ಹಾಯ್ಕುಗಳು

ಹಾಯ್ಕುಗಳು

ಭಾರತಿ ರವೀಂದ್ರ

green grass field across mountain during daytime

1) ರವಿ


ಹೇಮಂತ ಋತು
ಬೆಳಗೋ ರವಿ ಕೂಡಾ
ಮೈಗಳ್ಳನಾದ.

2) ಚಂದ್ರ

ಬಾನಿಗೆ ಬಣ್ಣ :
ತಾರೆಯ ಕೆನ್ನೆಯದು,
ಚಂದ್ರ ನಕ್ಕಾಗ.

3) ಇಬ್ಬನಿ

ಹೂವಿನ ನಗು :
ಮತ್ತೇರಿತು ಸೂರ್ಯಗೆ,
ಇಬ್ಬನಿ ಮುತ್ತು.

4) ಲಾಲಿ

ತೊಟ್ಟಿಲು ಕಟ್ಟಿ :
ಬಾನಿಗೆ, ಲಾಲಿಹಾಡು,
ಹಕ್ಕಿ ಹೇಳಿದೆ.

5) ಸ್ವಪ್ನ

ಸೋಲದೆ ಉಂಟೆ :
ಜೋಗುಳಕೆ, ನಿದ್ದೆಗೆ
ಸ್ವಪ್ನ ಜಾರಿತು


Leave a Reply

Back To Top