ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಪ್ರಭಾವತಿ ಎಸ್ ದೇಸಾಯಿ

Flowers and butterflies. On the wight fone vector illustration

ಅರಳಿದ ಸುಮ ದೇವರಿಗೆ ಅಪಿ೯ತವಾಗಲಿ ಬಾಡುವ ಮುನ್ನ
ವೀಣೆ ತಂತಿ ಮೀಟಿ ಶ್ರುತಿ ಸರಾಗವಾಗಲಿ ಹಾಡುವ ಮುನ್ನ

ಜಗದ ನಿಂದೆ ಅಪಹಾಸ್ಯ ಗಳಿಗೆ ನೊಂದು ಅನುಮಾನಿಸದಿರು
ಜೀವಿಗಳ ಪ್ರೀತಿ ಬೆಸುಗೆ ಗಟ್ಟಿಯಾಗಲಿ ಕೂಡುವ ಮುನ್ನ

ನೆರಳಿರದ ಹಾದಿಯಲಿ ಬದುಕಿನ ಬಂಡಿ ಸಾಗಿದೆ ಅನವರತ
ಬಾಳಿನ ಕಹಿ ನೆನಪ ದಿನಗಳು ಮರೆಯಾಗಲಿ ಕಾಡುವ ಮುನ್ನ

ವಿರಹ ದಳ್ಳುರಿಯಲಿ ನಿತ್ಯ ದಹಿಸುತಿವೆ ಪ್ರೇಮಿಗಳ ಉಸಿರು
ಅನುರಾಗ ಚುಂಬನಕೆ ಹೃದಯ ಹಗುರಾಗಲಿ ಬೇಡುವ ಮುನ್ನ

ಕೋಶ ಕೀಟಕೆ ರೆಕ್ಕೆಗಳ ಹಚ್ಚಿ ಕೊಂಡು ಹಾರುವ ಆತುರ
ಪ್ರಭೆಯ ಮೋಹ ಇರುಳ ಧ್ಯಾನ ದೂರಾಗಲಿ ಹೊರಡುವ ಮುನ್ನ

*************************************************

About The Author

7 thoughts on “ಗಝಲ್”

  1. Prabhavati S Desai,Vijayapur

    ಸಂಪಾದಕರೆ ನನ್ನ ಗಜಲ್ ಪ್ರಕಟಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು

  2. ಶುಭಲಕ್ಷ್ಮಿ ಆರ್ ನಾಯಕ

    ಚೆನ್ನಾಗಿ ಮೂಡಿ ದೆ ತಮ್ಮ ಗಝಲ್ ಮೆಡಮ್.

  3. ಪ್ರಭಾವತಿ ಎಸ್ ದೇಸಾಯಿ ವಿಜಯಪುರ

    ನನ್ನ ಗಜಲ್ ಮೆಚ್ಚಿದ ಸಹೃದಯ ರಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top