Category: ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ […]

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು […]

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ […]

ಗಜಲ್

ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ  ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು  ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, […]

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ […]

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ ನೂರು ಕನಸುಗಳ‌ ಜಾತ್ರೆ ಮಾಡಿಸುವ ಮೋಜಗಾರ ಅವನುಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನುಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನುಕೆಂಡ ಸಂಪಿಗೆ ಘಮ ಹರಡಿ ನಿನ್ನ […]

ಗಜಲ್

ಗಜಲ್ ಪ್ರತಿಮಾ ಕೋಮಾರ ಈರಾಪುರ ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ? ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡುತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ? ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದುತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ? ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ? “ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರುಕಳೆವ […]

ಗಜಲ್‌

ಗಜಲ್‌ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ […]

ಗಜಲ್

ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ‌ ಈ‌ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ‌ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ‌ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ […]

Back To Top