ಕಾವ್ಯಸಂಗಾತಿ
ಮಧು ವಸ್ತ್ರದ ಮುಂಬಯಿ
“ಮಾನವನಾಗು”


ಪುಟ್ಟ ಗಲ್ಲಿಯಾಗು, ಚಿಕ್ಕ, ಚೊಕ್ಕ ಹಳ್ಳಿಯಾಗು, ಹೃದಯಹೀನ ನಗರವಾಗದಿರು
ಎಳೆಯ ಬಿಸಿಲಾಗು, ನಗುವ ಮುಸ್ಸಂಜೆಯಾಗು,
ನೆತ್ತಿ ಉರಿಸುವ ಬಿಸಿಲಾಗದಿರು
ಹರಿವ ನದಿಯಾಗು, ಭೋರ್ಗರೆವ ಅಬ್ಧಿಯಾಗು, ನಿಂತ ನೀರಂತೆ ಜಡ ಆಗದಿರು
ಸುಗಂಧದ ಧೂಪವಾಗು, ಬೆಳಕಿನ ದೀಪವಾಗು, ಅಜ್ಞಾನದ ಅಂಧಕಾರ ಆಗದಿರು
ಹೂವನೀವ ಗಿಡವಾಗು, ತಂಪನೀವ ವೃಕ್ಷವಾಗು, ಕಡಿಯುವ ಕೊಡಲಿ ಆಗದಿರು
ಪಥಿಕನಾಗು, ಮಾರ್ಗದರ್ಶಿಯಾಗು ಗುರಿಯನು ಹೊಂದದ ಅಲೆಮಾರಿ ಆಗದಿರು
ಕೋಪವಾಗು, ಮೌನವಾಗು ಮಾತಾಗು ಕಠೋರ ಮಾತಿನ ಪರನಿಂದಕ ಆಗದಿರು
ಶಕ್ತನಾಗು ಭಕ್ತನಾಗು,ಸಾತ್ವಿಕ ಹೃದಯವಂತನಾಗು
ನಯವಂಚಕ ಆಗದಿರು
ಶ್ರಮಿಕನಾಗು ಪ್ರಾಮಾಣಿಕನಾಗು, ಮಾನವನಾಗು, ಅಹಂಕಾರಿ ದಾನವನಾಗದಿರು..
ಮಧು ವಸ್ತ್ರದಮುಂಬಯಿ



