ಗಝಲ್
ಶಶಿಕಾಂತೆ
ನಮ್ಮ ಸಂಬಂಧ ಕೆಟ್ಟರೆ ಅರ್ಥವೇ ಹಾಳಾಯಿತು ಪ್ರೀತಿಗೆ ಸಖಾ
ನಿನ್ನನ್ನು ಮರೆತೆನೆಂದಾದರೆ ಹುಚ್ಚು ಹಿಡಿದೀತು ನನಗೆ ಸಖಾ
ನೀ ಮೌನವಾದರೆ ಏನೆಂದು ತಿಳಿಯಲಿ ನಾನು
ಹೇಳಿಬಿಡು ನಿನ್ನ ಮನಸಿಗೆ ಏನಾಯಿತು ಮೈಲಿಗೆ ಸಖಾ
ನನ್ನೆಲ್ಲಾ ಕಾಯಕಗಳಿಗೆ ನೀನಲ್ಲವೆ ಸ್ಪೂರ್ತಿ
ನಂದು ನಿಂದು ಮನಸ್ಸೊಂದಾಗದೆ ಹೇಗೆ ಉಳಿದೀತು ಬೆಸುಗೆ ಸಖಾ
ನಿನ್ನ ಮನಸ್ತಾಪದಿಂದ ಬಾಡಿಹೋಯಿತು ಮನದ ಮಲ್ಲಿಗೆ
ಮುಳ್ಳಾಗಬಾರದು ಒಂದು ಸಣ್ಣಮಾತು ಬಾಳಿಗೆ ಸಖಾ
ಚಂದ್ರನಿಗಾಗಿ ಕಾದ ನೈದಿಲೆಯಂತೆ ನಾನಾಗಿರುವೆ
ನನ್ನ ನಿನ್ನ ವಿರಸದಿಂದ ನೋವಾಯಿತು ಶಶಿಗೆ ಸಖಾ