೂಯ

Indian-Woman Paintings For Sale | Saatchi Art

ಮಂಜು,  ಟೀ  ಮಾಡ್ತೀಯಾ”  ಎಂದು  ಸುರೇಶ್  ಕೂಗಿ ಹೇಳಿದಾಗ  ಅಡುಗೆಮನೆಯಲ್ಲಿ  ಮಗುವಿಗೆ  ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ  ಉತ್ತರ

ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ

ಎಂದು ಮನದಲ್ಲಿಯೆ ಗೊಣಗಿದಳು.  ಟೀ ಕೊಡಲು

ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು

ಪ್ರತಿ ನಮಸ್ಕರಿಸಿದಳು.  ಆ ಅತಿಥಿ ಸುಮಾರು ಇಪ್ಪತ್ತೈದು

ವರ್ಷದ ಯುವಕ. ಒಳಬಂದವಳು  ಮಗುವಿಗೆ ಹಾಲು  ಕುಡಿಸಿ ಮಲಗಿಸುತ್ತಿರುವಾಗ ಸುರೇಶ  ಅ ಯುವಕನಿಗೆ

ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ಯುವಕನಿಗೆ

ಕೆಲಸ ಕೊಡಿಸುವ ವಿಚಾರವೆಂದು ತಿಳಿಯಿತು.”ಕೆಲಸಕ್ಕೆ

ಸಂಬಂಧಿಸಿದಂತೆ ನೀವು ಸ್ವಲ್ಪ ದುಡ್ಡು ಖರ್ಚು ಮಾಡಲು

ರೆಡಿಯಿರಬೇಕು. ಎಷ್ಟು ಬೇಕಾಗುತ್ತೆ ಅಂತ ಸ್ವಲ್ಪ  ದಿನ

ಬಿಟ್ಟು ಹೇಳ್ತೀನಿ. ಒಳ್ಳೇ ಪರ್ಸೆಂಟೇಜ್ ಇದ್ದರೂ ದುಡ್ಡು

ಕೊಡದು ತಪ್ಪಲ್ಲಾ. ನೋಡೋಣ ಪ್ರಯತ್ನ ಮಾಡೋಣ”

ಎಂದೆಲ್ಲಾ ಹೇಳಿ ಕಳುಹಿಸಿದ. ಇದ್ಯಾವುದೊ ಹೊಸ ಮಿಕ ಬಿತ್ತು .ಏನು ಪಾಪ ಮಾಡಿತ್ತೋ ಎಂದುಕೊಳ್ಳುತ್ತಲೇ ರೂಮಿಗೆ ಬಂದು ಮಗುವನ್ನು ಮಲಗಿಸುತ್ತ  ಮಲಗಿದ್ದ

ಮಂಜುಳನಿಗೆ  ಕೇಳಿಸುವಂತೆ ” ಸಿಟ್ಟು ಕಡಿಮೆಯಾಗಿದೆ  ಸಧ್ಯ  ಟೀ ಮಾಡಿ ನನ್ನ ಮರ್ಯಾದೆ ಉಳಿಸಿದ್ದಕ್ಕೆ ತುಂಬ ಥ್ಯಾಂಕ್ಸ್” ಎಂದು ಅವಳ ತೋಳು ಮುಟ್ಟಿದ. ತಕ್ಷಣವೇ 

ಮಂಜುಳ ಅವನ ಕೈಯನ್ನು ಒರಟಾಗಿ  ದೂಕಿ  ಕಣ್ಮುಚ್ಚಿ

ಕೊಂಡಳು. ” Ok, no problem” ಎನ್ನುತ್ತ ಪಡಸಾಲೆಗೆ

ಹೋಗಿ T. V. ನೋಡುತ್ತಾ ಕುಳಿತೆವು. “ಹೌದು,  ನನಗೆ

ತಾನೇ ಎಲ್ಲಾ ಪ್ರಾಬ್ಲಮ್”” ಎಂದು ಮನದಲ್ಲೇ ಅಂದು

ಕೊಳ್ಳುವಾಗ  ಅವಳಿಗರಿವಿಲ್ಲದೆ ಕಣ್ಣಾಲಿಗಳು ತುಂಬಿ 

ಬಂದವು. ಮಗುವಿನ ಮುಖ ನೋಡುತ್ತಾ ಮೌನವಾಗಿ

ಅಳುತ್ತಿದ್ದಳು.  ಸುರೇಶ ರೂಮಿಗೆ ಬರುವ ಸದ್ದು ಕೇಳಿ 

ಕಣ್ಣೊರೆಸಿಕೊಂಡು ಕಣ್ಣು ಮುಚ್ಚಿಕೊಂಡಳು. ಕನ್ನಡಿಯ

ಮುಂದೆ ನಿಂತು ತಲೆಬಾಚಿಕೊಂಡು ಮಂಬಾಗಿಲನ್ನೆಳೆದು

ಕೊಂಡು ಹೊರಟ  ಸದ್ದಾಯಿತು. 

ಸುರೇಶ ತಾಲ್ಲೂಕು ಕೇಂದ್ರದ ಕೃಷಿ ಇಲಾಖೆಯ ಅಧಿಕಾರಿ

ಮಂಜುಳ ಎಂ.ಎಸ್ಸಿ. ಬಿ.ಇಡಿ. ಮುಗಿಸಿದ್ದರೂ ಸಹ ಕೆಲಸ

ಮಾಡುವ ಇರಾದೆಯೇನೂ ಇರಲಿಲ್ಲ. ತಂದೆತಾಯಿಗಳಿಗೆ

ಮಂಜುಳ ಮತ್ತು ಅವಳ ತಮ್ಮ ಪ್ರಕಾಶ ಇಬ್ಬರೆ ಮಕ್ಕಳು

ಮಂಜುಳಾಳ ತಂದೆಯು ಬ್ಯಾಂಕ್ ಮ್ಯಾನೇಜರ್ ಆಗಿದ್ದು

ನಿವೃತ್ತರಾಗಿದ್ದರು. ಪ್ರಕಾಶ ಸಾಪ್ಟ್ ವೇರ್ ಇಂಜಿನೀಯರ್  ಆಗಿ ವಿದೇಶಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ. ಸುರೇಶನ ತಂದೆ  ಕೃಷ್ಣಮೂರ್ತಿ ಪ್ರೌಢಶಾಲಾ ಶಿಕ್ಷಕರು, ತಾಯಿ ಸುಶೀಲಾ ಗೃಹಿಣಿ. ವೃತ್ತಿಯ ಜೊತೆಗೆ  ಪಾಲಿಗೆ ಬಂದಿದ್ದ ಐದು ಎಕರೆ ತೆಂಗಿನ ತೋಟದ ಆದಾಯವೂ ಇತ್ತು. ಎಲ್ಲವೂ ಸೇರಿ ಸಾಕಷ್ಟು ಅನುಕೂಲವಾಗಿದ್ದರು. ಅವರ ಮಗಳು ಹೇಮ ಸರ್ಕಾರಿ ಪ.ಪೂರ್ವ ಕಾಲೇಜು  ಉಪನ್ಯಾಸಕಿಯಾಗಿ  ಸೇವೆ ಸಲ್ಲಿಸುತ್ತಿದ್ದಳು. ಮಗನಾದ ಸುರೇಶ ಕೃಷಿ ಇಲಾಖೆಯ ಅಧಿಕಾರಿ. ಮಂಜುಳ ಮತ್ತು ಸುರೇಶರ  ಮದುವೆಯಾಗಿ ಎರಡು ವರ್ಷದೊಳಗಾಗಿ ಅವರಿಬ್ಬರ ದಾಂಪತ್ಯದ ಫಲವಾಗಿ “ಸಿರಿ” ಹುಟ್ಟಿದಳು. ಬಾಣಂತನ ಮುಗಿಸಿ ಮಂಜುಳ  ಬಂದು ಸ್ಪಲ್ಪ ದಿನಗಳು ಕಳೆದಾದ ನಂತರ  ಸುರೇಶನ ನಿಜವಾದ ಬಣ್ಣ ಅರಿವಿಗೆ ಬಂದಿತ್ತು. ಮನೆಯ ಸಣ್ಣ ಪುಟ್ಟದ್ದಕ್ಕೆಲ್ಲ ಸಿಡುಕು, ಜಗಳ ಕೂಗಾಟಗಳು ಸಾಮಾನ್ಯವಾಗಿ ಬಿಟ್ಟಿದ್ದು ವಾದವಿವಾದ ಗಳು ಬೆಳೆದು ಜಗಳದಲ್ಲಿ ಅಂತ್ಯಗೊಳ್ಳುತ್ತಿದ್ದವು. ಗಂಡ ಹೆಂಡತಿ ಜಗಳವು ಉಂಡು ಮಲಗುವ ತನಕ ಎಂಬಂತೆ ಜಗಳಗಳು  ದೀರ್ಘ ಕಾಲದ ತನಕ ಎಳೆಯುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅವನ ಮಾತಿನ ಒರಟುತನ, ಕೆಟ್ಟ ಬೈಗುಳಗಳಿಂದಾಗಿ ಮಂಜುಳ ಮಾನಸಿಕವಾಗಿ ನೊಂದು ಬಿಟ್ಟಿದ್ದಳು. ಒಮ್ಮೊಮ್ಮೆ ಅವನ ವರ್ತನೆ ಒಗಟಿನಂತೆಯೆ ಭಾಸವಾಗಿ ಅರ್ಥವಾಗಲು  ಕಷ್ಟವಾಗುತ್ತಿತ್ತು. ಅಂದು ಭಾನುವಾರ. ಅವನಿಗಿಷ್ಟದ ಚಿಕನ್ ಬಿರೀಯಾನಿ ಮತ್ತು ಫ್ರೈ ಮಾಡಲು ಚಿಕನ್ ತಂದುಕೊಟ್ಟು ಮಗಳೊಡನೆ ಆಟ  ಆಡುತ್ತ ಟಿ.ವಿ. ನೋಡುತ್ತ ಕುಳಿತಿದ್ದ. ಮಂಜುಳ ಅಡುಗೆ  ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ  ಅಡುಗೆ ಮನೆಗೆ ಬಂದ ಸುರೇಶ ” ಮಂಜು, ನನ್ನ ಫ್ರೆಂಡ್ಸನ ಮೀಟ್ ಮಾಡಿ ಬೇಗ ಬರ್ತಿನಿ. ಒಂದರ್ಧ ಗಂಟೆ ಅಷ್ಟೆ.ಬಂದು ಬಿಡ್ತೀನಿ” ಎಂದ. ” ಏನಂಥಾ ಅರ್ಜೆಂಟ್ ನಾಳೆ  ಮೀಟ್ ಮಾಡಿದ್ದಾಯ್ತು ಬಿಡ್ರಿ” ಎಂದು ಮಂಜುಳ ಹೇಳಿದಳು. ” ಇಲ್ಲ ಕಣೆ. ಬೇಗ ಬಂದು ಬಿಡ್ತೀನಿ. ಅಡುಗೆ ಮಾಡಿ ಮುಗಿಸಿರು .ಬಂದ  ತಕ್ಷಣ ಊಟ ಮಾಡೋಣ” ಎನ್ನುತ್ತಾ ಹೊರಟೇ ಬಿಟ್ಟ. ಮಾಡಿದ  ಅಡುಗೆಯನ್ನೆಲ್ಲಾ ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟು ಸುರೇಶನಿಗಾಗಿ  ಕಾಯುತ್ತ ಕುಳಿತಳು. ಸುರೇಶನ  ಮೊಬೈಲ್ ಗೆ ಫೋನ್ ಮಾಡಿದರೆ ನಾಟ್ ರೀಚಬಲ್. ಸಿಟ್ಟು ಬಂದು ಕುಕ್ಕಿದಳು ಮಗುವಿಗೆ ಊಟ ಮಾಡಿಸಿ ಮಲಗಿಸಿದಳು. ಈಗ ಸುರೇಶನ ಮೊಬೈಲ್ ಗೆ ಫೋನ್ ಮಾಡಿದರೆ ಸ್ವಿಚ್ಡ್ ಆಫ್. ಎಲ್ಲಿಲ್ಲದ ಸಿಟ್ಟು ಉಕ್ಕಿ ಬಂತು. ಹೊಟ್ಟೆ ಹಸಿಯುತ್ತಿದ್ದರೂ ಇಬ್ರು ಜೊತೆಯಲ್ಲಿ ಮಾಡೋಣವೆಂದು ಸುಮ್ಮನಾದಳು. ಗಂಟೆ ಐದಾದರು

ಸುರೇಶನ ಸುಳಿವಿಲ್ಲ. ಫೋನ್ ಸ್ವಿಚ್ಡ್ ಆಫ್ ಮನದಲ್ಲಿ ಏನೇನೋ ಕೆಟ್ಟ ಯೋಚನೆಗಳು ಬರತೊಡಗಿ ಯಾಕೋ ಭಯದಿಂದ ದಿಕ್ಕು ತೋಚದಂತಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳೋಣ ಎಂಬ ಯೋಚನೆ ಬಂದ ಬೆನ್ನಲ್ಲೇ ಅವರು ಗಾಬರಿಯಾಗುತ್ತಾರೆಂದು ಬೇಡವೆನಿಸಿ ಸುಮ್ಮನಾದಳು.ಆದರೂ ಮನಸ್ಸು ತಡೆಯದೆ  ನಾದಿನಿ ಹೇಮಾಗೆ ಫೋನ್ ಮಾಡಿ  ವಿಷಯವನ್ನು ಹೇಳುತ್ತಲೇ ಅಳಲು ಶುರುಮಾಡಿದಳು. ಆಗ ಫೋನ್ ಕೈಗೆತ್ತಿಕೊಂಡ ಅವಳ ಮಾವ “ನಾವು ಈಗಲೇ ಹೊರಟು ಬರುತ್ತೇವೆ. ಧೈರ್ಯವಾಗಿರು  ಗಾಬರಿಯಾಗಬೇಡಮ್ಮ” ಎನ್ನುತ್ತಾ  ಅವಳ ಅತ್ತೆಯ ಕೈಗೆ ಫೋನ್ ಕೊಟ್ಟರು. ಅತ್ತೆಯೂ ಸಮಾಧಾನ ಹೇಳಿದರು. ಮನಸ್ಸಿಗೆ ಒಂದಿಷ್ಟು ನಿರಾಳ ಅನಿಸಿದಾಗ ಹೊಟ್ಟೆ ಚುರುಗುಟ್ಟ ತೊಡಗಿತು. ಊಟ ಮಾಡಲು ಮನಸ್ಸಾಗದೆ ಟೀ ಕುಡಿದಳು. ತೊಡೆ ಮೇಲೆ ಮಗುವನ್ನು ಮಲಗಿಸುತ್ತ ಕೂತಿದ್ದಳು. ಒಂಭತ್ತು ಗಂಟೆ ಸುಮಾರಿಗೆ  ತುಮಕೂರಿನಿಂದ ಅತ್ತೆ ಮಾವ ನಾದಿನಿಯು ಬಂದರು. ಅತ್ತೆ  ಒಳಗೆ ಬಂದ ತಕ್ಷಣವೆ ಮಂಜುಳನಿಗೆ ಬಲವಂತ ಮಾಡಿ ಊಟ ತಂದು ಕೊಟ್ಟರು. ಅವಳು  ಮಾತ್ರ ಒಂದಿಷ್ಟು ಮೊಸರನ್ನ ಮಾತ್ರ ಕಲೆಸಿ ತಿಂದಳು ಹೇಮಾ ಮಗುವಿನೊಡನೆ ಆಟವಾಡುತ್ತ ಕುಳಿತುಬಿಟ್ಟಳು “ಅಲ್ಲಾ ಚಿಕನ್ ತಂದುಕೊಟ್ಟು ಅಡುಗೆಮಾಡು ಅರ್ಧ ಗಂಟೆಯೊಳಗೆ ಬರ್ತಿನಿ ಅಂತ ಹೇಳಿಹೋದವನು ರಾತ್ರಿ

ಒಂಭತ್ತು ಗಂಟೆ  ಆದ್ರೂ ಬರಲಿಲ್ಲ ಅಂದ್ರೆ ಏನರ್ಥ? ಆ

ಹುಡುಗಿ ಏನು ತಿಳ್ಕಬೇಕು. ಯಾಕಿಂಗಾಗ್ಬಿಟ್ಟ ಸುರೇಶ”

ಎಂದು ಅಲವತ್ತುಕೊಂಡರು. “ನಿಮ್ಮಪ್ಪ ನಿಮ್ಮಮ್ಮನಿಗೆ

ಫೋನ್ ಮಾಡಿ ವಿಷಯ ತಿಳಿಸಿದಿಯೇನಮ್ಮ” ಎಂದು

ಮಾವನವರು ಕೇಳಿದಾಗ ಮಂಜುಳ “ಇಲ್ಲ” ಎಂದಳು.

“ಈಗ ನಾವು ಬಂದಿದೀವಲ್ವ. ಬೆಳಿಗ್ಗೆ ತನಕ ನೋಡೋಣ”

ಎಂದು ಮಾವನವರು ಹೇಳಿದಾಗ ” ಎಲ್ಲರಿಗು ತಾಕಲಾಟ

ತಂದಿಟ್ಟು ಎಲ್ಲೋಗಿದ್ದಾನಪ್ಪ ಇವನು” ಎಂದು ಅತ್ತೆಯು

ಹೇಳುವಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ. ಅರೆಕ್ಷಣ ನಿಶ್ಯಬ್ಧ.

” ಮಂಜು, ಮಂಜು”  ಎಂಬ ಸುರೇಶನ ಧ್ವನಿ ಕೇಳಿದ ಕ್ಷಣ

ಮಂಜುಳ ಧಡಕ್ಕನೆದ್ದು ಬಾಗಿಲು ತೆಗೆದಳು. ಒಳಗೆ ಬಂದ

ಸುರೇಶ ಅಪ್ಪ ಅಮ್ಮ ತಂಗಿಯನ್ನು ನೋಡಿ ಅವಾಕ್ಕಾಗಿ

ನಿಂತು ” ಏನಮ್ಮಾ ಇದ್ದಕ್ಕಿದ್ದಂತೆ ಬಂದು ಬಿಟ್ರಿ” ಎಂದಾಗ

“ಬರೋ ಹಾಗೆ ಮಾಡಿದ್ದು ನೀನೇ. ಬರಲೇ ಬೇಕಾಯ್ತು”

ಎಂದರು ಸುಶೀಲಮ್ಮ‌.” ನಾನೇನು  ಮಾಡಿದೆಅಂಥಾದ್ದು” ಎಂದು ಸುರೇಶ್ ಹೇಳಿದಾಗ “ಅರ್ಧಗಂಟೆ ಒಳಗೆ ಬಂದು ಬಿಡ್ತೀನಿ ಅಂತ ಹೋದವನು ರಾತ್ರಿ ಹತ್ತು ಗಂಟೆ ಆದ್ರು ಬರದಿದ್ರೆ ಆ ಹುಡುಗಿ ಏನು ತಿಳ್ಕಬೇಕು. ಗಾಬರಿ ಆಗ್ಬಿಟ್ಟು ನಮಗೆ ಫೋನ್ ಮಾಡಿದಳು. ನಮಗೂ ಗಾಬರಿಯಾಗಿ

ಬಂದ್ಬಿಟ್ಟವಪ್ಪ. ಎಲ್ಲೋಗಿದ್ದೆ ಇಷ್ಟು ಹೊತ್ತು. ರಾತ್ರಿ ಹತ್ತು

ಗಂಟೆ ಆದ್ರೂ ಬರದೇ ಇರೋ ಅಂಥಾ ಕೆಲಸ ಏನಿತ್ತಪ್ಪ?

ನೀನ್ಯಾಕೊ ಹಿಂಗಾದೆ ? ನಿನಗೆ ಹೇಳೋರು ಕೇಳೋರು ಯಾರು ಇಲ್ಲ ಅಂದುಕೊಂಡ್ಯಾ?  ಎಂದು ಜೋರುಧ್ವನಿ ಮಾಡಿ ಕೃಷ್ಣಮೂರ್ತಿ ಕೇಳಿ “ನಮಗೆ ಫೋನ್ ಮಾಡೋ ಬದ್ಲು ಅವಳು ಅವರಪ್ಪ ಅಮ್ಮನಿಗೆ ಫೋನ್ ಮಾಡಿದ್ರೆ ಏನಾಗ್ತಿತ್ತು ಅಂತ ಯೋಚನೆ ಮಾಡು” ಎನ್ನಲು ” ಫ್ರೆಂಡ್ಸ್ ಬಹಳ ಬಲವಂತ ಮಾಡಿದ್ರು. ಎಲ್ಲರೂ ನಂದಿಹಿಲ್ಸ್ ಗೆ ಹೋಗಿದ್ವಿ ಅಷ್ಟಕ್ಕೆಲ್ಲ ಇಷ್ಟು ರಾದ್ದಾಂತ ಬೇಕಿತ್ತ ಫೋನ್

 ಮಾಡಿ ಕರೆಸಿಕೊಳ್ಳ ಅಂಥಾದ್ದು ಏನಾಯ್ತು ” ಎನ್ನುತ್ತ ಸುರೇಶ  ಮಂಜುಳ ಕಡೆ ನೋಡುತ್ತ ಹೇಳಿದಾಗ ರೇಗಿದ ವೆಂಕಟೇಶ್  “ಆ ಹುಡುಗಿಗೆ ಒಂದು ಫೋನ್ ಮಾಡಿದ್ರೆ

ಅವಳ್ಯಾಕೆ ಗಾಬರಿ ಆಗ್ತಿದ್ದಳು. ಒಂದು ಮೆಸೇಜ್ ಹಾಕಕ್ಕೆ

ಏನಾಗಿತ್ತು? ಫೋನ್ ಸ್ವಿಚ್ ಆಫ್ ಮಾಡ್ಕಂಡ್ರೆ ಏನರ್ಥ?”

ನಾವ್ ಬರೋ ತನ್ಕ ಊಟಾನೂ ಮಾಡ್ದೆ ಕಾದುಕೊಂಡು ಕೂತಿದ್ದಳು. ಅದರ ಪರಿಜ್ಞಾನ ಇದ್ಯಾ”ಎಂದಾಗ ಮರು ಮಾತನಾಡದೆ  ರೂಮಿಗೆ ಹೋದನು.”ಅಣ್ಣಾ, ಬಾರೋ ಊಟಕ್ಕೆ “ಎಂದು ಕರೆಯಲು ಬಂದಾಗ” ನಂದು ಊಟ

ಆಗಿದೆ. ನೀವು ಮಾಡ್ರಿ” ಎಂದು ಹೇಳಿ ಮಲಗಿದನು. ಆ

ರಾತ್ರಿ ಗಂಡ ಹೆಂಡತಿಯ ನಡುವೆ ಮೌನ  ರಾಜ್ಯವಾಳಿತ್ತು. 

ಹೇಮಾಳಿಗೆ ರಜೆಗಳು ಹೆಚ್ಚಿಲ್ಲವೆಂದು ಮಾರನೆಯ ದಿನ

ತಿಂಡಿ ತಿಂದು ಹೊರಟರು. ಹೊರಡುವಾಗ ಕೃಷ್ಣಮೂರ್ತಿ

ಮಗನಿಗೆ ಕಿವಿಮಾತುಗಳನ್ನು ಹೇಳಿದರು. ಮತ್ತೊಮ್ಮೆ

ಇಂಥ ಘಟನೆಗಳು ಮರುಕಳಿಸಬಾರದೆಂದು ತಾಕೀತು

ಮಾಡಿದ್ರು. ಅಂದು ಸಂಜೆ ಆಫೀಸಿನಿಂದ ಬಂದ ಸುರೇಶ

ಹೆಂಡತಿ ಹಾಗು ಮಗುವನ್ನು ಹೊರಗಡೆ ಊಟಕ್ಕೆ ಕರೆದು

ಕೊಂಡು ಹೋದ. ಸಿಡುಕು, ಕೂಗಾಟ ಕಡಿಮೆಯಾಗುತ್ತ

ಬಂದಿದ್ದು ಮಂಜುವಿಗೆ ನೆಮ್ಮದಿ ತಂದಿತು. ಆಫೀಸ್ ಗೂ ಮನೆಗೂ ಬಹು ದೂರವಿದ್ದ ಕಾರಣ ಆಫೀಸ್  ಹತ್ತಿರವೇ ಮನೆ ಮಾಡುವ ಯೋಚನೆಯಿತ್ತು ಇಬ್ಬರಿಗೂ. ಎರಡು

ಬೆಡ್  ರೂಂ ಹೊಂದಿರುವ ಹೊಸ ಮನೆಯೊಂದು ಖಾಲಿ

ಇದೆಯೆಂದು ತಿಳಿದು ಮನೆ ನೋಡಿಕೊಂಡು ಬರೋಣ ಬಾ ಎಂದು  ಮಂಜುವನ್ನು ಜೊತೆಯಲ್ಲೇ ಕರೆದೊಯ್ದ.

ಪಕ್ಕದಲ್ಲೇ ಹೊಂದಿಕೊಂಡಿದ್ದ ಎರಡು ಮನೆಗಳು ಹೊಸ

ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಇಬ್ಬರಿಗೂ

ಇಷ್ಟವಾಯಿತು. ಪಕ್ಕದ ಮನೆಯವರು ಊರಿಗೆ ಹೋದ

ಕಾರಣ ಬೀಗ ಹಾಕಿತ್ತು. ಅಲ್ಲಿಂದಲೇ ಮನೆ ಮಾಲೀಕರಿಗೆ ಫೋನ್ ಮಾಡಿ ಸುರೇಶ ನಾಳೆಯೆ ಮುಂಗಡ ಹಣವನ್ನು

ಕೊಡುವುದಾಗಿ ತಿಳಿಸಿದ. ಮಗು ಇರುವುದರಿಂದ  ಹೊಸ  ಮನೆಗೆ  ಸಾಮಾನುಗಳನ್ನು ಜೋಡಿಸಲು ಕಷ್ಟವಾಗುತ್ತೆ

ಎಂದು ಸುಶೀಲಮ್ಮ ಹಿಂದಿನ ದಿನವೇ ಬಂದರು. ಎಲ್ಲಾ

ಹೊಂದಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಕ್ಕದ ಮನೆ

ಒಡತಿಯು ಇಬ್ಬರು ಮಕ್ಕಳೊಡನೆ ತಾವಾಗಿಯೆ ಬಂದು

ತನ್ನ ಹೆಸರು ಲತಾ ಎಂದು ರಕ್ಷಿತ ಮತ್ತು ರಾಘವೇಂದ್ರ ಮಕ್ಕಳೆಂದು ತಮ್ಮ ಪರಿಚಯ ಮಾಡಿಕೊಂಡು ಅವಳ

ಪತಿ ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿದರು. ಆಗ

ಅಲ್ಲೆ ಇದ್ದ ರಕ್ಷಿತ ” ಆಂಟೀ ನನಗೆ ನಿಮ್ಮ ಹೆಸರು ಗೊತ್ತು”

ಎಂದಳು. “ಹೌದಾ ಹೇಳು ನೋಡೋಣ”  ಮಂಜುಳ

ಹೇಳಿದಾಗ ” ನಿಮ್ಮ ಹೆಸರು ವಿಜಯಾ ಅಲ್ವಾ” ಎಂದಳು.

” ನನ್ನ ಹೆಸರು ಮಂಜುಳ. ನಿನಗೆ ವಿಜಯಾ ಅಂತ ಹೇಗೆ

ಗೊತ್ತಾಯ್ತು”ಎಂದಳು. ” ಅವತ್ತು ಮನೆ ಖಾಲಿಯಿತ್ತಲ್ಲ

ಅವಾಗ ಅಂಕಲ್ ಜೊತೆ ನೀವು ಬಂದಿದ್ದಾಗ ಅಂಕಲ್

ವಿಜಯಾ ಅಂತ ಹೇಳ್ತಿದ್ದರು” ಎಂದರು. ತಕ್ಷಣವೇ ಲತಾ

“ಇವರಲ್ಲ ಕಣೆ ಬೇರೆಯವ್ರು ” ಎಂದು ಹೇಳಿ ಮಕ್ಕಳನ್ನು

ಮನೆಗೆ ಕಳಿಸಿದಳು. ಮಂಜುಳ “ನಾವು ಮನೆ ನೋಡಲು 

ಬಂದಾಗ ನೀವಿರಲಿಲ್ಲ” ಎಂದಾಗ ಲತ ಅವರೆಲ್ಲ ಅವಳ 

ತವರು ಮನೆ ದಾವಣಗೆರೆಗೆ ಹೋಗಿದ್ದರು ಎಂದು ಹೇಳಿ

ಮನೆಗೆ ಹೊರಟಳು. ಎರಡು ದಿನ ಕಳೆದ ಮೇಲೆ ಸುಶೀಲ

ಊರಿಗೆ ಹೊರಟರು. ಉಳಿದ ಕೆಲಸಗಳನ್ನು ಮುಗಿಸುವ

ಕಾರ್ಯದಲ್ಲಿ ಸುರೇಶ ಸಹ ಹೆಂಡತಿಗೆ ನೆರವು ನೀಡಿದನು ಹೊಸ ಪರಿಸರದಲ್ಲಿ ತನ್ನ ಗಂಡನ ವರ್ತನೆಯಲ್ಲಾಗುತ್ತಿದ್ದ ಬದಲಾವಣೆ ನೋಡಿ ಮಂಜುಳನಿಗೆ ನಿರಾಳ. ಆದರೂ ಕೆಲವೊಮ್ಮೆ ಅವನ ಸಣ್ಣತನಗಳು ಅವಳಿಗೆ ವಿಚಿತ್ರವಾಗಿ 

ಕಂಡು ಬೇಸರಕ್ಕೆ ಕಾರಣವಾಗಿದ್ದವು. ಮೊನ್ನೆ ಅವರ ಕಡೆ ಸಂಬಂಧಿಕರೊಬ್ಬರು ತಮ್ಮ ಮಗಳ ಮದುವೆಗೆ ಆಹ್ವಾನ ಪತ್ರಿಕೆ  ಕೊಡಲು ಬಂದಾಗ ಊಟದ ವೇಳೆಯಾಗಿತ್ತು. ಆ  ದಿನ ಮಂಜುಳ ಚಿಕನ್ ಚಾಪ್ಸ್  ಎಗ್ ಕರಿ ಮಾಡಿದ್ದಳು . ಜೊತೆಯಲ್ಲಿ  ಊಟಕ್ಕೆ ಅವರು ಮತ್ತು ಸುರೇಶ ಕೂತರು . ಮುದ್ದೆ ಊಟ ಮಾಡುತ್ತಾ ಅವರು  ಚೆನ್ನಾಗಿ ಅಡುಗೆ ಮಾಡಿದೀಯಮ್ಮ ಎಂದು ಹೊಗಳಿದರೆ 

ಸುರೇಶ ಮಾತ್ರ ಮುದ್ದೆ ತಿಂದ ನಂತರ ಅನ್ನ ತಿನ್ನದೆ ಹಾಗೆ

ಎದ್ದು  ಬಂದವರಿಗೆ ನೀವು ನಿಧಾನವಾಗಿ ಊಟ ಮಾಡಿ ನನಗೆ ಸಾಕು ಎಂದು ಕೈ ತೊಳೆಯಲು ಎದ್ದನು.ಅವನ ಈ

ರೀತಿ ಮಂಜುಳನಿಗೆ ಎಳ್ಳಷ್ಟು ಸರಿ ಬರಲಿಲ್ಲ. ಬಂದವರು ಹೋದ ನಂತರ ಯಾಕೆ ಹಾಗೆ ಮಾಡಿದ್ರಿ ಎಂದರೆ “ನಾನು

ಚೆನ್ನಾಗಿ ಊಟ ಮಾಡಿದ್ರೆ ಅವರು ಸಹ ಚನ್ನಾಗಿ ಊಟ  ಮಾಡಿ ತಂದ  ಚಿಕನ್ ಎಲ್ಲಾ ಖರ್ಚಾಗುತ್ತಿತ್ತು. ಅದಕ್ಕಾಗಿ

ಹಾಗೇ ಮಾಡಿದೆ” ಎಂದು ಹೇಳಿದಾಗ ಅವನ ಸಣ್ಣತನ ಹಾಗು ಅತಿ ಬುದ್ಧಿವಂತಿಕೆ ನೋಡಿ ಇಂಥವರೂ ಉಂಟೇ 

ಎಂದು ಅಸಹ್ಯವಾಗಿತ್ತು. ಇಂತಹ ಸಣ್ಣತನಗಳ ಅರಿವೇ

ಇರದಿದ್ದ  ಮಂಜುಳನಿಗೆ ಅವನ ವರ್ತನೆಯಿಂದ ಭ್ರಮ ನಿರಸನವಾಗಿತ್ತು.  

ಆ ದಿನತರಕಾರಿ ಹಾಗು ಬಳೆಗಳನ್ನು ಕೊಳ್ಳಬೇಕೆಂದು ರೆಡಿಯಾಗಿ ಹೊರಡುವಾಗ  ರಕ್ಷಿತ  ಬಂದು ಸಿರಿಯನ್ನು ಎತ್ತಿಕೊಂಡು “ನೀವು ತರಕಾರಿ ತಗೊಂಡು ಬರೋತನಕ ನಾನು ಸಿರಿನ ಆಟ  ಆಡಿಸ್ತಾ ಇರ್ತಿನಿ. ನೀವು ಹೋಗಿ ಬನ್ನಿ” ಎನ್ನುತ್ತಾ ಎತ್ತಿಕೊಂಡು ಹೋದಳು. ಮಂಜುಳ ಅವರ ಅಮ್ಮನಿಗೆ ತಿಳಿಸಿ ಹೊರಟಳು. ತರಕಾರಿ ತೆಗೆದು ಕೊಂಡ ನಂತರ ಬ್ಯಾಂಗಲ್ಸ್ ಸ್ಟೋರ್ಸ್ ಕಡೆ ಹೊರಟಳು. ಅವಳ ಬ್ಯಾಂಗಲ್ಸ್  ಶಾಪ್ ಹತ್ತಿರಕ್ಕೆ ಬಂದಾಗ ಸುರೇಶ  ಸನಿಹದಲ್ಲೆ ರೋಡ್ ಸೈಡ್ ಲ್ಲಿ ಬೈಕ್ ನ್ನು ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಅಲ್ಲಿಗೆ  ಹೋಗುವಷ್ಟರಲ್ಲೇ  ಯುವತಿಯೊಬ್ಬಳು  ಬ್ಯಾಂಗಲ್ಸ್ ಶಾಪ್ ನಿಂದ ಹೊರ ಬಂದು ಸುರೇಶನ ಬೈಕ್  ನ ಬಳಿ

ನಿಂತಳು. ಮಾತನಾಡುತ್ತಿದ್ದ ಸುರೇಶ ಹಿಂದೆ ತಿರುಗಿದಾಗ 

ಮಂಜು ನನ್ನು ನೋಡಿಬಿಟ್ಟನು.ತಕ್ಷಣ ಬೈಕ್ ಸ್ಟಾರ್ಟ ಮಾಡಿದಾಗ  ಆ ಯುವತಿ ಬೈಕ್ ಹತ್ತಿ ಕೂತೂಡನೆ ಹೊರಟು ಬಿಟ್ಟರು.

ತನ್ನ ಕಣ್ಣೆದುರಿಗೆ ನಡೆದ ಈ ಘಟನೆಯಿಂದ ಒಂದು ಕ್ಷಣ

ಅವಾಕ್ಕಾಗಿ ನಿಂತ ಮಂಜುಳ ಸಾವರಿಸಿಕೊಳ್ಳುವಷ್ಟರಲ್ಲಿ

ಬೈಕ್ ಕಣ್ಮರೆಯಾಯಿತು. ಅಲ್ಲಿಂದ  ಬಂದವಳೇ ಪಕ್ಕದ

ಮನೆಗೆ ಹೋಗಿ ಸಿರಿಯನ್ನೆತ್ತಿಕೊಂಡು ಬರುವಾಗ  ಲತಾ

” ಕೂತ್ಕೂಳ್ರಿ. ಯಾಕೆ ಒಂಥರಾ ಇದೀರಾ” ಎಂದಾಗ “ತಲೆ

ನೋಯ್ತಿದೆ. ಅಡುಗೆ ಬೇರೆ ಮಾಡ್ಬೇಕು” ಎಂದು ಹೇಳಿ ಮನೆಗೆ ಬಂದ ತಕ್ಷಣ ಏನೂ ತೋಚದಂತಾಗಿ ಸುಮ್ಮನೇ ಸೋಫಾದ ಮೇಲೆ ಕುಳಿತು ಬಿಟ್ಟಳು. ಅವಳ  ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಂಥ ನೋವಿನಿಂದ ಜರ್ಜರಿತಳಾಗಿ  ದುಃಖದಿಂದ ಅಡೆತಡೆಯಿಲ್ಲದೆ ಅತ್ತುಬಿಟ್ಟಳು. ಅದನ್ನು

ಕಂಡ ಸಿರಿಯು ಅಳತೊಡಗಿದಾಗ ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಅತ್ತಳು. ಸಿರಿಗೆ ಊಟ ಮಾಡಿಸಿ ತಾನು

ಊಟ ಮಾಡದೆ  ಅವಳನ್ನು ಮಲಗಿಸಿದಳು. ತಲೆಯಲ್ಲಿ

ನಾನಾ ಯೋಚನೆಗಳು ಬರತೊಡಗಿದವು. ಇತ್ತೀಚೆಗೆ

ಅವನ ವರ್ತನೆಗಳಲ್ಲಿ ಮೊದಲಿನ ಸಿಡುಕು ಅಸಹನೆಯು

ಇಲ್ಲದೆ ಇದ್ದದ್ದು ಅವಳಿಗೆ ನೆಮ್ಮದಿಯಾಗಿತ್ತು. ಆದೆಲ್ಲವೂ

ಕೇವಲ ತೋರಿಕೆಯದೆನಿಸಿತು. ಅವಳನ್ನು ಏಮಾರಿಸಲು ಮಾಡಿದ ತಂತ್ರವೆನಿಸಿತು.. ಮೊದಲಿಗೆ ಅವನಲ್ಲಿ ಕಂಡು

ಬರುತ್ತಿದ್ದ ಸಿಡುಕು, ಒರಟು ಮಾತುಗಳಿಗೆ ಕಾರಣವೂ ತಿಳಿಯಿತು ನನ್ನ ಕಣ್ಣೆದುರಿಗೆ ಬೇರೊಬ್ಬಳನ್ನು ಬೈಕ್ ನಲ್ಲಿ ಕೂಡಿಸಿಕೊಂಡು ಕರೆದೊಯ್ದ ಅವನ ಭಂಡತನ ಕಂಡು ಎಲ್ಲಿಲ್ಲದ  ಸಿಟ್ಟು ಒತ್ತರಿಸಿ ಬರುತ್ತಿತ್ತು. ಅಪ್ಪ ಅಮ್ಮನಿಗೆ

ಫೋನ್ ಮಾಡಿ ತಿಳಿಸಲೇ ? ಅತ್ತೆ ಮಾವನಿಗೆ ಹೇಳಲೇ?

ಅದಕ್ಕೂ ಮುಂಚೆ ನಾನೇ ನೇರವಾಗಿ ಸುರೇಶನನ್ನು ಕೇಳಿ 

ತಿಳಿಯಲೇ ? ಇದೆಲ್ಲ ಎಷ್ಟು ದಿನದಿಂದ  ನಡೆದಿರಬಹುದು

ಮೊದಲಿನಿಂದಲೂ ಇತ್ತೆ? ನನಗೇಕೆ ಇಂಥ ಗಂಡ ಸಿಕ್ಕಿದೆ ?

ಅವನ ಕೆಲವೊಂದು ವರ್ತನೆಗಳ ಕಾರಣ ಅರಿವಾಯಿತು

ಥಟ್ಟನೆ ಪಕ್ಕದ್ಮನೆ ಹುಡುಗಿ ರಕ್ಷಾ “ನಿಮ್ಮ ಹೆಸರು ವಿಜಯ

ಅಲ್ವ ನಂಗೆ ಮೊದಲೆ ಗೊತ್ತು” ಎಂದು ಹೇಳಿದ್ದು  ಥಟ್ಟನೆ

ನೆನಪಾಗಿ  ಅದರ  ಹಿನ್ನೆಲೆ ಈಗ  ಗೊತ್ತಾಯ್ತು. ಅಂದರೆ

ಸುರೇಶ ನನಗಿಂತ ಮುಂಚೆ ಅವಳನ್ನು ಕರೆದುಕೊಂಡು

ಬಂದು ಈ ಮನೆಯನ್ನು ತೋರಿಸಿದ್ದಾನೆ? ಅವಳ ಹೆಸರು

ವಿಜಯಾ ಇರಬೇಕು? ನಾನು ಈ ಮನೆಯನ್ನು ನೋಡ ಬಂದಾಗ ಪಕ್ಕದ ಮನೆಯವರು ಊರಿಗೆ ಹೋಗಿದ್ದೆಲ್ಲಾ

ನೆನಪಿಗೆ ಬಂದು ಎಷ್ಟೊಂದು ಮುಂದುವರಿದಿದೆ ವಿಷಯ ಗಂಡನ  ನಯವಂಚಕತನ ಅವಳಿಗೆ ಆಘಾತ ತಂದಿತ್ತು.

ಮನೆಗೆ ಕರೆತರುವಷ್ಟು ಮೊಂಡು ಧೈರ್ಯವೇ ? ಬರಲಿ ಮನೆಗೆ  ನನ್ನ ಪ್ರಶ್ಟೆಗಳಿಗೆ  ಏನು ಉತ್ತರ ಕೊಡುತ್ತಾರೆ

ಗೊತ್ತಾಗುತ್ತೆ. ಬಾಗಿಲು ತಟ್ಟಿದ ಶಬ್ದ ಕೇಳಿ ಎದ್ದು ಬಂದು

ಬಾಗಿಲು ತೆಗೆದು  ಹೋಗಿ ಮಲಗಿದಳು. ಸುರೇಶ ಬಟ್ಟೆ

ಬದಲಾಯಿಸಿ ರೂಂ ಬಾಗಿಲಲ್ಲಿ ನಿಂತು ” ಊಟ ಬಡಿಸು

ಬಾರೆ” ಎಂದ ತಕ್ಷಣ  ಸಿಟ್ಟಿನಿಂದ “ಯಾರ್ರಿ  ಅವಳು ಎಷ್ಟು

ದಿನದಿಂದ ನಡೀತಾ ಇದೆ ?  ವಿಜಯಾ ಅನ್ನವಳು ಇವಳೆ

ಇರಬೇಕು. ಥೂ ನಿಮಗೆ ನಾಚ್ಕೆ ಆಗೆಲ್ಲಾ ನನ್ನ ಕಣ್ಣೆದುರಿಗೆ

ಯಾವಳನ್ನೊ ಕರ್ಕೊಂಡು ಹೋಗ್ತೀರ. ಎಷ್ಟು ಧೈರ್ಯರಿ

ನಿಮಗೆ”ಎಂದು ಜೋರಾಗಿಯೇ ಕೇಳಿದಳು. ಇದನ್ನೆಲ್ಲಾ ನಿರೀಕ್ಷಿಸಿದ್ದ  ಸುರೇಶ  ಆದರೆ ವಿಜಯಾ ಎಂಬ ಹೆಸರು

ಕೇಳಿ ಮುಖ ವಿವರ್ಣವಾಯಿತು. “ಸುಮ್ಮನೇ ಇದೀನಿ

ಅಂತ ಬಾಯಿಗೆ ಬಂದಿದ್ದು ಬೊಗಳ್ತೀಯಾ ಅತಿ ಆಯ್ತು

ಬಿಟ್ಟರೆ ನೋಡು ಹೆಂಗಿರಬೇಕು” ಎಂದು ಅವಳ ಬೆನ್ನಿಗೆ

ಗುದ್ದಿದನು. ಆಗ ಅವಳು ಜೋರಾಗಿ ಅಳುತ್ತ”ಹೊಡೆದು

ಸಾಯಿಸಿಬಿಡ್ರಿ.ಯಾವ ಅಡ್ಡಿ ಆತಂಕವೂ ಇರಲ್ಲ ಅವಳ

ಜೊತೆಗಿರಕ್ಕೆ” ಎಂದಾಗ ” ಎಷ್ಟು ಮಾತಾಡ್ತೀಯೆ. ಹೌದು ಅವಳ ಜೊತೆಗೇ ಇರ್ತಿನಿ ಏನು ಮಾಡ್ತೀಯ ಮಾಡ್ಕೋ

ಹೋಗು ” ಎಂದು ರೂಂ ನಿಂದ ಹೊರಗೆ ಹೋದನು. ಈ

ಗಲಾಟೆಯಿಂದ ಎದ್ದ ಸಿರಿ ಅಳುತ್ತಿದ್ದ ಅಮ್ಮನನ್ನು ಕಂಡು

ಅವಳ ತೊಡೆಯ ಮೇಲೆ ಕುಳಿತಿತು. ಅಳುತ್ತಿದ್ದ ಮಂಜು 

ಎದ್ದು ರೂಂ ಬಾಗಿಲಿಗೆ ಚಿಲಕ ಹಾಕಿ ಮಲಗಿಕೊಂಡಳು.

ಮಗುವನ್ನು ಮಲಗಿಸಿ ತಾನು ಮಾತ್ರ ನಿದ್ದೆಯಿಲ್ಲದೆ ರಾತ್ರಿ

ಕಳೆದಳು. ಮಲಗಿದಾಗ ಅವಳಿಗೆ ತನ್ನ  ಸ್ಥಿತಿಯ  ಬಗ್ಗೆ 

ಹೀನಾಯವೆನಿಸಿತು. ಪ್ರೀತಿಯೆಂಬುದು ತಾನಾಗೆ ಒಲಿವ 

ಭಾವವೆ ಹೊರತು ಅತ್ತು ಕರೆದು ಕಾಡಿ ಬೇಡಿ ಪಡೆಯುವ

ವಸ್ತುವಲ್ಲ ಎಂಬುದನ್ನೂ ತಿಳಿದು ನಾನ್ಯಾಕೆ ಹೀಗಾಡುವೆ.

ಅದು ನನ್ನ ಹಕ್ಕಲ್ಲವೇ ? ಹಕ್ಕು ಕರ್ತವ್ಯಗಳಿಗೂ ಮೀರಿದ ವಿಷಯವಲ್ಲವೇ ಪ್ರೀತಿ. ವಂಚನೆಯ ಜೊತೆಗೆ ಅವನು ಹೊಡೆದದ್ದು ಅವಳ ಮನವನ್ನು  ಮತ್ತಷ್ಟು ರೇಗಿಸಿತ್ತು  

ನಮ್ಮಪ್ಪ ಅಮ್ಮನೇ ನನಗೆ ಒಂದು ದಿನವು ಹೊಡೆದಿಲ್ಲ 

ಅಂತಹುದರಲ್ಲಿ ತನಗಾದ ಅನ್ಯಾಯವನ್ನು ಕೇಳಿದರೆ ಈ

ರೀತಿಯ ದೌರ್ಜನ್ಯ ಮಾಡುತ್ತಾನೆ ಎಂದು ಸಿಟ್ಟು ಬಂತು   ಹೀಗೆ ಬಿಟ್ಟರೆ  ಎಲ್ಲಿಗ ಮುಟ್ಟುತ್ತೋ. ಹೀಗೆ  ಅವಳಲ್ಲಿನ

ನಾನಾ ಯೋಚನೆಗಳು ನಾನಾ ದಿಕ್ಕುಗಳಲ್ಲೂ ಹರಿದಾಡಿ ಭಾರವಾದ ಮನದೊಡನೆ ಹೊರಳಾಡುತ್ತಲೇ ಇರುಳನ್ನು ಕಳೆದಳು.

ಮಾರನೆ ದಿನ ಸುರೇಶ ಇವಳು ಏಳುವ ಮುಂಚೆಯೇ ಎದ್ದು ತಾನೆ ಕಾಫಿ ಮಾಡ್ಕಂಡು ಕುಡಿದು ಪತ್ರಿಕೆ  ಓದುತ್ತ 

ಕುಳಿತಿದ್ದ. ಮಂಜುಳ  ಎದ್ದು ಮಗುವಿಗೆ ಹಾಲು ಕುಡಿಸಿ 

ಸ್ನಾನ ಮಾಡಿಸಿ ತಿಂಡಿ ಮಾಡದೆ ತಾನೂ ಸ್ನಾನ ಮುಗಿಸಿ ಕಾಪಿ ಕುಡಿದು ಬಂದು  ಮಲಗಿದಳು. ಸುರೇಶನು ಸ್ನಾನ

ಮಾಡಿ ಆಫೀಸಿಗೆ ಹೊರಡಲು ಅನುವಾದನು. ಅವನು

ಹೋದ ಮೇಲೆ ಫ್ರಿಡ್ಜ್ ನಲ್ಲಿಟ್ಟಿದ್ದ ದೋಸೆ ಹಿಟ್ಟು ತೆಗೆದು

ಚಟ್ನಿ ಮಾಡಿ ಮಗುವಿಗೆ ದೋಸೆ ಹಾಕಿಕೊಟ್ಟು ತಾನೂ

ತಿಂದಳು. ಮನಸಿಗೆ ಬೇಡವಾದರೂ ಹೊಟ್ಟೆ ಕೇಳುತ್ತಲ್ಲ! ದೇವರ ಪೂಜೆ ಮಾಡುವಾಗ  ದುಃಖದಿಂದ ಅಳು ಬಂದು 

ಅಳುತ್ತಲೆ ಪೂಜೆ ಮುಗಿಸಿದಳು. ನಂತರ ಮಧ್ಯಾಹ್ನದ

ಅಡುಗೆ ಮಾಡಿಟ್ಟು ಕೂತಳು. ಸಿರಿಗೆ ಬೇಕಲ್ಲ !  ಬಾಗಿಲು

ತಟ್ಟಿದ ಶಬ್ದವಾಯಿತು. ತೆಗೆದರೆ ಹದಿನೈದು ದಿನದ ಹಿಂದೆ

ಸುರೇಶ ಉದ್ಯೋಗ ಕೊಡಿಸುವ ಭರವಸೆಯನ್ನು ಕೊಟ್ಟ

ಯುವಕ. ಕೈಯಲ್ಲೊಂದು ದೊಡ್ಡ ಬ್ಯಾಗು. “ನಮಸ್ಕಾರ

ಮೇಡಂ, ಸರ್ ಇದ್ದಾರ ಬರಲಿಕ್ಕೆ ಹೇಳಿದ್ರು” ಎನ್ನುತ್ತಲೇ

ಒಳಗೆ ಬಂದನು..ಬ್ಯಾಗಿನಿಂದ  ಬೆಳ್ಳಿಯ ಲೋಟ, ದೊಡ್ಡ ತಟ್ಟೆ,ಪಂಚಪಾತ್ರೆ ಅರಿಶಿನ ಕುಂಕುಮದ ಬಟ್ಟಲು,  ಅರ್ಧ ಅಡಿ ಎತ್ತರವಿದ್ದ ದೀಪಸ್ತಂಭ ಎಲ್ಲವನ್ನು ಒಂದೊಂದಾಗಿ ಬ್ಯಾಗಿಂದ ತೆಗೆದು ತೆಗೆದು ಟೇಬಲ್  ಮೇಲಿಟ್ಟನು. ತಕ್ಷಣ

ಎಚ್ಚೆತ್ತು ಮಂಜು “ಇದೆಲ್ಲಾ ಯಾಕೆ?” ಎಂದಳು. ಅವನು “ನಮ್ಮತ್ರ ಲಂಚ ಕೊಡಕ್ಕೆ ಕ್ಯಾಶ್ ಇಲ್ಲ. ಇದನ್ನೆಲ್ಲಾ ನೀವು

ಬೇಕಾದ್ರು ತಗೊಳ್ರಿ ಅಥವಾ ಮಾರಿಸಿಕೊಡಿ. ನಮ್ಮಮ್ಮ

ಇಷ್ಟು ವರ್ಷ ಎಷ್ಟು ಕಷ್ಟ ಆದ್ರೂ ಮಾರಿರಲಿಲ್ಲ. ನನಗೆ

ಒಂದು ಕೆಲ್ಸ ಸಿಕ್ಕಿದ್ರೆ ಸಾಕು ಅಂತ ನಮ್ಮಮ್ಮ ಇದನ್ನೆಲ್ಲಾ

ಕೊಟ್ರು” ಎಂದ. ಆಗ ಮಂಜು “ನನ್ನ ಮಾತು ಕೇಳ ಪ್ಪಾ.

ಮೊದಲು ಇದನ್ನೆಲ್ಲಾ ಬ್ಯಾಗಲ್ಲಿ ಇಡು. ಮನೆಗೆ ಹೋಗಿ ವಾಪಸ್  ನಿಮ್ಮಮ್ಮನ ಕೈಗೆ ಕೊಡು.”ಎಂದಳು. “ಯಾಕೆ

ಮೇಡಂ” ಎಂದ. “ಯಾಕೆ ಏನು ಅಂತ ಕೇಳ್ಬೇಡ. ನಿಮ್ಮ

ಸರ್  ನನ್ನನ್ನು ಕೇಳಿದ್ರೆ  ನೀನು ಮನೆಗೆ ಬಂದಿಲ್ಲ ಅಂತ ಹೇಳ್ತೀನಿ. ನೀನು ನಿನಗೆ ಏನು ಬೇಕೋ ಅದನ್ನು ಹೇಳು. ಹೆಚ್ಚಾಗಿ ಏನು ಕೇಳ್ಬೇಡ. ನಿನ್ನ ಒಳ್ಳೇದಕ್ಕೆ ಹೇಳ್ತೀನಿ. ಬೇಗ

ತಗೊಂಡು ಹೋಗು. ನಿನಗೆ ಅರ್ಥ ಆಯ್ತು ಅನ್ಕೋತಿನಿ”

ಎನ್ನಲು.ಅವನು ಮರು ಮಾತನಾಡದೆ ಹೊರಟುಹೋದ    

ಒಂದು ಬಡ  ಕುಟುಂಬಕ್ಕ  ಸಹಾಯ ಮಾಡಿದ ನಿರಾಳ 

ಭಾವವನ್ನು ಅಂತಹ ಒಡಲ ಕಿಚ್ಚಿನಲ್ಲು ಅನುಭವಿಸಿದಳು 

ಸಿರಿಗೆ ಮೂರು ವರ್ಷ ತುಂಬುತ್ತ ಬಂದಿದೆ ನಾನೂ ಸಹಾ ಇನ್ಮುಂದೆ ಒಂದು ಉದ್ಯೋಗಕ್ಕೆ ಸೇರಬೇಕೆಂಬ ಒಳಗಿನ

ಆಸೆ ಬಲವಾಗತೊಡಗಿತು. ಮೊಟ್ಟ ಮೊದಲ ಬಾರಿಗೆ ತಾನು ಆರ್ಥಿಕವಾಗಿ  ಸ್ವಾವಲಂಬಿಯಾಗಬೇಕೆನಿಸಿತು.

ತಾನೊಬ್ಬಳೇ ಒಂಟಿ ಎಂಬ ಭಾವ ಆವರಿಸಿ ಅವಳ ಮನೆ

ಮೌನವಾಗಿ ರೋದಿಸಿತು. ತನಗೆ ಫೀಲ್ಡ್ ವರ್ಕ್ ಇರುವ 

ಕಾರಣ ಸಂಜೆ ಮನೆಗೆ ಬರಕವುದು ಸ್ವಲ್ಪ ತಡವಾಗುತ್ತದೆ. ರಾತ್ರಿ ಅಡುಗೆ ಮಾಡಿರು ಎಂಬ ಮೆಸೇಜ್ ಸುರೇಶನಿಂದ ಬಂದಿತ್ತು. ಅದಕ್ಕೆ ಉತ್ತರಿಸುವ  ಗೋಜಿಗೆ ಹೋಗಲಿಲ್ಲ ಅಮ್ಮನಿಗೆ ಫೋನ್ ಮಾಡಿ “ಅಮ್ಮ ತುಂಬಾ ಬೇಜಾರು  ಸ್ವಲ್ಪ ದಿನ ಊರಿಗೆ ಬರ್ತಿನಮ್ಮ ಮತ್ತೆ ನಾನು ಕೆಲಸಕ್ಕೆ ಸೇರಬೇಕು ಅಂದ್ಕಂಡಿದೀನಿ. ಸಿರಿನೂ ದೊಡ್ಡವಳಾದಳು  ಅಲ್ವಾ” ಎಂದಾಗ”ಆಯ್ತು ಬಾ ಬಂದಾಗ ಮಾತಾಡೋಣ ಅದೇನು ಇದ್ದಕ್ಕಿದ್ದಂತೆ ಈ ಯೋಚನೆ” ಎಂಬ ಅಮ್ಮನ ಪ್ರಶ್ನೆಗೆ ” ಮನೇಲಿ  ಟೈಂ ಪಾಸ್ ಮಾಡದು ಕಷ್ಟ. ಅದಕ್ಕೆ ಈ ನಿರ್ಧಾರ ಮಾಡ್ದೆ ಅಮ್ಮ” ಎಂದಳು. ಊರಿಗೆ ಹೋದ  ಮೇಲೆ ಸುರೇಶನ ಈ ಹಗರಣವನ್ನೆಲ್ಲ  ಅಪ್ಪ ಅಮ್ಮನಿಗೆ ಮಾತಾಡಿ  ಅವರು ಸಲಹೆಯನ್ನು ಕೇಳೋಣ ಎಂದು ತೀರ್ಮಾನ  ಮಾಡಿದಳು. ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದರಿಂದ

ಊಟ ಮಾಡಿದೊಡನೆ  ಮಗಳೊಂದಿಗೆ ಮಲಗಿದಳು.

ರಾತ್ರಿ ಉಪ್ಪಿಟ್ಟು ಮಾಡಿಟ್ಟಳು. ಸುರೇಶ ಬಂದು ತಾನೇ

ಹಾಕಿಕೊಂಡು ತಿಂದು ಸಿರಿಯ ಜೊತೆಯಲ್ಲಿ ಟಿ. ವಿ. ನೋಡುತ್ತಿದ್ದಾಗ ಮಂಜು ” ನಾನು ನಾಳೆ ನಮ್ಮಮ್ಮನ ಮನೆಗೆ ಹೋಗುತ್ತೇನೆ” ಎಂದು ಸುರೆಶನಿಗೆ ಮೆಸೇಜ್

ಮಾಡಿದಳು. ಅದನ್ನು ನೋಡಿದ ಸುರೇಶ ಸಿರಿಯನ್ನು ಹೋಗು ಅಮ್ಮನ ಜೊತೆ ಮಲಗು ” ಎಂದು ಕಳಿಸಿದ  ಸಿರಿ ಮಲಗಿರುವುದು ಖಾತ್ರಿಯಾದ ಮೇಲೆ ರೂಂ ನ

ಬಾಗಿಲಲ್ಲಿ ನಿಂತು ” ಮಂಜು” ಎಂದು ಮೆಲ್ಲಗೆ ಕೂಗಿದ ಅವನ ಧ್ವನಿ ಕೇಳಿದ ಕೂಡಲೇ ನಿದ್ದೆ ಬಂದಂತೆ ಕಣ್ಮುಚ್ಚಿ

ಕೊಂಡಳು. ಸ್ಪಲ್ಪ ಹೊತ್ತಾದ ನಂತರ ಮಲಗಿದ್ದ ಅವಳ

ಕೆನ್ನೆಯನ್ನು ಮುಟ್ಟಿ ” ಸಾರಿ ಕಣೆ” ಎಂದಾಗ ಅವಳೆದ್ದು

ಕೂತು ” ನಿಮ್ಮ ಸಾರಿ ಯಾವಳಿಗೆ ಬೇಕು. ನನಗೆ ಯಾರ

ಜೊತೆ ಮಾತಾಡಕ್ಕೂ ಇಷ್ಟ ಇಲ್ಲ  ಸ್ಪಲ್ಪ ದಿನ  ನಾನೊಬ್ಬಳೆ

ಇರಬೇಕು. ಹೋಗ್ತಿದೀನಿ ಅಷ್ಟೆ” ಎಂದು ಹೇಳುವಷ್ಟರಲ್ಲಿ

ಅವಳ ಕಣ್ಣಾಲಿಗಳು ತುಂಬಿ ಬಂದವು. ಅವಳ ಪಕ್ಕದಲ್ಲಿ

ಅವನು ಕುಳಿತುಕೊಳ್ಳುವಷ್ಟರಲ್ಲಿ ಅವಳು ಎದ್ದು ಪಕ್ಕದ

ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡಳು.

One thought on “ತಟ್ಟಿದ ತಾಳ

  1. ಚೆನ್ನಾಗಿದೆ ಕತೆ. ಸ್ವಲ್ಪ ಮುಂದುವರೆಸಬಹುದಿತ್ತು..

Leave a Reply

Back To Top