ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಜಾನೆಯ ಮಂಜಿನಲಿ ಪ್ರಕೃತಿ
ನಾಟ್ಯವಾಡುತ ಬಂದಳೇ
ಅಂಜುತ್ತಾ ಅಳುಕುತ್ತಾ ಇಳೆಯ
ಸೌಂದರ್ಯ ನೋಡಿ ನಿಂದಳೇ

ಜೀವನದ ಅನಿತ್ಯತೆ ಅರೆಕ್ಷಣ ಬಂದು
ಹೋಗುವ ಮಿಂಚಿನಂತೆ
ಕವಿಹೃದಯ ಮಿಡಿಯುತಿದೆ ಮೆಲ್ಲನೆ
ಎದೆಯ ಸಂವಹನದಂತೆ

ಕೊಳಲ ಕರೆಯಲಿ ಅದೆಂತಹ ಉತ್ಕೃಷ್ಟ
ಪ್ರೇಮದ ಉತ್ಕಟತೆ
ಕೇಳಿದಷ್ಟೂ ತಳಮಳ ಅಂತರಾಳದಲಿ
ಬೇಕಿದೆ ಕ್ಷಮತೆ

ಮಿಲನದ ಹೂರಣ ತುಂಬಿಟ್ಟೆ ಮನದಿ
ಸವಿಯುವ ಆಕಾಂಕ್ಷೆ
ಸಲಿಲದ ಬಿಂದುವಾಗಿ ಹರಿಯುತ
ಬೇಡುವೆ ಒಲವ ಬಿಕ್ಷೆ

ಬಚ್ಚಿಟ್ಟ ಭಾವದ ಪೆಟ್ಟಿಗೆಯ ಕಾಯುತ್ತಾ
ಕುಳಿತಿರುವೆ ತೆರೆಯಲು
ಮುಚ್ಚಿಟ್ಟ ಬೆಚ್ಚನೆಯ ಮಾತುಗಳ ನಿರೀಕ್ಷೆ
ಒಲುಮೆಯ ಎರೆಯಲು


About The Author

Leave a Reply

You cannot copy content of this page

Scroll to Top