Category: ಗಝಲ್

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಕೊರೆಯುವ ಚಳಿಯಲ್ಲೂ ವಹ್ನಿಯೊಡಲು ದಹಿಸುತ್ತಿದೆ ಸಾಕಿಬಹಿರಂಗದ ತೊಗಲು ಅಂತರಂಗದ ಜ್ವಾಲೆಯಲ್ಲಿ ಮೈ ಕಾಯಿಸುತ್ತಿದೆ ಸಾಕಿ ಹೆಪ್ಪುಗಟ್ಟಿದ್ದ ಹೃದಯ ರಂಧ್ರ ಮುಚ್ಚಿದ್ದ ಕಾಯದ ಬಾಯಿ ತೆರೆದುನರನಾಡಿಯಲ್ಲೂ ಶರವೇಗದಿ ಕಾವು ಮಿಂಚಂತೆ ಸಂಚರಿಸುತ್ತಿದೆ ಸಾಕಿ ರೆಕ್ಕೆ ಮೂಡದ ಹಕ್ಕಿಯ ಕನಸೊಳಗೆ ಮೌನದ ನೀರವತೆ ಮಡುಗಟ್ಟಿದೆಹನಿವ ಮಳೆಯೊಡನೆ ಹರಿವಕಂಬನಿ ಧರೆಯಲಿ ಲೀನವಾಗುತ್ತಿದೆ ಸಾಕಿ ಸಲಿಲದಿಂದ ಬೇರ್ಪಟ್ಟ ಮತ್ಸ್ಯದ ಒದ್ದಾಟದ ಚಡಪಡಿಕೆಯಲಿಜಾತಕಪಕ್ಷಿ ಜೀವಸೆಲೆಗಾಗಿ ಕಾತರಿಸಿ ಜವವ ಕಾಯುತ್ತಿದೆ ಸಾಕಿ ಇರುಳ ತಿಂಗಳ ತೇಜಸ್ಸನ್ನು ಭ್ರಮಿಸಿ ಸ್ಮೃತಿಪಟಲದ ಅಕ್ಷಿಗಳಲ್ಲಿಜಾರಿದ ಅಶ್ರುಬಿಂದುಗಳ […]

ಕಾವ್ಯಯಾನ

ಗಝಲ್ ಸ್ಮಿತಾ ಭಟ್ ಗೂಡಿನಲ್ಲಿ ಕನಸುಗಳು ಆಗಮನಕ್ಕಾಗಿ ಕಾಯುತ್ತಿವೆಗಡಿಯಲ್ಲಿ ಬದುಕುಗಳು ಶಾಂತಿಗಾಗಿ ಕಾಯುತ್ತಿವೆ. ಕುದಿಯುವ ಜ್ವಾಲಾಗ್ನಿ ಸಿಡಿದೇಳುವುದು ಸತ್ಯಮೌನದಲಿ ಜೀವಗಳು ಪ್ರೀತಿಗಾಗಿ ಕಾಯುತ್ತಿವೆ ಗಡಿ ಗೆರೆಗಳು ನೆಮ್ಮದಿಯ ನೀಡಿದ್ದುಂಟೇ ಎಲ್ಲಾದರೂಬಲಿದಾನದ ದೀವಿಗೆಗಳು ಬೆಳಕಿಗಾಗಿ ಕಾಯುತ್ತಿವೆ ಕೋಟೆ ಕಟ್ಟಿ ಆಳಿದವರೆಲ್ಲ ಉಳಿದಿರುವರೇ ಎಲ್ಲಾದರೂಹೆಪ್ಪುಗಟ್ಟಿದ ದ್ವೇಷಗಳು ಸೋಲಿಗಾಗಿ ಕಾಯುತ್ತಿವೆ. ಅಸ್ತ್ರ,ಶಸ್ತ್ರಗಳೇ ಮಾತಿಗಿಳಿಯುತ್ತಿವೆ ಜಗದೊಳಗೆಅಮಾಯಕರ ಉಸಿರು ನಂಬಿಕೆಗಾಗಿ ಕಾಯುತ್ತಿವೆ. ಯದಾ ಯದಾಹಿ ಧರ್ಮಸ್ಯ ಅನ್ನುತ್ತೀಯಲ್ಲೋ “ಮಾಧವ”ಬುವಿಯೊಡಲ ನೋವುಗಳು ನಿನ್ನ ನ್ಯಾಯಕ್ಕಾಗಿ ಕಾಯುತ್ತಿವೆ *********

ಕಾವ್ಯಯಾನ

ಜುಲ್ ಕಾಫಿ಼ಯ ಗಜ಼ಲ್ ಎ.ಹೇಮಗಂಗಾ ಜೀವಸಂಕುಲದ ಉಳಿವಿಗೆಂದು ಜಪವಾಗಬೇಕು ಹಸಿರ ಉಳಿವುಅಸಮತೋಲನದ ಅಳಿವಿಗೆಂದು ತಪವಾಗಬೇಕು ಹಸಿರ ಉಳಿವು ಮಲಿನಗೊಂಡಿವೆ ಮನುಜ ಸ್ವಾರ್ಥಕೆ ಬಾನು, ಬುವಿ , ವಾಯು, ಜಲವೆಲ್ಲಾಪ್ರಕೃತಿದೇವಿ ಮುನಿಯದಿರಲೆಂದು ಧ್ಯೇಯವಾಗಬೇಕು ಹಸಿರ ಉಳಿವು಼ ಬತ್ತುತ್ತಲೇ ಇದೆ ಅಂತರ್ಜಲ ಒತ್ತೊತ್ತಾದ ಕಾಡುಗಳ ಸತತ ಹನನದಿಇರುವ ಅಲ್ಪವ ವೃದ್ಧಿಸಲೆಂದು ಧ್ಯಾನವಾಗಬೇಕು ಹಸಿರ ಉಳಿವು ಅರಿಯದಂತೆ ಕಾಯವ ನಲುಗಿಸಿ ಬಲಿಪಡೆದಿವೆ ಸೋಂಕು , ವಿಷಗಳುಎಲ್ಲರುಸಿರ ಉಳಿಸಲೆಂದು ಕಾಯಕವಾಗಬೇಕು ಹಸಿರ ಉಳಿವು ಕಾಲ ಮಿಂಚಿ ಹೋಗುವ ಮುನ್ನ ಕಾಪಿಡಬೇಕು ಪರಿಸರ ಜತನದಿಬದುಕು […]

ಗಝಲ್

ಗಝಲ್ ಡಾ.ಗೋವಿಂದ ಹೆಗಡೆ ಮಾಸಿಹೋದ ನಗುವಿಗೇಕೆ ಬಣ್ಣ ಮೆತ್ತುವೆಕರಗಿಹೋದ ನಲಿವಿಗೇಕೆ ಬಣ್ಣ ಮೆತ್ತುವೆ ದಾರಿ ನಡೆ ನಡೆಯುತ್ತ ಸರಿಯಿತು ಕಾಲಕಂದಿಹೋದ ಕೆನ್ನೆಗೇಕೆ ಬಣ್ಣ ಮೆತ್ತುವೆ ಏರುವ ಖುಷಿ ಮುಗಿದು ಇಳಿಜಾರು ಈಗಕಾಂತಿ ಕಳೆದ ಕಣ್ಣಿಗೇಕೆ ಬಣ್ಣ ಮೆತ್ತುವೆ ಯಾವಾಗ ಅದು ಎದೆಯಲ್ಲಿ ಬೆಳಕಾಡಿದ್ದುಅರ್ಥ ಕಳೆದ ಮಾತಿಗೇಕೆ ಬಣ್ಣ ಮೆತ್ತುವೆ ಮಾತು ಮನಸು ಕೃತಿಗಳಲ್ಲಿ ಮೇಳವೆಲ್ಲಿದೆಋಜುತೆ ಮರೆತ ನಡತೆಗೇಕೆ ಬಣ್ಣ ಮೆತ್ತುವೆ ಹೆಳವ ಹೆಜ್ಜೆಗಳಲಿ ಈಗ ಸಾಗಿದೆ ಪಯಣರೆಕ್ಕೆ ಸವೆದ ಹಕ್ಕಿಗೇಕೆ ಬಣ್ಣ ಮೆತ್ತುವೆ ಯಾವ ರಂಗು ಬಳಿದರೇನು […]

ಗಝಲ್

ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ […]

Back To Top