ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

Silhouette Photo of Person Standing in Cave

ಒಮ್ಮೊಮ್ಮೆ ಹೀಗೂ ಆಗುತ್ತೆ!

Person Wearing Pair of Brown Shoes

ಚಳಿಗಾಲದ ಸಂಜೆಯೊಳಗೆ
ಗೋಡೆಗೊರಗಿ ಕೂತಿದ್ದವಳೆನ್ನ
ಎದೆಗಾನಿಸಿಕೊಂಡು ಕವಿತೆ ಹಾಡುತ್ತಾ ಹೋದಳು
ಕೇಳುತ್ತ ವಿರಮಿಸಿದವನ ಕನಸಲ್ಲಿ
ದೇವತೆಗಳು ಬಂದು ನಿಂತರು
ಅದು ಯಾವ ಕಾಲಕ್ಕೂ ಮುಗಿಯದ ಹಾಡೆಂಬ ನಂಬಿಕೆಯೊಳು ಮಲಗಿದವನಿಗೆ
ಎಚ್ಚರವಾದಾಗ
ಗೋಡೆಯಿರಲಿಲ್ಲ,ಅಸಲಿಗೆ ಅಲ್ಲೊಂದು ಮನೆಯೇ ಇರಲಿಲ್ಲ
ಬಯಲ ಹೊರತು
ಇನ್ನು ಅವಳಾಗಲಿ,
ಅವಳ ಮಡಿಲಾಗಲಿ ಕಾಣಲಿಲ್ಲ
ತೆರೆದು ಬಿದ್ದ ಬಯಲೊಳಗೆ
ಕೇವಲ 
ನಾನು
ಮತ್ತು 
ನಾನು
ಮತ್ತು ನನ್ನ ಮೌನ
ನನ್ನ ಹೆಗಲ ಮೇಲೆ ನನ್ನದೇ ಹೆಣ!

ಕು.ಸ.ಮಧುಸೂದನ ರಂಗೇನಹಳ್ಳಿ

About The Author

Leave a Reply

You cannot copy content of this page

Scroll to Top