ಗಝಲ್
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************
ಗಝಲ್
ಗಝಲ್ ರೇಷ್ಮಾ ಕಂದಕೂರ. ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ. ****************************
ಗಝಲ್
ಗಝಲ್ ಎ.ಹೇಮಗಂಗಾ ಕಡುಗಪ್ಪು ಕುರುಳ ನಡುವೆ ಮೊಗ ಚಂದಿರನಂತೆ ಹೊಳೆದಿದೆ ಗೆಳತಿಬಿರಿದ ಅಧರಗಳ ನಡುವೆ ಮಿಂಚು ನಗು ಹೊರಹೊಮ್ಮಿದೆ ಗೆಳತಿ ಅಪೂರ್ವ ಸೌಂದರ್ಯ ಬಣ್ಣಿಸಲು ಕವಿಯಾಗುವನು ನಿನ್ನ ನಲ್ಲಸೆಳೆವ ಕಾಡಿಗೆ ಕಂಗಳ ಮೇಲಿನ ಹುಬ್ಬು ಕಬ್ಬಿನಂತೆ ಬಾಗಿದೆ ಗೆಳತಿ ಆಗಸದತ್ತ ದಿಟ್ಟಿ ನೆಟ್ಟ ನೋಟದಿ ಅದಾವ ಭಾವ ತುಂಬಿದೆಯೋವಿಚಲಿತಳಾಗದೇ ನೀ ಕುಳಿತ ಭಂಗಿ ಮೋಹಕವಾಗಿ ಕಂಡಿದೆ ಗೆಳತಿ ನಿನ್ನವನ ಚರಣಕೆ ಸಮರ್ಪಿಸಲು ಹೂಗಳ ಗುಚ್ಛ ಹಿಡಿದಿಹೆ ಏನು?ಇಹದ ಅರಿವಿಲ್ಲದೇ ನಗುತಿಹ ಅಭಿಸಾರಿಕೆ ನೀನಾದಂತಿದೆ ಗೆಳತಿ ತುಸು ಹೊತ್ತು […]
ಗಝಲ್ ಜುಗಲ್
ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ […]
ಗಜಲ್
ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ […]
ಗಝಲ್
ಗಝಲ್ ಅನ್ನಪೂರ್ಣಾ ಬೆಜಪ್ಪೆ ಇದ್ದರೂ ನೋವುಗಳು ಹಲವಾರು ನಗುತಿರು ಸಖೀಬಿದ್ದರೂ ಧೃತಿಗೆಡದೆ ಪುಟಿದೆದ್ದು ಸಾಗುತಿರು ಸಖೀ ವಿಶಾಲ ಜಗವಿದು ಅವಕಾಶಗಳಿಗಹುದೇನು ಕೊರತೆವಿಷಮ ಭಾವಗಳಳಿಸಿ ಹೊಸತನಕೆ ತೆರೆಯುತಿರು ಸಖೀ ಮುಂದೆ ಸರಿದಂತೆಲ್ಲ ಜಗ್ಗಲೆತ್ನಿಸುವ ಮನವೆ ಬಹುವಿಲ್ಲಿಹಿಂದೆ ಜಾರದಂತೆ ಸಮಸ್ಥಿತಿಯ ಕಾಯುತಿರು ಸಖೀ ಸೋಲು ಬಂತೆನಲು ಕೊರಗಿ ಹತಾಶೆ ತೋರುವುದೇಕೆಗೆಲುವು ಪಡೆಯುವ ತನಕವೂ ಬಿಡದೆ ಓಡುತಿರು ಸಖೀ ಕ್ಲೇಶ ಕಳೆಯಲು ಅನುವಿಗೆ ವಿಶ್ವಾಸವೇ ಬಲವಲ್ಲವೇನುತೋಷಕಾಗಿ ಕರ್ಮ ಸಾಧನೆಯ ಕಡೆ ನಡೆಯುತಿರು ಸಖೀ ********
ಗಝಲ್
ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ […]
ಗಝಲ್
ಗಝಲ್ ನೂರ್ ಸಾಘರ್ ಹಾದಿಗಳಿಂದ ಹಾದಿಗಳು ಹಾಯಿದಷ್ಟು ಕೈಮರಗಳಿವೆ ಇಲ್ಲಿ ಸಖಿಬೀದಿಗಳಿಂದ ಬೀದಿಗೆ ಬದುಕುಗಳು ಬೆತ್ತಲಾಗಿವೆ ಇಲ್ಲಿ ಸಖಿ ಜಗದ ಒಡಲು ಮನದ ಕಡಲುತಟ್ಟದಿದ್ದರೂ ಮುಟ್ಟದಿದ್ದರೂ ಔರ್ವ ಸ್ಪರ್ಶದಲೆಗಳಿವೆ ಇಲ್ಲಿ ಸಖಿ ಒಂದೇ ಒಂದು ಮಾತಿನ ಶಬ್ದಗಳು ಬಯಲಲಿ ಬಯಲಾಯಿತುಅರಿತು ಅರಿಯದ ಮರೆತು ಮರೆಯದ ಪುರಾವೆಗಳಿವೆ ಇಲ್ಲಿ ಸಖಿ ಬಾಳು ಬಿಕ್ಕಳಿಕೆಯ ಕಥೆಗಳಿವೆ ನೂರಾರು ಅನಾಥದ್ದು ಅನಾತ್ಮದ್ದು ಇನ್ನು…ತಡೆದರೂ ತಡೆಯದ ಪಡೆದರೂ ಪಡೆಯದ ನೋವುಗಳಿವೆ ಇಲ್ಲಿ ಸಖಿ ಕದವಿಲ್ಲದ ಎದೆಯನು ಪದಗಳಿಂದ ಆವರಿಸಲಾಗದುತಬಿದ ತಬ್ಬದ ಬಾಹುಗಳನು ಕಲ್ಪಿಸಲು […]
ಹೇಳದೇ ಹೋಗದಿರು
ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ […]
ಗಝಲ್
ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು […]