Category: ಗಝಲ್

ಗಝಲ್

ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************

ಗಝಲ್

ಗಝಲ್ ರತ್ನರಾಯಮಲ್ಲ ಆ ಕಡೆ ಭಜನೆಯ ನಾದವು ಜಿನುಗುತಿದೆಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ ಸಂಬಂಧಗಳು ಗೋಳಾಡುತಿವೆ ನೆನೆ ನೆನೆದುಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿಕುಣಿಯ ಮುಖ ಕಾಣದೆ ಗುಂಪು ಚದುರುತಿದೆ **********************

ಗಝಲ್

ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು […]

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************

ಗಝಲ್

ಗಝಲ್ ರೇಷ್ಮಾ ಕಂದಕೂರ. ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ. ****************************

ಗಝಲ್

ಗಝಲ್ ಎ.ಹೇಮಗಂಗಾ ಕಡುಗಪ್ಪು ಕುರುಳ ನಡುವೆ ಮೊಗ ಚಂದಿರನಂತೆ ಹೊಳೆದಿದೆ ಗೆಳತಿಬಿರಿದ ಅಧರಗಳ ನಡುವೆ ಮಿಂಚು ನಗು ಹೊರಹೊಮ್ಮಿದೆ ಗೆಳತಿ ಅಪೂರ್ವ ಸೌಂದರ್ಯ ಬಣ್ಣಿಸಲು ಕವಿಯಾಗುವನು ನಿನ್ನ ನಲ್ಲಸೆಳೆವ ಕಾಡಿಗೆ ಕಂಗಳ ಮೇಲಿನ ಹುಬ್ಬು ಕಬ್ಬಿನಂತೆ ಬಾಗಿದೆ ಗೆಳತಿ ಆಗಸದತ್ತ ದಿಟ್ಟಿ ನೆಟ್ಟ ನೋಟದಿ ಅದಾವ ಭಾವ ತುಂಬಿದೆಯೋವಿಚಲಿತಳಾಗದೇ ನೀ ಕುಳಿತ ಭಂಗಿ ಮೋಹಕವಾಗಿ ಕಂಡಿದೆ ಗೆಳತಿ ನಿನ್ನವನ ಚರಣಕೆ ಸಮರ್ಪಿಸಲು ಹೂಗಳ ಗುಚ್ಛ ಹಿಡಿದಿಹೆ ಏನು?ಇಹದ ಅರಿವಿಲ್ಲದೇ ನಗುತಿಹ ಅಭಿಸಾರಿಕೆ ನೀನಾದಂತಿದೆ ಗೆಳತಿ ತುಸು ಹೊತ್ತು […]

ಗಝಲ್ ಜುಗಲ್

ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ […]

ಗಜಲ್

ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ […]

Back To Top