ನಿನ್ನ ಧ್ಯಾನ
ಮಲ್ನಾಡ್ ಮಣಿ
ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ.
ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು.
ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ.
ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು.
ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು.
ನೆರಳಿನಲ್ಲಿ ನನ್ನ ನೆರಳು ಮುಳುಗಿ ಮಾಯವಾಯಿತು ಮತ್ತೆ ಮಲ್ಲೆ ಹೂವ ಕಂಡೆ ಹೂವು ಭಿರಿದು ಬಾಡಿತು.
ನಿನ್ನ ದಾರಿ ಕಾಯುತಿರುವ ಕಾಯ ತಣಿಯದು. ಮತ್ತೆ ನಿನ್ನ ನೇನಪ ಎರೆದು ಭಾವದೊಲುಮೆಯ ಹೂವ ಅರಳಿಸಿ ಮತ್ತೆ ಮಾಲೆ ಮಾಡಿ ಕಾಯುವೆ.
********