ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಒಡವೆ ತೊಡುವ ಆಸೆಯಲಿ  ಕಿವಿ ಚುಚ್ಚಿಸಿಕೊಳ್ಳುತಿರುವೆನು
ಮರೆಯಾಗಲೆಂದು ಮಣ್ಣಿನಲಿ ಮುಖ ಮುಚ್ಚಿಸಿಕೊಳ್ಳುತಿರುವೆನು

ಇರುವ ಗಾಯಗಳ ಲೆಕ್ಕ ಸಾಲದಾಯಿತು ಈ ಜೀವನಕೆ
ನಯವಂಚಕರ  ನಾಲಿಗೆಯಲಿ ಬಾಳ ಕೊಚ್ಚಿಸಿಕೊಳ್ಳುತಿರುವೆನು

ಪುಟ ತಿರುವಿದಷ್ಟು ಪೂರ್ಣ ವಿರಾಮವಿರದ ಸಾಲುಗಳಿವೆ
ಬೇಡವಾಗಿರುವ ಬದುಕಿನಲಿ ವಿಧಿ ಮೆಚ್ಚಿಸಿಕೊಳ್ಳುತಿರುವೆನು

ಬೆವರು ಬಸಿದರೆ ಸಾಲದೇನು ಈ  ಹಾಳು ಜನುಮಕೆ
ರಕುತ ಸುರಿಸಿ  ಭಕುತಿಯಲಿ ದೈವ ನೆಚ್ಚಿಸಿಕೊಳ್ಳುತಿರುವೆನು

ನಡೆದ ದಾರಿಯಲಿ ನರಳುತಿವೆ  ಜ್ಯೋತಿ  ಹೆಜ್ಜೆ ಗುರುತುಗಳು
ಸುಮ್ಮನಿರದೆ  ಗದ್ದಲದಲಿ ಹಾವು ಕಚ್ಚಿಸಿಕೊಳ್ಳುತಿರುವೆನು
ಜ್ಯೋತಿ ಮಾಳಿ ಬೆಳಗಾವಿ

About The Author

Leave a Reply

You cannot copy content of this page

Scroll to Top