ರೊಟ್ಟಿ ತೊಳೆದ ನೀರು
ಕಥೆ ರೊಟ್ಟಿ ತೊಳೆದ ನೀರು ಶಾಂತಿವಾಸು ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು […]
ಎತ್ತ ಈ ಪಯಣ…?
ಕವಿತೆ ಎತ್ತ ಈ ಪಯಣ…? ಕೆ.ಲಕ್ಷ್ಮೀ ಮಾನಸ ದಿಕ್ಕಿಗೊಂದು ಹಾದಿಯಿರಲು,ಎತ್ತಲೂ ಹಾಯದಾಗಿ,ಕಂಡದ್ದು ಕಾಣದಾಗಿ,ಅರಿತದ್ದು ಆರಿಯದಾಗಿ,ಗೊಂದಲದ ಗೂಡಾಗಿ,ದುಗುಡವು ಮಾಯದಾಗಿ,ಸಾಗುತಿದೆ ಪಯಣವೊಂದು,ತೋಚಿದ ಗತಿಯಲ್ಲಿ…… ಕತ್ತಲೆಯ ನರ್ತನದಲ್ಲಿ,ಭ್ರಮೆಗಳು ಮುಕ್ಕಿದರೂ,ಮನದ ದನಿಯೊಂದು,ಮಾಸಿದ ಹಾದಿಗೆ,ಕಿರುಬೆಳಕ ಸೂಸಿ,ಹಾಸಿದ ಹಾದಿಯಲ್ಲಿ,ಹಾಕುವ ಹೆಜ್ಜೆಗಳಿಗೆ,ನಿಶೆಯ ದರ್ಶನವೋ?ತಾರೆಗಳ ಭಾಗ್ಯವೋ…..? *************************
ಆ ಕಾಲವೊಂದಿತ್ತು..
ದೇವಯಾನಿ ಬರೆಯುತ್ತಾರೆ—
ಬರೆಯಬೇಕು , ಬರೆದುದನು ಸಂಭ್ರಮಿಸಬೇಕು ನಿಜ .ಆದರೆ ಬರವಣಿಗೆ ಮಾಗುವವರೆಗೂ ತಾಳ್ಮೆಯಿಂದ ಕಾಯಬೇಕು…
ಅಂಕಣ ಬರಹ
ಅದ್ಯಾಯ-01
ಅಂತಃಕರುಣೆಯ ಹುಡುಕುತ್ತಾ.….
ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ—ಒಂದು
ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ
ಮೌನೇಶ್ವರರ ಲೋಕದೃಷ್ಟಿ ಅತಿ ಮುಖ್ಯವಾ ದುದು.ಅವರು ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಕುರಿತು ಮೌನೇಶ್ವರರು
ವಿಪ್ರಲಂಭೆಯ ಸ್ವಗತ
ಬಿ.ಶ್ರೀನಿವಾಸ್ ಕವಿತೆಯಲ್ಲಿ
ಚರಿತ್ರೆಯಲೂ ಇರದ
ವರ್ತಮಾನಕೂ ಸೇರದ
ಇಂದು…
ಮತ್ತು
ನಾಳೆಗಳ…
ನಡುವೆ ಸಿಕ್ಕ ಜೀವಗಳು ನಾವು.
ಹಾಯ್ಕುಗಳು
ಹಾಯ್ಕುಗಳು ವಿ.ಹರಿನಾಥ ಬಾಬು 1)ತುಟಿಗೆ ತುಟಿಅದೆಂಥಾ ಕಾತುರವೋಮಿಲನ ಸುಖ 2)ನಿನ್ನ ಹುಡುಕಿನಾನು ಕಳೆದುಹೋದೆಜೀವನ ಧನ್ಯ 3)ಇಲ್ಲೇ ಇದ್ದೇವೆನಾನು ನೀನು ಇಬ್ಬರೂಮತ್ಯಾಕೆ ಚಿಂತೆ 4)ಆಸೆಯ ಬೆಂಕಿಆರಗೊಡದಿರು ನೀಸುರಿಯೇ ಮಳೆ 5)ಹನಿ ಉದುರಿನೆಲ ನಸು ನಕ್ಕಾಗಜೀವ ಸಂಚಯ 6)ಹೂವು ಅರಳಿಜಗವೆಲ್ಲಾ ಶ್ರೀಗಂಧತಾಯ ನೆನಪ ು7)ಹೇಗಿರಲಿ ನಾದೂರವಾದರೆ ನೀನುಬಾಡಿದ ಮೊಗ 8)ನಿನ್ನ ಹುಡುಕಿಅಂಡಲೆವ ಮನಸುಸುಳಿವ ಗಾಳಿ 9)ಮನದ ಮೀನುವಿಹರಿಸೆ ಪ್ರಶಾಂತಹರಿವ ನದಿ **********************************************************************
ಒಬ್ಬಂಟಿ…!
ಕವಿತೆ ಒಬ್ಬಂಟಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಅನಾಥಎಲ್ಲ ಒಬ್ಬೊಬ್ಬರೂ ಅಪ್ರತಿಮಅನಾಥತೆಯ ಒಬ್ಬಂಟಿ! ಇರುವವರೆಲ್ಲ ಒಂದಿನಿತು ಇದ್ದುಎದ್ದು ಎತ್ತೆತ್ತಲೋ ಸಾಗುವವರುಬರುವವರೆಲ್ಲ ಸಹ ಕ್ಷಣಕಾಲಬಂದು ಹಾಗೇ ಹೋಗುವವರು ಕೊನೆಗೆಮತ್ತೆ ಒಬ್ಬಂಟಿಮತ್ತೆ ಮತ್ತೆ ಅಂಥದೇ ಒಬ್ಬಂಟಿತನಆಜೀವಪರ್ಯಂತ…ಇದು ಬದುಕುಯಾರಿದ್ದರೇನುಎಲ್ಲರೂ ಕೂಡಿದಂತೆ ಇದ್ದರೇನುಎಲ್ಲರ ನಡುವೆಯೇತಾನಿದ್ದೂ ಇಲ್ಲದಂಥತುಂಬು ಒಬ್ಬಂಟಿತನಬಾಧಿಸುವ ಒಬ್ಬಂಟಿಯಾಗಿ…!ಅತೀ ದೊಡ್ಡ ಮನೆಯಕಂಬಗಳ ಸುತ್ತ ಬಳಸಿಬದುಕಿದ ಹಾಗೆ… ಬದುಕು ಕ್ರೂರ ಹಲವರಿಗೆಧನ್ಯವಾದ ಓ ಬದುಕೆಮತ್ತೆ ಮತ್ತೆ ನಿನಗೆನಿನ್ನ ಥಳಕು ನಾಟಕಕೆಧನ್ಯವಾದ ಓ ಬದುಕೇ…! ಎಲೆ ಯಾತನಾಮಯ ಬದುಕೆಇಷ್ಟೊಂದು ಯಾತನೆ ಏತಕೆಯಾತನೆ ಇಲ್ಲದ ಬದುಕಬದುಕಲೊಲ್ಲೆಯಾ ನೀ […]
ಅಜ್ಜಿಮನೆಯ ಬಾಲ್ಯಸ್ಮೃತಿ
ನೆನಪು ಅಜ್ಜಿಮನೆಯ ಬಾಲ್ಯಸ್ಮೃತಿ ಹೇಮಚಂದ್ರ ದಾಳಗೌಡನಹಳ್ಳಿ ನಾನು ನನ್ನ ಅಜ್ಜಿಯ ಊರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಕಲಿತದ್ದು. ನಾನು ಅಜ್ಜಿಯ ಮನೆಗೆ ಹೋಗಿದ್ದೇ ಅಥವಾ ಅಜ್ಜಿ ನನ್ನನ್ನು ತನ್ನೂರಿಗೆ ಕರಕೊಂಡು ಹೋಗಿದ್ದೇ ಒಂದು ಆಕಸ್ಮಿಕ. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಾನು ಕೊನೆಯವನು. ಒಂದು ದಿನ ನನ್ನಪ್ಪನ ತಾಯಿಗೆ ಯಮನ ಕರೆ ಬಂತೆಂದು ಎಲ್ಲರೂ ತೀರ್ಮಾನಿಸಿ, ಒಳಗೆ ಅವನ ಕೋಣ ನುಗ್ಗಲು ಕಷ್ಟವೆಂದೋ ಏನೋ ಅಜ್ಜಿಯನ್ನು ಹೊರಜಗುಲಿಯ ಮೇಲೆ ಮಲಗಿಸಿ ಬೀಳ್ಕೊಡುಗೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. […]