ಗಝಲ್
ರತ್ನರಾಯಮಲ್ಲ
ಆ ಕಡೆ ಭಜನೆಯ ನಾದವು ಜಿನುಗುತಿದೆ
ಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ
ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿ
ಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ
ಸಂಬಂಧಗಳು ಗೋಳಾಡುತಿವೆ ನೆನೆ ನೆನೆದು
ಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ
ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿ
ಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ
ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿ
ಕುಣಿಯ ಮುಖ ಕಾಣದೆ ಗುಂಪು ಚದುರುತಿದೆ
**********************
ಸಂಬಂಧಗಳು ಗೊಳಾಡುತಿವೆ ನೆನೆ ನೆನೆದು
“ಸಂಬಂಜ ಅನ್ನೋದು ದೊಡ್ದು ಕನಾ”
ಸಾಲನ್ನು ನೆನಪಿಸಿತು ಸರ್
ಉತ್ತಮ ಗಜಲ್ ಅಭಿನಂದನೆಗಳು.
ಡಿ. ಎಮ್.ನದಾಫ್
ಅಫಜಲಪುರ.