ಸಂಕ್ರಾಂತಿ ಕಾವ್ಯ ಸುಗ್ಗಿ
ಹೊಸ ವರುಷ
ಅಕ್ಷತಾ ಜಗದೀಶ
ಹೊಸ ವರುಷದ ಮೊದಲ ಹಬ್ಬ
ಅದೇನೋ ಉಲ್ಲಾಸ
ಹೊಸದೊಂದು ಚೈತನ್ಯ
ಹೊಸ ಉಡುಗೆ ಉಟ್ಟು
ಮುಡಿ ತುಂಬ ಹೂ ಮುಡಿದು
ಸಖಿಯರೊಡನೆ ಕೂಡಿಕೊಂಡು
ಎಳ್ಳು ಬೆಲ್ಲ ಹಂಚುವ ಹಬ್ಬ
ಬಂದಿದೆ ನೋಡು ಸಂಕ್ರಾಂತಿ
ಹಬ್ಬ…..
ಅಂಗಳದ ತುಂಬ ರಂಗವಲ್ಲಿ ಬಿಡಿಸಿ
ಬಾನಂಗಳದಲ್ಲಿ ಗಾಳಿಪಟ ಹಾರಿಸಿ
ಎತ್ತುಗಳಿಗೆ ಬಣ್ಣ ಹಚ್ಚಿ
ಕಿಚ್ಚು ಹಾಯಿಸುವ ಹಬ್ಬ
ಮರಳಿ ಬಂದಿದೆ ಸಂಕ್ರಾಂತಿ ಹಬ್ಬ..
ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ
ಪಥ ಬದಲಿಸುವ ಮುಹೂರ್ತವೇ
ಮಕರ ಸಂಕ್ರಾಂತಿ
ಈ ಕ್ಷಣವದು ರೈತನ ಮೊಗದಲ್ಲಿ
ಮೂಡಿಸಿದೆ ಸುಗ್ಗಿ ಹಬ್ಬದ
ಕಾಂತಿ..
ಧಾನ್ಯ ಸಿರಿಯನ್ನು ಬರಮಾಡಿಕೊಂಡು
ಎಳ್ಳು ಬೆಲ್ಲದ ಸವಿಯ ಉಂಡು
ಹೊಸ ಪಥದ ಕಡೆಗೆ ಸಾಗಲಿ
ನಮ್ಮ ಪಯಣ
ಬಾಳಲಿ ಮೂಡಲಿ ನಲಿವಿನ
ಚರಣ..
ಆಹಾ! ಸುಗ್ಗಿ ಸಂಭ್ರಮದ ಹಬ್ಬ
ಮರಳಿ ಬಂದಿದೆ ಸಂಕ್ರಾಂತಿ ಹಬ್ಬ…
**********************************