ಗಝಲ್
ರುಕ್ಮಿಣಿ ನಾಗಣ್ಣವರ
ಕಷ್ಟಗಳ ಉಣ್ಣುತ್ತ ಅಳ್ಳೆದೆ ಗಟ್ಟಿ ಆಗುವುದು ಸಖ
ನೋವುಣ್ಣದೇ ಹೇಗೆ ದಕ್ಕುವುದು ಗಟ್ಟಿತನ ಸಖ
ಗುರಿ ದೂರ ದುರ್ಲಭ ಹಿಡಿಯದಿರು ಕಿರಿ ದಾರಿಗಳ
ತುಳಿದ ಹಾದಿ ಅನುಭವ ದೊಡ್ಡದು ಕೂಡಿಡು ಸಖ
ದಾರಿಹೋಕರಲಿ ದಾರಿ ತಪ್ಪಿಸುವವರು ಹಲವರು
ಬೆನ್ನು ನೇವರಿಸುತ ಚೂರಿ ಇಕ್ಕುವರು ಜೋಕೆ ಸಖ
ಅವರು ಇವರೆಲ್ಲರೊಡಗೂಡಿ ಬದುಕಿ ಬಾಳಬೇಕು
ತಪ್ಪೆತ್ತಿ ಹೇಳುತ ಒಪ್ಪಿಗೆ ನೀ ತಲೆದೂಗಬೇಕು ಸಖ
ಇರುಳ ಮೌನದಲಿ ಒಂಟಿಯಾಗಿ ಕೂರದಿರು
ಜೊತೆಗೆ ‘ರುಕ್ಮಿಣಿ’ ಇರುವಳು ದಾರಿಗುಂಟ ಸಖ
**********************************************************
ಇದು ತಾಂತ್ರಿಕವಾಗಿ ಗಜಲ್ ಆಗಿಲ್ಲ ಗಮನಿಸಿ. ಕಾಫಿಯಾ ಇಲ್ಲದೇ ಗಜಲ್ ರಚನೆ ಇಲ್ಲ. ಇದರಲ್ಲಿ ಕಾಫಿಯಾ ಬಂದಿಲ್ಲ. ಚಂದದ ಭಾವವಿದೆ..
ನಿಜ, ಕಾಫಿಯಾ ಇಲ್ಲದೇ ಗಜ಼ಲ್ ಇಲ್ಲ. ಸ್ವಲ್ಪ ತಿದ್ದುಪಡಿ ಮಾಡಿದರೆ ಕಾಫಿಯಾವನ್ನು ತರಬಹುದು.