
ಸಂಕ್ರಾಂತಿ ಕಾವ್ಯ ಸುಗ್ಗಿ
ಕಾಲನ ಬೆನ್ನೇರಿ
ರೇಷ್ಮಾ ನಾಯ್ಕ

ಕಾಲ ಎಂದರೆ ಶೂನ್ಯವಲ್ಲ
ಅದು ಮಾನವನ
ಆಸೆ ಆಕಾಂಕ್ಷೆಗಳ ಆಗರ.
ಇದೋ ನೋಡು ಚಕ್ರದಂತೆ
ವರುಷ ವರುಷ ಮೇಲಕ್ಕೇರುತ್ತಲೇ
ತೀಕ್ಷ್ಣ ಕಣ್ಣಿಗೂ
ಮಣ್ಣೆರೆಚಿ ಮಾಯ.
ಒಮ್ಮೆಲೆ ಓಡಲಾರದೇ
ಇಂದು ನಾನು, ನಾಳೆ ನೀನು
ಹುಟ್ಟು ಸಾವುಗಳ
ಹಗಲು-ರಾತ್ರಿಯ
ಆಟವಾಡುತ್ತದೆ.
ಭೂತ , ಸೂರ್ಯನಿಂದಾಚಿನ
ನೆರಳು..
ವರ್ತಮಾನ, ಶ್ರಾವಣ ಹಬ್ಬಗಳ
ಹೂರಣ..
ಭವಿಷ್ಯ , ಮಿಂಚಿನಂಚಿನ
ದಿಗಂತ.
ನೂರು ಆಸೆಗಳೆಂಬ
ಬಾನಕ್ಕಿಗಳು ರೆಕ್ಕೆಬೀಸಿ ಕರೆದಿವೆ
ಮತ್ತದೇ ಪಯಣಕ್ಕೆ .
ದೂರ ಸನಿಹಗಳು.,
ಹಳತು ಹೊಸತುಗಳ.,
ಕಾಲನ ಬೆನ್ನೇರಿ ಸರಿಯುತ್ತಿವೆ..
ಕೈಗೆ ಸಿಕ್ಕು ಸಿಗದಂತೆ
ಬೂರಲದ ಅರಳೆಯಂತೆ.
ಹನ್ನೆರಡು ಅಂಕಿಗಳು.. ಗಂಟೆ, ನಿಮಿಷ , ಸೆಕೆಂಡುಗಳು..
ಸಂಕ್ರಮಣದ ಹರಿವಿನತ್ತ
ಸಾಗುವವು,
ಜೀವದ ರಭಸದ
ಬಂಡಿಯನೇರಿ.
ನವ ವಸಂತಕ್ಕೆ
ಹೊಸ ಭರವಸೆಯ
ರಕ್ಷೆಯನಿಕ್ಕಿ ,
ತೂಕಾಟ ತೇಕಾಟ
ನೀಗದ ಜಂಜಾಟಕ್ಕೆ
ನಿಶಬ್ಧದ ಬಾಗಿಲಿಕ್ಕಿ.

ಚನ್ನಾಗಿದೆ. ಶುಭಾಶಯಗಳು
ಅಭಿನಂದನೆ..ಚೆನ್ನಾಗಿದೆ.
ಅಭಿನಂದನೆಗಳು.ಅರ್ಥಪೂರ್ಣವಾಗಿದೆ.