ಗಝಲ್
ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ
ಗಝಲ್
ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ […]
ಕಾವ್ಯಯಾನ
ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.
ಗಝಲ್
ಗಝಲ್ ಭಾಗೆಪಲ್ಲಿ ಕೃಷ್ಣಮೂರ್ತಿ ನೀ ದರ್ಷನಕೆ ಸಿಗದೆ ಕಾಡಿ ಕಾಡಿ ನೋಯಿಸುವೆನಿನ್ನ ಭಾವ ಚಿತ್ರವ ನೀಡದೆ ಕಾಡಿ ನೋಯಿಸುವೆ ನಮ್ಮ ಅಗಲಿಕೆ ಇಷ್ಟು ಧೀರ್ಘ ಕಾಲ ಆಗಿರುವಾಗಕನಸಲೂ ಅಪ್ಪಲು ಸಿಗದೆ ಹಿಂಸಿಸಿ ನೋಯಿಸುವೆ ನಮ್ಮ ಪ್ರೀತಿಯ ವಿಷಯ ಎಷ್ಟು ಗೋಪ್ಯ ವೆನೆನನ್ನ ಅಂತಿಮ ಕ್ಷಣವೂ ಅರಿಯದೆ ಬಹಳ ನೋಯಿಸುವೆ ಬೇರ್ಪಡಿಕೆಯಲಿ ನಮ್ಮ ಪ್ರೀತಿ ಇಷ್ಟು ಗಾಢವಾಗಿರೆಸೇರ್ಪಡಿಕಯ ಊಹೆ ಇದ್ದೂ ಹೀಗೇಕೆ ನೋಯಿಸುವೆ ಯಾವುದಾದರೂ ಬಹನೇ ಹುಡುಕಿ ಭೇಟಿಯಾಗು ಬಾಸುಮ್ಮನೆ ಹೆದರಿ ನೀನೂ ನೊಂದು ನನ್ನನೂ ನೋಯಿಸುವೆ ಕಾಲಕೂಡಿ […]
ಗಝಲ್
ಗಝಲ್ ರೇಮಾಸಂ ಎದೆಯ ಗೂಡಲಿ ಅವಿತಿರು ಕಾಣದಂತೆ ಯಾರಿಗೂಸಣ್ಣದನಿಲಿ ಹಾಡುತಿರು ಕೇಳಿಸದಂತೆ ಯಾರಿಗೂ ಒಪ್ಪಿದ ಮನಗಳ ಆಳವನು ಇವರಾರು ಅರಿಯರುಕಣ್ಣ ಸನ್ನೆಯಲಿ ಕರೆಯದಿರು ಎಂದಿನಂತೆ ಯಾರಿಗೂ ಲೋಕವು ಹುಚ್ಚನೆಂದು ಕೂಗಿದರೂ ಕೊರಗದಿರುಬೆಸುಗೆಯಲಿ ಹೆದರದಿರು ಬೆಪ್ಪನಂತೆ ಯಾರಿಗೂ ಇಂದು ಇರುವಿಕೆಯನು ತೋರಬೇಕಾಗಿದೆ ಜಗಕೆಬಂಧನದಲಿ ನೀ ಬೆಳಗುತಿರು ಸುಡದಂತೆ ಯಾರಿಗೂ ಬಳಲದಿರು ಪ್ರೇಮವಿರದ ಬಿರುಸಿನ ಗಡಸು ನುಡಿಗಳಿಗೆತಾಯಿ ಮಡಿಲಲಿ ಒರಗಿರು ಬೇಸರಿಸದಂತೆ ಯಾರಿಗೂ *****************
ಗಝಲ್
ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************
ಗಝಲ್
ಗಝಲ್ ರತ್ನರಾಯಮಲ್ಲ ಆ ಕಡೆ ಭಜನೆಯ ನಾದವು ಜಿನುಗುತಿದೆಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ ಸಂಬಂಧಗಳು ಗೋಳಾಡುತಿವೆ ನೆನೆ ನೆನೆದುಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿಕುಣಿಯ ಮುಖ ಕಾಣದೆ ಗುಂಪು ಚದುರುತಿದೆ **********************
ಗಝಲ್
ಗುರಿ ದೂರ ದುರ್ಲಭ ಹಿಡಿಯದಿರು ಕಿರಿ ದಾರಿಗಳ
ತುಳಿದ ಹಾದಿ ಅನುಭವ ದೊಡ್ಡದು ಕೂಡಿಡು ಸಖ
ಗಝಲ್
ನೀ ಮೌನವಾದರೆ ಏನೆಂದು ತಿಳಿಯಲಿ ನಾನು
ಹೇಳಿಬಿಡು ನಿನ್ನ ಮನಸಿಗೆ ಏನಾಯಿತು ಮೈಲಿಗೆ ಸಖಾ
ಗಝಲ್
ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು […]