ಹೇಳದೇ ಹೋಗದಿರು
ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ […]
ಗಝಲ್
ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು […]
ಗಝಲ್
ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************
ಕಾವ್ಯಯಾನ
ಗಝಲ್ ಮಾಲತಿ ಹೆಗಡೆ ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ? ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ? ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ? ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ? ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ? ************
ಕಾವ್ಯಸಂಗಾತಿ
ಗಝಲ್ ಬಾಗೇಪಲ್ಲಿ ಕೃಷ್ಣಮೂರ್ತಿ ಬ್ರಹ್ಮಾಂಡದಿ ನೀನು ತೃಣಅದಕೆ ನೀ ಇರುವೆ ಋಣ ಹೇಗೆ ತೀರಿಸುವೆ ಅದನುಯೋಚಿಸು ಒಂದು ಕ್ಷಣ ಸದಾ ಸಲಹಲು ನಿನ್ನಬದಲಾಗಿಸು ನಿನ್ನ ಗುಣ ಅತಿಯಾಸೆಯಿಂದ ನೀನುಮಾಡಿರುವೆ ಎಲ್ಲಾ ರಣ ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದುಮಾಡಿರುವೆ ಅದಕೆ ವ್ರಣ ಪರಿಸರ ರಕ್ಷಣೆ ಆಗಬೇಕುಸೇರು ನೀನು ಅದರ ಬಣ ಕ್ಷಮೆ ಎನೆ ಭೂಮಿ’ಮಂಕೇ’ಸಕಲರೂ ತೊಡಬೇಕು ರಕ್ಷಣೆಗೆ ಪಣ (ಚೋಟಿ ಬೆಹರ್ ರಚಿಸುವ ಯತ್ನ) **********
ಕಾವ್ಯಯಾನ
ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ […]
ಕಾವ್ಯಯಾನ
ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ
ಕಾವ್ಯಯಾನ
ಗಝಲ್ ಸುಜಾತಾ ಲಕ್ಮನೆ ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನುಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳುಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ ಕಾಲ ಮೇಲೆ ಕಾಲು ಹಾಕಿ ಕೂತು […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********