ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಅದೆಷ್ಟು ಮುದ್ದಿಸಿ ಹಿಡಿದರೂ,ಮೂಷ್ಟಿಯಲ್ಲಿನ ಮರಳು ಸೋರಿದಾಗ ನೀ ನೆನಪಾದೆ
ರಾತ್ರಿಯಿಡೀ ನಿಟ್ಟಿಸುತ ಕೂತರೂ,ಬೆಳಕಾದಂತೆ ಚಂದ್ರ ಮರೆಯಾದಾಗ ನೀ ನೆನಪಾದೆ
ಹೊರೆಯೆನಿಸಿದರೂ ಎಂದೂ ಹೊರಗೆಲ್ಲೂ ಹೇಳಿಕೊಳ್ಳಲಿಲ್ಲ
ಹಗಲನು ಹೊಂಗನಸಿನಂತೆ ಬದುಕಿದರೂ ,ಕತ್ತಲಾದಂತೆ ರವಿಯು ಕರಗಿದಾಗ ನೀ ನೆನಪಾದೆ
ಪ್ರತಿದಿನವೂ ಮಮತೆಯಿಂದ, ನಗು ನಗುತಾ ನೋಡಿಕೊಂಡೆ
ಅಡಿಗಡಿಗೆ ನೀರುಣಿಸಿ ಪೋಷಿಸಿದರೂ, ಗಿಡವು ಹೂ ಬಿಡದಾದಾಗ ನೀ ನೆನಪಾದೆ
ನನ್ನದೆನ್ನುವ ಮೋಹದಲಿ ಪ್ರತಿ ಹೊಡೆತವನೂ ಅಪ್ಪಿಕೊಳ್ಳುತಾ ಹೋದೆ
ಸುನಾಮಿಯಿಂದ ಭೋರ್ಗರೆದು ಸಾಗರ ಅತ್ತರೂ, ಆ ಬಂಡೆ ಅನುನಯಿಸದಾಗ ನೀ ನೆನಪಾದೆ
ತನ್ನ ಶಾಂತ ಕಂಗಳನೇ ತಂಗುದಾಣದಂತೆ ನೀಡಿದಳು ವಾಣಿ,
ಬೇಡೆಂದರೂ ಕೃತಘ್ನನಂತೆ ಅನ್ಯರೆದುರು ಕಂಬನಿ ಸುರಿದಾಗ ನೀ ನೆನಪಾದೆ
ವಾಣಿ ಯಡಹಳ್ಳಿಮಠ




Very nice madum
Savita Deshmukh
Thank you so much for the appreciation Madam
Very beautifully written madam
Thank you so much
ಸುಂದರ ಸಾಲುಗಳು
ಮೆಚ್ಚುಗೆಗೆ ಧನ್ಯವಾದಗಳು