ಸಂಕ್ರಾಂತಿ ಕಾವ್ಯ ಸುಗ್ಗಿ ಕತ್ತಲೆಯನ್ನು ಹಿಂಜಿ ಪಡೆದ ಬೆಳಕು ಹೇಮಾ ಸದಾನಂದ್ ಅಮೀನ್ ಕಣ್ಣೆದುರು ಹಾದುಹೋಗುವ ಚಿತ್ರಗಳನ್ನುದಂಗಾಗಿ ನೋಡುತ್ತಿದ್ದಂತೆ ಎಲ್ಲವೂಹೊಸದಾಗಿ ಕಾಣಿಸಿಕೊಳ್ಳುವವುಅಪರಿಚಿತ ನಗರದ ಸಂತೆಯಲ್ಲಿಮಾರಾಟದ ಸರಕುಗಳಾಗಿ ಹರಾಜಿಗೆಕಾದು ಕುಳಿತ ವಸ್ತುಗಳಲ್ಲಿಒಂದಿಷ್ಟು ಭಾವನೆಗಳೂ ತಿಳಿಯದಂತೆಮಾರಿ ಹೋಗುವುದು ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯಜೀವವೀಣೆ ತಳಿದು ಮಿಡಿದ ತಂತಿಯಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ‘ ಸಬ್ ಚಲ್ತಾ ಹೈ’ ಎಂಬ ದನಿಯಲಿಕರಗಿದ ಮೌನ ಆಗಾಗ ಮಿಸುಕಾಡಿದರೂಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು ಇದು ನಶೆ, ಇದ್ದುದ್ದನ್ನು ಮರೆತುಇಲ್ಲದರ ಹಿಂದೆ ಧಾವಿಸುವ ಮತ್ತುತೊದಲು ಹೆಜ್ಜೆಗಳನ್ನಿಡುತ್ತಾ […]

ಸಂಕ್ರಾಂತಿ ಕಾವ್ಯ ಸುಗ್ಗಿ ಕಾಲನ ಬೆನ್ನೇರಿ ರೇಷ್ಮಾ ನಾಯ್ಕ ಕಾಲ ಎಂದರೆ ಶೂನ್ಯವಲ್ಲಅದು ಮಾನವನಆಸೆ ಆಕಾಂಕ್ಷೆಗಳ ಆಗರ. ಇದೋ ನೋಡು ಚಕ್ರದಂತೆವರುಷ ವರುಷ ಮೇಲಕ್ಕೇರುತ್ತಲೇತೀಕ್ಷ್ಣ ಕಣ್ಣಿಗೂಮಣ್ಣೆರೆಚಿ ಮಾಯ. ಒಮ್ಮೆಲೆ ಓಡಲಾರದೇಇಂದು ನಾನು, ನಾಳೆ ನೀನುಹುಟ್ಟು ಸಾವುಗಳಹಗಲು-ರಾತ್ರಿಯಆಟವಾಡುತ್ತದೆ. ಭೂತ , ಸೂರ್ಯನಿಂದಾಚಿನನೆರಳು..ವರ್ತಮಾನ, ಶ್ರಾವಣ ಹಬ್ಬಗಳಹೂರಣ..ಭವಿಷ್ಯ , ಮಿಂಚಿನಂಚಿನದಿಗಂತ. ನೂರು ಆಸೆಗಳೆಂಬಬಾನಕ್ಕಿಗಳು ರೆಕ್ಕೆಬೀಸಿ ಕರೆದಿವೆಮತ್ತದೇ ಪಯಣಕ್ಕೆ . ದೂರ ಸನಿಹಗಳು.,ಹಳತು ಹೊಸತುಗಳ.,ಕಾಲನ ಬೆನ್ನೇರಿ ಸರಿಯುತ್ತಿವೆ..ಕೈಗೆ ಸಿಕ್ಕು ಸಿಗದಂತೆಬೂರಲದ ಅರಳೆಯಂತೆ. ಹನ್ನೆರಡು ಅಂಕಿಗಳು.. ಗಂಟೆ, ನಿಮಿಷ , ಸೆಕೆಂಡುಗಳು..ಸಂಕ್ರಮಣದ ಹರಿವಿನತ್ತಸಾಗುವವು,ಜೀವದ ರಭಸದಬಂಡಿಯನೇರಿ. […]

ಸಂಕ್ರಾಂತಿ ಕಾವ್ಯ ಸುಗ್ಗಿ ಬಂಜರು ತೊರೆಯಲಿ ರೇಶ್ಮಾಗುಳೇದಗುಡ್ಡಾಕರ್ ಮತ್ತೆ ಮತ್ತೆ ನೋಡಲುಏನಿದೆ ಇಲ್ಲಿ ಸಾಕಷ್ಟು ಬಂಜರುನೆಲದ ಬರಿದಾಗದೆಜೀವನದ ಭಾಗವೇ ಆಗುತ್ತಿದೆ …???ಹೊಸ ಹೊಸ ಮುಖವಾಡಗಳುಎದುರಾಗಿವೆ ತಮ್ಮ ಸ್ವರೂಪ ಬದಲಿಸಿಸ್ನೇಹ ಬೇಡುತ್ತವೆ ಕಳ್ಳ ಮನಸ್ಸಿನೊಂದಿಗೆ ..! ಮಾಡಿ ಗುಡ್ಡಹಾಕುವಷ್ಟು ವಾಸ್ತವ ಇದ್ದರುಕಾಣದ ಭವಿಷ್ಯದ ಕನಸು ಬೇಡ ಎಂದರುಕಾಡುವದು …..ಇರುವದೆಲ್ಲವ ಬಿಟ್ಟು ….. ನಡೆದಂತೆಆದರೆ ಸಾದ್ಯವಿಲ್ಲ ಅಲ್ಲವೇ ?ತಟ್ಟನೆ ಎಳೆಯುವದು ಸಾಂಧರ್ಭಿಕ ಬದುಕುಸಾಕು ನಿಲ್ಲಿಸು ನಿನ್ನ ತಲ್ಲಣವ ಎಂದು … ನೀರಿನಲ್ಲಿ‌ ಬಣ್ಣಬಿಡುವ ಬಟ್ಟೆಯಂತೆಬಂಧ ಬದಲಾದಾಗಹುಡುಕಾಟ ಏತಕ್ಕೆ ? ಬಣ್ಣಕ್ಕೊ‌ಬಂಧಕ್ಕೊ […]

ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ವರುಷ ಅಕ್ಷತಾ ಜಗದೀಶ ಹೊಸ ವರುಷದ ಮೊದಲ ‌ಹಬ್ಬಅದೇನೋ‌ ಉಲ್ಲಾಸಹೊಸದೊಂದು ‌ಚೈತನ್ಯಹೊಸ‌ ಉಡುಗೆ ಉಟ್ಟುಮುಡಿ ತುಂಬ‌ ಹೂ ಮುಡಿದುಸಖಿಯರೊಡನೆ‌ ಕೂಡಿಕೊಂಡುಎಳ್ಳು ಬೆಲ್ಲ ಹಂಚುವ‌ ಹಬ್ಬಬಂದಿದೆ ನೋಡು ಸಂಕ್ರಾಂತಿಹಬ್ಬ….. ಅಂಗಳದ ತುಂಬ‌ ರಂಗವಲ್ಲಿ ಬಿಡಿಸಿಬಾನಂಗಳದಲ್ಲಿ ಗಾಳಿಪಟ ಹಾರಿಸಿಎತ್ತುಗಳಿಗೆ ಬಣ್ಣ ಹಚ್ಚಿಕಿಚ್ಚು ಹಾಯಿಸುವ ಹಬ್ಬಮರಳಿ ಬಂದಿದೆ ಸಂಕ್ರಾಂತಿ ಹಬ್ಬ.. ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯಪಥ ಬದಲಿಸುವ ಮುಹೂರ್ತವೇಮಕರ ಸಂಕ್ರಾಂತಿಈ ಕ್ಷಣವದು ರೈತನ ಮೊಗದಲ್ಲಿಮೂಡಿಸಿದೆ ಸುಗ್ಗಿ ಹಬ್ಬದಕಾಂತಿ.. ಧಾನ್ಯ ಸಿರಿಯನ್ನು ಬರಮಾಡಿಕೊಂಡುಎಳ್ಳು ಬೆಲ್ಲದ ಸವಿಯ ಉಂಡುಹೊಸ ಪಥದ […]

ಸಂಕ್ರಾಂತಿ ಕಾವ್ಯ ಸುಗ್ಗಿ ಹುಡುಕಾಟ ಮಾಲತಿ ಶಶಿಧರ್ ನಾವು ಬಂದದ್ದಾರೂ ಯಾವಾಗ?ಹುಡುಗಿಯರ ಜಡೆ ಎಳೆದುಬೈಯಿಸಿಕೊಳ್ಳುತ್ತಿದ್ದ ತರಗತಿಯಿಂದ ಇಲ್ಲಿಗೆಮಿಸ್ಸಿನ ಬೆನ್ನಿಗೆ ರಾಕೆಟ್ ಬಿಟ್ಟುಕಿವಿ ಹಿಂಡಿಸಿಕೊಂಡ ಕಾರಿಡಾರ್ನಿಂದ ಇಲ್ಲಿಗೆ.. ನಾವು ಮರೆತದ್ದಾದರೂ ಯಾವಾಗ?ಉಗುರುಗಳ ಮೇಲೆ ಬಿಳಿ ಚುಕ್ಕಿ ಇಟ್ಟುಪುರ್ರೆಂದು ಹಾರಿ ಹೋಗುತ್ತಿದ್ದ ಬೆಳ್ಳಕ್ಕಿಗಳಹಿಡಿದು ಬೆಂಕಿಪೊಟ್ಟಣದಲಿ ಬಂಧಿಸುತ್ತಿದ್ದಮಿಂಚುಹುಳಗಳ ನಾವು ಬೆಳೆದದ್ದಾದರೂ ಯಾವಾಗ?ನಮ್ಮ ಕನಸುಗಳು ಚಿಕ್ಕದಾಗಲು ಬಿಡುತ್ತಾಮನಸುಗಳಿಗೆ ಮಾತಿನಲೇ ಬೆಂಕಿ ಇಡುತ್ತಾ ಒಂದೇ ಒಂದು ಬಾರಿ ಹತ್ತಾರು ವರ್ಷ ಹಳೆಯಕ್ಯಾಲೆಂಡರ್ ತೆಗೆದುಬಾಲ್ಯದಾಟವನ್ನೇ ಆಡದ ದಿನಾಂಕದ ಮೇಲೆಬೆರಳಿಡುವ ಆಟವಾಡೋಣವೇ??ಹೊಚ್ಚ ಹೊಸ ಕ್ಯಾಲೆಂಡರ್ ತೆಗೆದುಮನಸ್ಸು ಬಿಚ್ಚಿ […]

ಅಂಕಣ ಬರಹ ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ದೀಪ್ತಿ ಭದ್ರಾವತಿ ಪರಿಚಯ: ದೀಪ್ತಿ ಭದ್ರಾವತಿ ಕನ್ನಡದ ಕತೆಗಾರ್ತಿ. ಮೂಲತಃ ದಕ್ಷಿಣ ಕನ್ನಡದವರಾದರು, ದೀಪ್ತಿ ನೆಲೆ ನಿಂತದ್ದು ಭದ್ರಾವತಿಯಲ್ಲಿ.‌ ಆರೋಗ್ಯ ಇಲಾಖೆಯಲ್ಲಿ ನೌಕರಿ. ಕವಿತೆ ಬರೆಯುತ್ತಿದ್ದ ದೀಪ್ತಿ ಆರಂಭದಲ್ಲಿ ಕಾಗದದ ಕುದುರೆ, ಗ್ರೀನ್ ರೂಂನಲ್ಲಿ ಎಂಬ ಎರಡು ಕವಿತಾ ಸಂಕಲನ ಪ್ರಕಟಿಸಿದರು. ಆ‌ ಬದಿಯ ಹೂ, ಗೀರು ಇವರ ಕಥಾ ಸಂಕಲನಗಳು. ಆ ಬದಿಯ ಹೂ ಸಂಕಲನಕ್ಕೆಕತೆಗಳಿಗೆ ಮಾಸ್ತಿ ಕಥಾ ಪ್ರಶಸ್ತಿ ಪಡೆದವರು‌, ಗೀರು ಕಥಾ ಸಂಕಲನಕ್ಕೆ ಪಾಟೀಲ […]

ಕಾಫಿಯಾನ ಗಝಲ್

ಕಾಫಿಯಾನ ಗಝಲ್ ಜಬೀವುಲ್ಲಾ ಎಂ. ಅಸದ್ ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದುಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರುಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನುಒಡಲ […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ರವಿ ಹೇಮಂತ ಋತುಬೆಳಗೋ ರವಿ ಕೂಡಾಮೈಗಳ್ಳನಾದ. 2) ಚಂದ್ರ ಬಾನಿಗೆ ಬಣ್ಣ :ತಾರೆಯ ಕೆನ್ನೆಯದು,ಚಂದ್ರ ನಕ್ಕಾಗ. 3) ಇಬ್ಬನಿ ಹೂವಿನ ನಗು :ಮತ್ತೇರಿತು ಸೂರ್ಯಗೆ,ಇಬ್ಬನಿ ಮುತ್ತು. 4) ಲಾಲಿ ತೊಟ್ಟಿಲು ಕಟ್ಟಿ :ಬಾನಿಗೆ, ಲಾಲಿಹಾಡು,ಹಕ್ಕಿ ಹೇಳಿದೆ. 5) ಸ್ವಪ್ನ ಸೋಲದೆ ಉಂಟೆ :ಜೋಗುಳಕೆ, ನಿದ್ದೆಗೆಸ್ವಪ್ನ ಜಾರಿತು

ಪುಟತಿರುಗಿಸುವ ಮುನ್ನ

ಕವಿತೆ ಪುಟತಿರುಗಿಸುವ ಮುನ್ನ ನೂತನದೋಶೆಟ್ಟಿ ಅವನಿಗೆ ಗೊತ್ತುಇದುಕೊನೆಯಿರದ ನಾಳೆಯೆಂದುದಿನವೂ ಓಕುಳಿಯಾಡುತ್ತ ಬರುತ್ತಾನೆಕಾಮನಬಿಲ್ಲನ್ನು ಗುರುತಿಗಿರಿಸಿ ತೆರಳುತ್ತಾನೆಎಂದಾದರೂ ಒಂಟಿಯಾಗಿಸುತ್ತಾನೆಯೇ? ಚಂದ್ರತಾರೆಯರನ್ನು ಕಳಿಸುತ್ತಾನೆಕತ್ತಲೆಗೆ ಹೊಳಪ ತುಂಬಲುಕಾಯಿಸುತ್ತಾನೆ ಪ್ರೇಮಿಯಂತೆವಿರಹವಿರದ ಬಂಧುರದಿಂದ ಗಿಡ, ಮರ, ಹಕ್ಕಿಗಳಿಂದ ಕಲಿಸುತ್ತಾನೆನಲಿವು, ನೋವು, ಹಸಿವು, ನಿದ್ದೆಪ್ರೇಮ, ಸ್ನೇಹಎಂಥ ಮಾಯಗಾರನೋ ನೀನುಏನು ಕನಸುಗಾರ ! ಕಳೆದ ದಿನಗಳ ನೆನಪಿಸದೆಪಡೆಯಲುಕನವರಿಸದೆಕೊಡುವ ನಿರಂತರತೆಯಲ್ಲಿಧನ್ಯನಾಗುತ್ತೀಯಲ್ಲ ! ನಾವು ಕಲಿತದ್ದಾದರೂ ಏನು!ದಿನಗಳ ಲೆಕ್ಕ,ಕೊಡುವ ಕೊಂಬ ಸಂಚು !ವರುಷ ವರುಷಗಳ ಹಪಹಪಿ ಮತ್ತೆ ನಾಳೆ ಬಂದೇ ಬರುತ್ತಾನೆಅದೇ ಬೆಳಕು, ಬಣ್ಣ, ಅಂದ ಹೊಸತೆಂಬ ಪರದೆಯನ್ನುಕಣ್ಣಿಗಂಟಿಸಿಕೊಂಡುನೋಡುವ ನಾವುಪುಟತಿರುಗಿಸುತ್ತೇವೆಭ್ರಮೆಯಲ್ಲಿ. ————————-

ಅಂದಿಗೂ- ಇಂದಿಗೂ

ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ […]

Back To Top